“ಮಾರುಕಟ್ಟೆ ರೌಂಡ್ ಅಪ್” – ಸೋಮವಾರದಿಂದ ಶನಿವಾರದ ವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ ; ಈ ವಾರ(ಮೇ.04 ರಿಂದ ಮೇ.09) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ವಿವರವಾಗಿ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದು, ಈ ವಾರ ಮೇ.04 ಸೋಮವಾರದಿಂದ ಮೇ.09 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಪ್ರಾರಂಭದಲ್ಲಿ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ಗಮನಿಸುತ್ತಾ ಹೋಗುವುದಾದರೆ ಈ ವಾರದ ಆರಂಭದಲ್ಲಿ ಅಂದರೆ ಮೇ.04 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 445 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 450 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 450 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 355 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 240 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 245 ರಿಂದ ಗರಿಷ್ಠ 275 ರೂಪಾಯಿ ಇತ್ತು. ಮೇ.05 ಮಂಗಳವಾರದಂದು ಹಾಗೂ ಮೇ.06 ಬುಧವಾರದಂದು ಕೂಡ ಅಡಿಕೆಯ ಎಲ್ಲಾ ಶ್ರೇಣಿಗಳ ಧಾರಣೆಗಳಲ್ಲೂ ಯಾವುದೇ ಏರಿಳಿತವಿಲ್ಲದೇ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು, ಆದರೆ ಮೇ.07 ಗುರುವಾರದಂದು ಕರಿಗೋಟು ಧಾರಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ವಾರದ ಪ್ರಾರಂಭದಿಂದ ಮೂರು ದಿನಗಳ ಕಾಲ ಗರಿಷ್ಠ 275 ರೂಪಾಯಿ ಇದ್ದ ಕರಿಗೋಟು ಅಡಿಕೆಯ ಧಾರಣೆಯು ಗುರುವಾರದಂದು ಪ್ರತೀ ಕೆಜಿಗೆ 10 ರೂಪಾಯಿಗಳಷ್ಟು ಏರಿಕೆ ಕಂಡು 285 ರೂಪಾಯಿಗಳಿಗೆ ತಲುಪಿತ್ತು. ಇನ್ನು ಮೇ.08 ಶುಕ್ರವಾರದಂದು ಹಾಗೂ ವಾರದ ಕೊನೆಯ ದಿನವಾದ ಮೇ.09 ಶನಿವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಯ ವಿವಿಧ ಶ್ರೇಣಿಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್, ಫಟೋರಾ, ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲದೇ ಸ್ಥಿರವಾಗಿ ನಿಂತಿದ್ದವು. ಅಂತಿಮವಾಗಿ ವಾರದ ಕೊನೆಯಲ್ಲಿ ಹೊಸ ಅಡಿಕೆ ಕನಿಷ್ಠ 445 ರಿಂದ ಗರಿಷ್ಠ 475 ರೂಪಾಯಿ, ಹಳೆ ಅಡಿಕೆ ಕನಿಷ್ಠ 450 ರಿಂದ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 450 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 355 ರಿಂದ ಗರಿಷ್ಠ 405 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 240 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 255 ರಿಂದ ಗರಿಷ್ಠ 285 ರೂಪಾಯಿಗಳಲ್ಲಿ ನಿಂತಿತ್ತು.

ಮುಂದೆ ನಾವು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.04 ಸೋಮವಾರದಂದು ಕಾಳುಮೆಣಸು ಕನಿಷ್ಠ 575 ರಿಂದ ಗರಿಷ್ಠ 675 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 285 ರಿಂದ ಗರಿಷ್ಠ 315 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 150 ರಿಂದ ಗರಿಷ್ಠ 160 ರೂಪಾಯಿ ಇತ್ತು. ಮೇ.05 ಮಂಗಳವಾರದಂದು ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳು ಬದಲಾಗದೇ ಧೃಢವಾಗಿದ್ದರೂ ಕೊಬ್ಬರಿ ಧಾರಣೆಯಲ್ಲಿ ಅಲ್ಪ ಮಟ್ಟದ ಇಳಿಕೆ ಕಂಡುಬಂದಿದ್ದು, ಸೋಮವಾರದಂದು(ಮೇ.04) 160 ರೂಪಾಯಿ ಇದ್ದ ಕೊಬ್ಬರಿಯ ಗರಿಷ್ಠ ಧಾರಣೆಯು ಮಂಗಳವಾರದಂದು 158 ರೂಪಾಯಿಗೆ ಕುಸಿದಿದ್ದು, ಕನಿಷ್ಠ ದರವು 150 ರೂಪಾಯಿಯಿಂದ ನೇರವಾಗಿ 130 ರೂಪಾಯಿಗೆ ಇಳಿಕೆ ಕಂಡಿತ್ತು. ಮೇ.06 ಬುಧವಾರದಂದು ಕಾಳುಮೆಣಸು ಧಾರಣೆಯಲ್ಲಿ 5 ರೂಪಾಯಿ ಇಳಿಕೆ ಕಂಡುಬಂದಿದ್ದು, ಮಂಗಳವಾರ(ಮೇ.05) ಗರಿಷ್ಠ 675 ರೂಪಾಯಿ ಇದ್ದ ಕಾಳುಮೆಣಸಿನ ಧಾರಣೆಯು ಮೇ.06 ರಂದು 670 ರೂಪಾಯಿಗೆ ಇಳಿಕೆ ಕಂಡಿತ್ತು. ಆದರೆ ಕೊಬ್ಬರಿ ಮತ್ತು ಕೊಕ್ಕೋ ಬೆಳೆಗಳ ಧಾರಣೆಗಳು ಯಾವುದೇ ಬದಲಾವಣೆ ಇಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಮೇ.07 ಗುರುವಾರದಂದು ಕಾಳುಮೆಣಸು ಧಾರಣೆಯು ಮತ್ತೆ ಏರಿಕೆಯ ಹಾದಿಗೆ ಮರಳಿದ್ದು, ಹಿಂದಿನ ದಿವಸ ಗರಿಷ್ಠ 670 ರೂಪಾಯಿಗೆ ಕುಸಿದಿದ್ದ ಕಾಳುಮೆಣಸಿನ ಧಾರಣೆಯು 5 ರೂಪಾಯಿ ಏರಿಕೆ ಕಂಡು 675ರ ಗಡಿಗೆ ತಲುಪಿತ್ತು. ಉಳಿದಂತೆ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಯಾವುದೇ ಬದಲಾವಣೆ ಕಾಣದೇ ಸ್ಥಿರವಾಗಿದ್ದವು. ಮೇ.08 ಶುಕ್ರವಾರದಂದು ಕಾಳುಮೆಣಸು, ಹಸಿ ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳು ಸ್ಥಿರವಾಗಿದ್ದು, ಒಣ ಕೊಕ್ಕೋ ಧಾರಣೆಯಲ್ಲಿ ಚೇತರಿಕೆ ಕಂಡುಬಂದಿದ್ದು, ವಾರದ ಪ್ರಾರಂಭದಿಂದ ಗರಿಷ್ಠ 315 ರೂಪಾಯಿ ಇದ್ದ ಒಣ ಕೊಕ್ಕೋ ಧಾರಣೆಯು 5 ರೂಪಾಯಿ ಏರಿಕೆ ಕಂಡು 320 ರೂಪಾಯಿಗೆ ತಲುಪಿತ್ತು. ಇನ್ನು ವಾರದ ಕೊನೆಯ ದಿನವಾದ ಮೇ.09 ಶನಿವಾರದಂದು ಕಾಳುಮೆಣಸಿನ ಧಾರಣೆಯಲ್ಲಿ 5 ರೂಪಾಯಿ ಏರಿಕೆ ಕಂಡುಬಂದಿದ್ದು, ಹಿಂದಿನ ದಿವಸ 675 ರೂಪಾಯಿ ಇದ್ದ ಕಾಳುಮೆಣಸಿನ ಗರಿಷ್ಠ ಧಾರಣೆಯು ಮೇ.09 ರಂದು 680 ರೂಪಾಯಿಗೆ ಏರಿಕೆ ಕಂಡಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಕಾಳುಮೆಣಸು ಕನಿಷ್ಠ 580 ರಿಂದ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 130 ರಿಂದ ಗರಿಷ್ಠ 158 ರೂಪಾಯಿಗಳಲ್ಲಿ ನಿಂತಿದ್ದವು.

ಇನ್ನು ಕೊನೆಯದಾಗಿ ನಾವು ಈ ವಾರದ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಮೇ.04 ಸೋಮವಾರದಂದು ಗ್ರೇಡ್ ರಬ್ಬರ್ 246 ರೂಪಾಯಿ, ಲಾಟ್ ರಬ್ಬರ್ 211 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 149 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 140 ರೂಪಾಯಿ ಇತ್ತು. ಮೇ.05 ಮಂಗಳವಾರದಂದು ಗ್ರೇಡ್ ರಬ್ಬರ್ ಧಾರಣೆಯಲ್ಲಿ ಅಲ್ಪ ಏರಿಕೆ ಕಂಡುಬಂದಿದ್ದು, ಪ್ರತೀ ಕೆಜಿಗೆ 1 ರೂಪಾಯಿಯಷ್ಟು ಏರಿಕೆಯಾಗಿ 247 ರೂಪಾಯಿಗೆ ತಲುಪಿದ್ದು, ಉಳಿದಂತೆ ಲಾಟ್ ಮತ್ತು ಸ್ಕ್ರ್ಯಾಪ್ ರಬ್ಬರ್ ಗಳ ಧಾರಣೆಗಳು ಸ್ಥಿರವಾಗಿದ್ದವು. ಮೇ.06 ಬುಧವಾರದಂದು ರಬ್ಬರ್ ಮಾರುಕಟ್ಟೆಯು ಸಂಪೂರ್ಣ ಸ್ಥಿರವಾಗಿದ್ದು, ಮೇ.07 ಗುರುವಾರದಂದು ಎಲ್ಲಾ ವರ್ಗಗಳ ರಬ್ಬರ್ ಧಾರಣೆಯಲ್ಲೂ ಏರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಧಾರಣೆಯಲ್ಲಿ 2 ರೂಪಾಯಿಗಳಷ್ಟು ಏರಿಕೆ ಕಂಡು 249 ರೂಪಾಯಿಗೆ ತಲುಪಿದ್ದು, ಲಾಟ್ ಮತ್ತು ಸ್ಕ್ರ್ಯಾಪ್ ರಬ್ಬರ್ ಧಾರಣೆಗಳಲ್ಲೂ ತಲಾ 1 ರೂಪಾಯಿ ಏರಿಕೆ ದಾಖಲಾಗಿತ್ತು. ಮೇ.08 ಶುಕ್ರವಾರದಂದು ರಬ್ಬರ್ ನ ಎಲ್ಲಾ ವಿಭಾಗಗಳಲ್ಲೂ ಮತ್ತೆ ಏರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಕೆಜಿಗೆ 1 ರೂಪಾಯಿ ಏರಿಕೆ ಕಂಡು 251 ರೂಪಾಯಿಗೆ ತಲುಪಿದರೆ ಲಾಟ್ ಮತ್ತು ಸ್ಕ್ರ್ಯಾಪ್ ವಿಭಾಗಗಳಲ್ಲೂ ತಲಾ 1 ರೂಪಾಯಿಗಳಷ್ಟು ಚೇತರಿಕೆ ಕಂಡುಬಂದಿತ್ತು. ಇನ್ನು ವಾರದ ಕೊನೆಯ ದಿನವಾದ ಮೇ.09 ಶನಿವಾರದಂದು ಗ್ರೇಡ್ ರಬ್ಬರ್ ಧಾರಣೆಯಲ್ಲಿ ಭರ್ಜರಿ ಏರಿಕೆ ದಾಖಲಾಗಿದ್ದು, ಮೇ.08ರಂದು 251 ರೂಪಾಯಿ ಇದ್ದ ಗ್ರೇಡ್ ರಬ್ಬರ್ ಧಾರಣೆಯು ಮೇ.09ರಂದು 254 ರೂಪಾಯಿಗೆ ಏರಿಕೆ ಕಂಡಿದ್ದು, ಲಾಟ್ ರಬ್ಬರ್ ಧಾರಣೆಯಲ್ಲೂ ಅಲ್ಪ ಏರಿಕೆ ಕಂಡುಬಂದಿದ್ದು, ಸ್ಕ್ರ್ಯಾಪ್ ರಬ್ಬರ್ ಧಾರಣೆ ಹಿಂದಿನ ದಿನದ ಧಾರಣೆಯಲ್ಲೇ ಸ್ಥಿರವಾಗಿ ನಿಂತಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಗ್ರೇಡ್ ರಬ್ಬರ್ 254 ರೂಪಾಯಿ, ಲಾಟ್ ರಬ್ಬರ್ 213.5 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 151 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 142 ರೂಪಾಯಿಗೆ ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಎಲ್ಲಾ ವಿಭಾಗಗಳ ಧಾರಣೆಗಳು ಕೂಡ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ವಾರದ ಮಧ್ಯದಲ್ಲಿ ಕರಿಗೋಟು ಧಾರಣೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿತ್ತು. ಅದೇ ರೀತಿ ವಾರದ ಆರಂಭದಲ್ಲೇ ಕೊಬ್ಬರಿ ಧಾರಣೆಯು ಇಳಿಕೆಯತ್ತ ಸಾಗಿದರೆ ಕಾಳುಮೆಣಸು ಧಾರಣೆಯು ಒಮ್ಮೆ ಇಳಿಕೆಯತ್ತ ಸಾಗಿದಂತೆ ಭಾಸವಾದರೂ ವಾರದ ಕೊನೆಯಲ್ಲಿ ಮತ್ತೆ ಏರಿಕೆಯ ಹಾದಿಯತ್ತ ಮರಳಿತ್ತು. ಹಸಿ ಕೊಕ್ಕೋ ಧಾರಣೆಯು ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ಒಣ ಕೊಕ್ಕೋ ಧಾರಣೆಯು ವಾರದ ಕೊನೆಯಲ್ಲಿ ಏರಿಕೆಯತ್ತ ಸಾಗಿತ್ತು. ಕೊನೆಯದಾಗಿ ರಬ್ಬರ್ ಧಾರಣೆಯು ಕೂಡ ವಾರದ ಪ್ರಾರಂಭದಲ್ಲೇ ಏರಿಕೆಯ ಹಾದಿಯನ್ನು ಹಿಡಿದಿದ್ದು, ವಾರದ ಕೊನೆಯವರೆಗೂ ನಿರಂತರವಾಗಿ ಏರಿಕೆಯ ಹಾದಿಯಲ್ಲೇ ಸಾಗಿತ್ತು. ಮುಂದಿನ ವಾರ ಏನಾಗುತ್ತದೋ ಕಾದುನೋಡಬೇಕಿದೆ… ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ದರಗಳು ಕ್ಯಾಂಪ್ಕೋ(CAMPCO) ಸಂಸ್ಥೆಯ ಅಧಿಕೃತ ಮೂಲಗಳಿಂದ ಸಂಗ್ರಹಿಸಲಾದ ಕಳೆದ ವಾರದ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆಯ ಧಾರಣೆಯು ಪ್ರತಿದಿನದ ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ಕ್ಷಣ ಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ರೈತರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading