ಎಸ್.ಎಸ್. ಎಲ್.ಸಿ. ಫಲಿತಾಂಶ ಪ್ರಕಟ – ಸುಳ್ಯ ತಾಲೂಕಿಗೆ ಅತ್ಯುತ್ತಮ ಶೇ.99.10 ಫಲಿತಾಂಶ

ರಾಜ್ಯಕ್ಕೆ ದ.ಕ. ಜಿಲ್ಲೆ ಪ್ರಥಮ ದ.ಕ. ಜಿಲ್ಲೆಗೆ ಸುಳ್ಯ ತಾಲೂಕು ದ್ವಿತೀಯ

. . . . . . . . .

ತಾಲೂಕಿನ 30 ಪ್ರೌಢಶಾಲೆಗಳಿಗೆ ಶೇ.100 ಫಲಿತಾಂಶ

. . . . . . .

ತಾಲೂಕಿನಲ್ಲಿ ಕೇವಲ 16 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣ

2025 – 26ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶವು ಎ.23ರಂದು ಮಧ್ಯಾಹ್ನ ವೆಬ್ಸೈಟ್ ಮೂಲಕ ಪ್ರಕಟಗೊಂಡಿದ್ದು, ಸುಳ್ಯ ತಾಲೂಕಿಗೆ ಈ ಬಾರಿ ಅತ್ಯುತ್ತಮ ಶೇ.99.10 ಫಲಿತಾಂಶ ದಾಖಲಾಗಿದೆ. ಕರ್ನಾಟಕ ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ತಾಲೂಕಿನಲ್ಲಿ ಈ ಬಾರಿ ಕೇವಲ 16 ಮಂದಿ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣಗೊಂಡಿದ್ದಾರೆ ಎಂದು ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್. ಹರಗಿ ಅವರು ತಿಳಿಸಿದ್ದಾರೆ.

ಸುಳ್ಯ ತಾಲೂಕಿನಲ್ಲಿ ಒಟ್ಟು 37 ಪ್ರೌಢಶಾಲೆಗಳ ಪೈಕಿ 30 ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಳ್ಳುವ ಮೂಲಕ ತಾಲೂಕು ಈ ಬಾರಿ ಅತ್ಯುತ್ತಮ ಶೇ.99.10 ಫಲಿತಾಂಶ ಪಡೆದುಕೊಂಡಿದೆ.

ತಾಲೂಕಿನ ಒಟ್ಟು 17 ಸರ್ಕಾರಿ ಪ್ರೌಢಶಾಲೆಗಳ ಪೈಕಿ 13 ಸರ್ಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ, ಒಟ್ಟು 7 ಅನುದಾನಿತ ಪ್ರೌಢಶಾಲೆಗಳ ಪೈಕಿ 4 ಅನುದಾನಿತ ಪ್ರೌಢಶಾಲೆಗಳು ಶೇ.100 ಫಲಿತಾಂಶ ಹಾಗೂ ತಾಲೂಕಿನ ಒಟ್ಟು 13 ಅನುದಾನ ರಹಿತ ಪ್ರೌಢಶಾಲೆಗಳಿದ್ದು, ಎಲ್ಲಾ 13 ಅನುದಾನ ರಹಿತ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಾಲ್ಸೂರು ಗ್ರಾಮದ ಮಹಾಬಲಡ್ಕದ ದಾಮೋದರ ಎಂ. ಹಾಗೂ ಶ್ರೀಮತಿ ಶೀಲಾವತಿ ದಂಪತಿಯ ಪುತ್ರಿ ಅಶ್ವಿತಾ ಎಂ.ಡಿ. 619 ಅಂಕ ಪಡೆದು ತಾಲೂಕಿಗೆ ಟಾಪರ್ ಆಗಿದ್ದು, ರಾಜ್ಯಕ್ಕೆ 7ನೇ ಸ್ಥಾನ ಪಡೆದುಕೊಂಡಿದ್ದಾರೆ.

ಸುಳ್ಯದ ಕೊಡಿಯಾಲಬೈಲ್ ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢಶಾಲೆಯ ವಿದ್ಯಾರ್ಥಿನಿ, ಉಬರಡ್ಕ ಮಿತ್ತೂರು ಗ್ರಾಮದ ಪಾನತ್ತಿಲ ಭರತ್ ಕುಮಾರ್ ಪಿ. ಹಾಗೂ ಶ್ರೀಮತಿ ಜಯಶೀಲ ಪಿ.ಬಿ‌. ದಂಪತಿಯ ಪುತ್ರಿ ರಿಶಿತಾ ಪಿ.ಬಿ. 617 ಅಂಕ ಪಡೆದು ತಾಲೂಕಿನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಆಲೆಟ್ಟಿ ಗ್ರಾಮದ ಅರಂಬೂರಿನ ರಾಜಶೇಖರ ಹಾಗೂ ಶ್ರೀಮತಿ ಶಶಿಕಲಾ ಎನ್. ದಂಪತಿಯ ಪುತ್ರಿ ಸ್ನೇಹ ಆರ್. 614 ಅಂಕದೊಂದಿಗೆ ತಾಲೂಕಿಗೆ ತೃತೀಯ ಸ್ಥಾನ ಪಡೆದಿದ್ದಾರೆ‌.

ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಸುಳ್ಯದ ಸತೀಶ್ ನಾಯಕ್ ಹಾಗೂ ಶ್ರೀಮತಿ ಮಧುರಜ್ಯೋತಿ ದಂಪತಿಯ ಪುತ್ರ ಸುಶಾಂತ್ ನಾಯಕ್ ಎಸ್. 613 ಅಂಕ, ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅರಂತೋಡು ಗ್ರಾಮದ ಉಳುವಾರು ಬಂಟೋಡಿಯ ದೇವರಾಜ್ ಯು.ಬಿ. ಹಾಗೂ ಶ್ರೀಮತಿ ವೇದಾಮಣಿ ದಂಪತಿಯ ಪುತ್ರಿ ಮನುಜ್ಞ ಯು.ಬಿ. 613 ಅಂಕ,
ಸುಳ್ಯದ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಳ್ಯದ ನಾವೂರಿನ ಶೇಕ್ ಮಹಮ್ಮದ್ ರಾಫಿ ದಂಪತಿಯ ಪುತ್ರಿ ಮರಿಯಂ ರಿಫಾ 612 ಅಂಕ, ಜಾಲ್ಸೂರು ವಿನೋಬನಗರ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ , ಬೆಳ್ಳಿಪ್ಪಾಡಿಯ ಪ್ರಕಾಶ್ ಹಾಗೂ ವಿವೇಕಾನಂದ ಶಾಲಾ ಶಿಕ್ಷಕಿ ಶ್ರೀಮತಿ ವಿದ್ಯಾಲಕ್ಷ್ಮಿ ದಂಪತಿಯ ಪುತ್ರ ತುಷಾರ್ 612 ಅಂಕ,
ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಸುಳ್ಯದ ದೇವಸ್ಯ ನಿವಾಸಿ ವಿಜಯಕುಮಾರ್ ಕೆ. ಹಾಗೂ ಶ್ರೀಮತಿ ಜಾನಕಿ ಕೆ. ದಂಪತಿಯ ಪುತ್ರಿ ಭೂಮಿಕಾ ಕೆ.ವಿ. 610 ಅಂಕ ಪಡೆದುಕೊಂಡಿದ್ದಾರೆ.

ಶೇ.100 ಫಲಿತಾಂಶ ಪಡೆದ ಸರಕಾರಿ ಶಾಲೆಗಳು

ಸುಳ್ಯ ತಾಲೂಕಿನಲ್ಲಿ ಒಟ್ಟು 17 ಸರ್ಕಾರಿ ಪ್ರೌಢಶಾಲೆಗಳಿದ್ದು, ಅದರಲ್ಲಿ ಒಟ್ಟು 13 ಸರ್ಕಾರಿ ಪ್ರೌಢಶಾಲೆಗಳು ಶೇಕಡಾ 100 ಫಲಿತಾಂಶ ಪಡೆದುಕೊಂಡಿದೆ.
ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್, ಪಂಜ ಸರ್ಕಾರಿ ಪ್ರೌಢಶಾಲೆ, ಗುತ್ತಿಗಾರು ಸರ್ಕಾರಿ ಪ್ರೌಢಶಾಲೆ, ಅಜ್ಜಾವರ ಸರ್ಕಾರಿ ಪ್ರೌಢಶಾಲೆ, ಹರಿಹರ ಪಲ್ಲತ್ತಡ್ಕ ಸರ್ಕಾರಿ ಪ್ರೌಢಶಾಲೆ, ಮರ್ಕಂಜ ಸರ್ಕಾರಿ ಪ್ರೌಢಶಾಲೆ, ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್, ಆಲೆಟ್ಟಿ ಸರ್ಕಾರಿ ಪ್ರೌಢಶಾಲೆ, ಎಡಮಂಗಲ ಸರ್ಕಾರಿ ಪ್ರೌಢಶಾಲೆ, ದುಗಲಡ್ಕ ಸರ್ಕಾರಿ ಪ್ರೌಢಶಾಲೆ, ಐವರ್ನಾಡು ಸ.ಪ.ಪೂ. ಕಾಲೇಜು ಪ್ರೌಢ ವಿಭಾಗ, ಏನೆಕಲ್ಲು ಸರ್ಕಾರಿ ಪ್ರೌಢಶಾಲೆ, ಹಾಗೂ ಪಂಜದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ಒಟ್ಟು 13 ಸರಕಾರಿ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಉಳಿದಂತೆ ಸುಳ್ಯದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢವಿಭಾಗ ಶೇ.96.47, ಎಲಿಮಲೆ ಸರ್ಕಾರಿ ಪ್ರೌಢಶಾಲೆ ಶೇ.95.38, ಎಣ್ಮೂರು ಸರ್ಕಾರಿ ಪ್ರೌಢಶಾಲೆ ಶೇ.98.8 ಹಾಗೂ ಸಂಪಾಜೆಯ ಅರ್.ಎಂ.ಎಸ್.ಎ ಸರ್ಕಾರಿ ಪ್ರೌಢಶಾಲೆಯು ಶೇ.91.67 ಫಲಿತಾಂಶ ಪಡೆದುಕೊಂಡಿದೆ.

ಶೇಕಡಾ 100 ಫಲಿತಾಂಶ ಪಡೆದ ಅನುದಾನಿತ ಶಾಲೆಗಳು

ಸುಳ್ಯ ತಾಲೂಕಿನಲ್ಲಿ ಒಟ್ಟು 7 ಅನುದಾನಿತ ಪ್ರೌಢಶಾಲೆಗಳಿದ್ದು, ಅದರಲ್ಲಿ 4 ಅನುದಾನಿತ ಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ ,
ಅರಂತೋಡು ನೆಹರೂ ಸ್ಮಾರಕ ಪದವಿಪೂರ್ವ ಕಾಲೇಜಿನ ಪ್ರೌಢವಿಭಾಗ, ಸುಳ್ಯದ ಶ್ರೀ ಶಾರದಾ ಮಹಿಳಾ ಪದವಿಪೂರ್ವ ಕಾಲೇಜಿನ ಪ್ರೌಢವಿಭಾಗ ಹಾಗೂ ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಉಳಿದಂತೆ ಬಾಳಿಲ ವಿದ್ಯಾಬೋಧಿನಿ ಅನುದಾನಿತ ಪ್ರೌಢಶಾಲೆ ಶೇ.98.9, ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜು ಶೇ 98.7, ಕೊಲ್ಲಮೊಗ್ರದ ಕೆವಿಜಿ ಪ್ರೌಢಶಾಲೆ ಶೇ.94.11 ಫಲಿತಾಂಶ ಪಡೆದುಕೊಂಡಿದೆ.

ತಾಲೂಕಿನಲ್ಲಿ ಒಟ್ಟು 13 ಅನುದಾನ ರಹಿತ ಖಾಸಗಿ ಪ್ರೌಢಶಾಲೆಗಳಿದ್ದು, ಎಲ್ಲಾ 13 ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.

ಶೇ.100 ಫಲಿತಾಂಶ ಪಡೆದ ಅನುದಾನ ರಹಿತ ಖಾಸಗಿ ಪ್ರೌಢಶಾಲೆಗಳು

ಸುಳ್ಯದ ರೋಟರಿ ಆಂಗ್ಲಮಾಧ್ಯಮ ಪ್ರೌಢಶಾಲೆ, ಚೊಕ್ಕಾಡಿ ಶ್ರೀ ಭಗವಾನ್ ಸತ್ಯಸಾಯಿ ಪ್ರೌಢಶಾಲೆ, ಸುಬ್ರಹ್ಮಣ್ಯದ ಕುಮಾರಸ್ವಾಮಿ ಆಂಗ್ಲಮಾಧ್ಯಮ ಪ್ರೌಢಶಾಲೆ , ಸುಳ್ಯದ ಸ್ನೇಹ ಪ್ರೌಢಶಾಲೆ, ಸಂಪಾಜೆ ಕಲ್ಲುಗುಂಡಿಯ ಸವೇರಪುರ ಆಂಗ್ಲಮಾಧ್ಯಮ ಪ್ರೌಢಶಾಲೆ, ಸುಳ್ಯದ ಗ್ರೀನ್ ವ್ಯೂ ಆಂಗ್ಲಮಾಧ್ಯಮ ಪ್ರೌಢಶಾಲೆ, ಸುಳ್ಯದ ಸೈಂಟ್ ಜೋಸೆಫ್ ಆಂಗ್ಲಮಾಧ್ಯಮ ಪ್ರೌಢಶಾಲೆ, ನಿಂತಿಕಲ್ಲು ವರ್ಷನಗರದ ಕೆ.ಎಸ್.ಗೌಡ ಆಂಗ್ಲಮಾಧ್ಯಮ ಪ್ರೌಢಶಾಲೆ, ಗುತ್ತಿಗಾರು ಬೆಸ್ಡ್ ಕುರಿಯಾಕೋಸ್ ಆಂಗ್ಲಮಾಧ್ಯಮ ಪ್ರೌಢಶಾಲೆ, ಎಲಿಮಲೆಯ ಜ್ಞಾನದೀಪ ಪ್ರೌಢಶಾಲೆ, ಜಾಲ್ಸೂರಿನ ವಿನೋಬನಗರ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆ, ಗೂನಡ್ಕದ ತೆಕ್ಕಿಲ್ ಪ್ರೌಢಶಾಲೆ, ಕೊಡಿಯಾಲಬೈಲ್ ಮಹಾತ್ಮಾ ಗಾಂಧಿ ಮಲ್ನಾಡ್ ಪ್ರೌಢಶಾಲೆಗಳು ಶೇ.100 ಫಲಿತಾಂಶ ಪಡೆದುಕೊಂಡಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading