ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಆದಾಯ 167 ಕೋಟಿ 89 ಲಕ್ಷ ರೂಪಾಯಿ ; ಸತತ 15ನೇ ವರ್ಷವೂ ಶ್ರೀ ದೇವಳ ಆದಾಯದಲ್ಲಿ ನಂ.1

ಸುಬ್ರಹ್ಮಣ್ಯ : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ 167 ಕೋಟಿ 89 ಲಕ್ಷದ 09 ಸಾವಿರದ 080.77 ರೂ ಆದಾಯ ಗಳಿಸಿದೆ. 2025 ಎಪ್ರಿಲ್ 1ರಿಂದ 2026 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ ಈ ಆದಾಯ ಲಭಿಸಿದೆ. ಇದರಲ್ಲಿ ಒಟ್ಟು 85,20,14,531.42 ರೂ ಖರ್ಚಾಗಿದೆ. 2024-2025ನೇ ಸಾಲಿನಲ್ಲಿ 155 ಕೋಟಿ ರೂ ಆದಾಯ ಗಳಿಸಿತ್ತು. ಈ ಬಾರಿ 167,89,09,080.77 ರೂ ಆದಾಯ ಗಳಿಸುವ ಮೂಲಕ ಈ ಆರ್ಥಿಕ ವರ್ಷದಲ್ಲಿ ಕಳೆದ ಆರ್ಥಿಕ ವರ್ಷದಿಂದ ಸುಮಾರು ರೂ.12 ಕೋಟಿ ಅಧಿಕ ಆದಾಯ ಗಳಿಸಿದೆ. ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯವು ಬರುತ್ತದೆ. 
ಪ್ರಪ್ರಥಮ ಬಾರಿಗೆ 167 ಕೋಟಿ ಗೂ ಮಿಕ್ಕಿ ಆದಾಯ : ಗುತ್ತಿಗೆಗಳಿಂದ 2,53,09,230.00 ರೂ, ಧಾನ್ಯಗಳ ಇಳುವರಿ ಮತ್ತು ತೋಟದ ಉತ್ಪನ್ನದಿಂದ 10,50,323.00 ರೂ, ಕಟ್ಟಡ ಮತ್ತು ಅಂಗಡಿಗಳ ಬಾಡಿಗೆಯಿಂದ 94,46,470.00 ರೂ, ಕಾಣಿಕೆಯಿಂದ 5,47,43,244.45 ರೂ, ಇ ಹುಂಡಿಯಿಂದ 38,01,676.80 ರೂ, ಕಾಣಿಕೆ ಹುಂಡಿಯಿಂದ 24,69,63,576.00, ಹರಿಕೆ ಸೇವೆಗಳಿಂದ 64,08,90,940.51 ರೂ, ಅನುದಾನದಿಂದ ರೂ.1,67,956.00, ಹೂಡಿಕೆಯಿಂದ ಬಂದ ಬಡ್ಡಿ 49,11,07,412, ಉಳಿತಾಯ ಖಾತೆ ಹಾಗೂ ಇತರ ಬಡ್ಡಿ 41,80,588.00, ಸ್ವೀಪ್ ವ್ಯವಹರಣೆಯಿಂದ ಬಂದ ಬಡ್ಡಿ 12,90,390.00 ರೂ, ಇತರ ಬಾಬ್ತುಗಳು 3,20,31,937.00 ರೂ, ಛತ್ರ ಸಂರಕ್ಷಣಾ ವಂತಿಗೆ 6,93,66,026.00 ರೂ, ಅನ್ನಸಂತರ್ಪಣೆ ನಿಧಿಯಿಂದ ರೂ.9,14,71,606.01, ಅಭಿವೃದ್ದಿ ನಿಧಿ 14,17,284.00 ರೂ, ಶಾಶ್ವತ ಸೇವಾ ಮೂಲಧನ ರೂ.56,70,421 ಹೀಗೆ ಒಟ್ಟು 167ಕೋ.89ಲಕ್ಷದ 09 ಸಾವಿರದ 080.77 ರೂ ಆದಾಯ ಶ್ರೀ ದೇವಳಕ್ಕೆ ಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading