ಐನೆಕಿದು : ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಐನೆಕಿದು ಗ್ರಾಮದ ಖಾಸಗಿ ಜಾಗದ ಹತ್ತಿರದ ಕಾಡಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹದ ಅಸ್ಥಿಪಂಜರವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಇದು ಸುಮಾರು ನಾಲ್ಕು ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ ಯಶವಂತ ಕಾಜಿಮಡ್ಕ ಎಂಬುವವರ ಮೃತದೇಹ ಆಗಿರಬಹುದೇ ಎನ್ನುವ ಶಂಕೆ ಇದೀಗ ವ್ಯಕ್ತವಾಗಿದೆ. ಯಶವಂತ ರವರು ಕಳೆದ ನಾಲ್ಕು ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದು, ಪತ್ತೆಯಾಗಿರಲಿಲ್ಲ‌. ಈ ಕುರಿತು ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಶವಂತ ರವರು ಪತ್ನಿ ಸಮೇತರಾಗಿ ಐನೆಕಿದು ಗ್ರಾಮದ ಕೋನಡ್ಕ ಪ್ರಶಾಂತ್ ಎಂಬುವವರ ಮನೆಯಲ್ಲಿ ಕೆಲವು ಸಮಯಗಳಿಂದ ಕೆಲಸಕ್ಕಿದ್ದರೆಂದು ತಿಳಿದುಬಂದಿದ್ದು, ಪ್ರಸ್ತುತ ಪ್ರಶಾಂತ್ ರವರ ಜಾಗದ ಪಕ್ಕದ ಕಾಡಿನಲ್ಲಿ ಕೆಲವು ತಿಂಗಳುಗಳ ಹಿಂದಿನ ಮೃತದೇಹ ಪತ್ತೆಯಾಗಿದ್ದು, ಕೇವಲ ಅಸ್ಥಿಪಂಜರ ಮಾತ್ರ ಇರುವ ಈ ಮೃತದೇಹದ ಪಕ್ಕದಲ್ಲಿ ಯಶವಂತ ರವರ ಮೊಬೈಲ್ ಕೂಡ ಪತ್ತೆಯಾಗಿದೆ ಎನ್ನಲಾಗಿದ್ದು, ಆ ಕಾರಣದಿಂದ ಈ ಮೃತದೇಹವು ಯಶವಂತ ಕಾಜಿಮಡ್ಕ ರವರದ್ದು ಎಂಬ ಶಂಕೆ ವ್ಯಕ್ತವಾಗಿದೆ. ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತದೇಹ ಯಶವಂತರದ್ದಾಗಿರಬಹುದೇ ಎಂದು ದೃಢೀಕರಿಸಲು ಡಿ.ಎನ್.ಎ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading