ಇಂದಿನ(ಮೇ 12) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ – ಕಾಳುಮೆಣಸು, ರಬ್ಬರ್ ಮತ್ತು ಅಡಿಕೆಯ ಉಪ ಉತ್ಪನ್ನಗಳ ಧಾರಣೆಯಲ್ಲಿ ಏರಿಕೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 12 ಮೇ 2026
ವಾರ : ಮಂಗಳವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಮೇ 12) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 445 ರಿಂದ 475
ಹಳೆ ಅಡಿಕೆ : 450 ರಿಂದ 550
ಡಬಲ್ ಚೋಲ್ : 450 ರಿಂದ 550
ಫಟೋರಾ : 355 ರಿಂದ 405
ಉಳ್ಳಿಗಡ್ಡೆ : 250 ರಿಂದ 300
ಕರಿಗೋಟು : 265 ರಿಂದ 295
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಆಧಾರದಲ್ಲಿ ದರವನ್ನು ನಿಗದಿಪಡಿಸಲಾಗುವುದು)
ಇಂದು(ಮೇ 12) ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಉಳ್ಳಿಗಡ್ಡೆ ಮತ್ತು ಕರಿಗೋಟು ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡುಬಂದಿದೆ. ಉಳಿದ ಮುಖ್ಯ ಅಡಿಕೆ ವಿಧಗಳು ನಿನ್ನೆಯ(ಮೇ 11) ಬೆಲೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಕರಿಗೋಟು ಜಿಗಿತ : ಕರಿಗೋಟು ಅಡಿಕೆ ದರದಲ್ಲಿ ಇಂದು ಗರಿಷ್ಠ ₹10 ರಷ್ಟು ಏರಿಕೆ ಕಂಡುಬಂದಿದ್ದು, ₹285 ರಿಂದ ₹295ಕ್ಕೆ ತಲುಪಿದೆ.
ಉಳ್ಳಿಗಡ್ಡೆ ಚೇತರಿಕೆ : ಉಳ್ಳಿಗಡ್ಡೆ ಅಡಿಕೆ ದರವು ₹300ರ ಗಡಿ ತಲುಪುವ ಮೂಲಕ ಪ್ರತಿ ಕೆಜಿಗೆ ₹5 ರಷ್ಟು ಏರಿಕೆ ಕಂಡಿದೆ.

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 590 ರಿಂದ 690
ಹಸಿ ಕೊಕ್ಕೋ : 75 ರಿಂದ 105
ಒಣ ಕೊಕ್ಕೋ : 290 ರಿಂದ 320
ಕೊಬ್ಬರಿ : 130 ರಿಂದ 158
(ಕಾಳುಮೆಣಸಿನ ತೇವಾಂಶ ಮತ್ತು ಲೀಟರ್ ತೂಕದ ಆಧಾರದಲ್ಲಿ ದರದಲ್ಲಿ ವ್ಯತ್ಯಾಸವಾಗುವುದು)
(ಮಿಲ್ಲಿಂಗ್ ಕ್ವಾಲಿಟಿ ಕೊಬ್ಬರಿಯನ್ನು ಮಾತ್ರ ಖರೀದಿ ಮಾಡಲಾಗುವುದು)
ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಇಂದು(ಮೇ 12) ಕಾಳುಮೆಣಸು ತನ್ನ ಏರುಗತಿಯನ್ನು ಮುಂದುವರಿಸಿದೆ. ಕೊಕ್ಕೋ ಮತ್ತು ಕೊಬ್ಬರಿ ಬೆಲೆಗಳು ನಿನ್ನೆಯ(ಮೇ 11) ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿವೆ.
ಕಾಳುಮೆಣಸು ಮುನ್ನಡೆ : ನಿನ್ನೆ(ಮೇ 11) ಗರಿಷ್ಠ ₹685 ಇದ್ದ ಕಾಳುಮೆಣಸಿನ ಬೆಲೆ ಇಂದು(ಮೇ 12) ₹690 ಕ್ಕೆ ಏರಿಕೆಯಾಗಿದೆ.
ಸ್ಥಿರತೆ : ಹಸಿ ಕೊಕ್ಕೋ, ಒಣ ಕೊಕ್ಕೋ ಮತ್ತು ಕೊಬ್ಬರಿ ಬೆಲೆಗಳು ನಿನ್ನೆಯ(ಮೇ 11) ದರದಲ್ಲೇ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿವೆ.

ರಬ್ಬರ್ ಧಾರಣೆ
ಗ್ರೇಡ್ : 256
ಲಾಟ್ : 215
ಸ್ಕ್ರ್ಯಾಪ್ ಪ್ರಥಮ ದರ್ಜೆ : 151.5
ಸ್ಕ್ರ್ಯಾಪ್ ದ್ವಿತೀಯ ದರ್ಜೆ : 142.5
ಇಂದು(ಮೇ 12) ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಎಲ್ಲಾ ವಿಭಾಗಗಳಲ್ಲಿ ಸಕಾರಾತ್ಮಕ ಅಲೆ ಕಂಡುಬಂದಿದ್ದು, ಬೆಲೆಗಳು ಏರಿಕೆ ಕಂಡಿವೆ.
ಗ್ರೇಡ್ ರಬ್ಬರ್ ಮುನ್ನಡೆ : ನಿನ್ನೆಯ(ಮೇ 11) ದರಕ್ಕೆ ಹೋಲಿಸಿದರೆ ಇಂದು(ಮೇ 12) ಗ್ರೇಡ್ ರಬ್ಬರ್ ಪ್ರತಿ ಕೆಜಿಗೆ ₹1 ರಷ್ಟು ಏರಿಕೆ ಕಂಡು ₹256 ಕ್ಕೆ ತಲುಪಿದೆ.
ಸ್ಕ್ರ್ಯಾಪ್ ರಬ್ಬರ್: ಸ್ಕ್ರ್ಯಾಪ್ ರಬ್ಬರ್‌ನ ಎರಡೂ ವಿಭಾಗಗಳಲ್ಲಿ ನಿನ್ನೆಯ(ಮೇ 11) ದರಕ್ಕೆ ಹೋಲಿಸಿದರೆ ಇಂದು(ಮೇ 12) ತಲಾ 50 ಪೈಸೆ ಏರಿಕೆಯಾಗಿದೆ.
ಸ್ಥಿರತೆ: ಲಾಟ್ ರಬ್ಬರ್ ಬೆಲೆಯು ನಿನ್ನೆಯ(ಮೇ 11) ₹215 ದರದಲ್ಲೇ ಮುಂದುವರಿದಿದೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading