ಅಜಿತ್.ಕೆ ಕೋಡಿಂಬಾಳ ರವರಿಗೆ ಪಿ.ಹೆಚ್.ಡಿ ಪದವಿ

ಕಡಬ ತಾಲೂಕಿನ ಕೋಡಿಂಬಾಳದ ಅಜಿತ್.ಕೆ ರವರು ಕೋಯಂಬತ್ತೂರಿನ ಭಾರತೀಯ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಫಿಲಾಸಫಿ(ಪಿ.ಹೆಚ್.ಡಿ) ಪದವಿಯನ್ನು ಪಡೆದಿದ್ದಾರೆ.
ಅಜಿತ್ ರವರು “ಫಾಲಿಸೈಟಿಕ್ ಓವರಿ ಸಿಂಡ್ರೋಮ್ ಗಾಗಿ ಆಹಾರ ಕ್ರಮದ ಮಧ್ಯಸ್ಥಿಕೆ ಮತ್ತು ಜೀವನಶೈಲಿ ಮಾರ್ಪಾಡು – ಒಂದು ನಿರೀಕ್ಷಿತ ಮಧ್ಯಸ್ಥಿಕೆಯ ಅಧ್ಯಯನ(dietary intervention and lifestyle modification in polycystic ovary syndrome – A prospective international study)” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಪಿ.ಹೆಚ್.ಡಿ ಪದವಿಯನ್ನು ಪಡೆದುಕೊಂಡಿದ್ದಾರೆ. ಕೋಯಂಬತ್ತೂರಿನ ಡಾ. ಎನ್.ಜಿ.ಪಿ ಕಾಲೇಜಿನ ಪ್ರೊಫೆಸರ್ ಡಾ. ಮೀರಾ ರಮನ್ ಅವರ ಮಾರ್ಗದರ್ಶನದಲ್ಲಿ ಇವರಿಗೆ ಪಿ.ಹೆಚ್.ಡಿ ಪದವಿ ಲಭಿಸಿದೆ. ಪ್ರಸ್ತುತ ಮಂಗಳೂರಿನ ಯೆನೆಪೋಯ ವಿಶ್ವವಿದ್ಯಾಲಯದಲ್ಲಿ ಆಹಾರ ಮತ್ತು ಪೌಷ್ಟಿಕಾಂಶ ತಜ್ಞರು ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ಕಡಬ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ನಿವೃತ್ತ ಸಹಾಯಕ ಮಹಾಪ್ರಬಂಧಕ ಕುಸುಮಾಧರ ಗೌಡ.ಕೆ ಕೋಡಿಂಬಾಳ(ಕೊಡಂಕೇರಿ) ಹಾಗೂ ಶ್ರೀಮತಿ ಪದ್ಮಾವತಿ ದಂಪತಿಗಳ ಪುತ್ರ. ಇವರ ಪತ್ನಿ ಶ್ರೀಮತಿ ಅಶ್ಮಿತಾ.ಎನ್.ಎಂ ಮಂಗಳೂರು ಜಿಲ್ಲಾ ಪಂಚಾಯತ್ ನಲ್ಲಿ ಪ್ರೊಕ್ಯೂರ್ಮೆಂಟ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. (ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading