ಏನೆಕಲ್ಲು : “ಕಲಾಮಾಯೆ ದಶ ಸಂಭ್ರಮ” ಕಾರ್ಯಕ್ರಮಕ್ಕೆ ವಿಜೃಂಭಣೆಯ ತೆರೆ

ಸುಮಾರು ಒಂಬತ್ತು ವರ್ಷಗಳಿಂದ ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕಲಾಮಾಯೆ ಸಾಂಸ್ಕೃತಿಕ ವಿದ್ಯಾ ಸಂಸ್ಥೆ(ರಿ.) ಏನೆಕಲ್ ತನ್ನ ಹತ್ತನೇ ವರ್ಷದ ದಶ ಸಂಭ್ರಮ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಿತು. ಏಪ್ರಿಲ್ 12 ರಿಂದ ಪ್ರಾರಂಭ ಗೊಂಡ “ಮಕ್ಕಳ ಗೌಜಿ” ಚಿಣ್ಣರ ಬಣ್ಣದ ಬೇಸಿಗೆ ಶಿಬಿರ ನಾಡಿನ ಪ್ರತಿಭಾವಂತ ಸಂಪನ್ಮೂಲ ಅತಿಥಿ ಗಳನ್ನ ಆಹ್ವಾನಿಸಿ ನಿರ್ದೇಶನ ನೀಡಲಾಯಿತು. ಏಪ್ರಿಲ್ 19 ಆದಿತ್ಯವಾರ ಸಮಾರೋಪ ಕಾರ್ಯಕ್ರಮ ಹಮ್ಮಿಕೊಂಡು, ಶಿಬಿರ ವಿದ್ಯಾರ್ಥಿಗಳ ನೃತ್ಯ, ನಾಟಕ ಪ್ರದರ್ಶನ ನಡೆಯಿತು. ನಂತರ ಸಭಾ ಕಾರ್ಯಕ್ರಮ ನಡೆದು ವಿದ್ಯಾರ್ಥಿಗಳಿಗೆ ಸ್ಮರಣಿಕೆ ಮತ್ತು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ತದನಂತರ “ಕೋಸ್ಟಲ್ ಡ್ಯಾನ್ಸಿಂಗ್ ಸ್ಟಾರ್” ಸೋಲೋ ನೃತ್ಯ ಸ್ಪರ್ಧೆ – 2026 ಕಲಾ ಪ್ರದರ್ಶನ ವೇದಿಕೆಯನ್ನು ರಂಗೇರಿಸಿತು. ಹಿರಿಯ ಕಲಾವಿದರಾದ ಪಟ್ಟಾಭಿರಾಮ ಸುಳ್ಯ ಇವರಿಂದ ಶಾಡೋ ಪ್ಲೆ ಮತ್ತು ಮಿಮಿಕ್ರಿ ಪ್ರೇಕ್ಷಕರ ಮನ ಸೂರೆಗೊಳ್ಳುವಂತೆ ಮಾಡಿತು. ನಂತರ ಬಲೇ ತೆಲಿಪಾಲೇ ಖ್ಯಾತಿಯ ಅತಿಥಿ ಕಲಾವಿದರಿಂದ “ಕಾಮಿಡಿ ಟೈಮ್” ಹಾಸ್ಯ ಕಾರ್ಯಕ್ರಮ, ನಗೆ ಕಡಲಲ್ಲಿ ತೇಲಿಸಿತು. ಕಲಾಮಾಯೆ ದಶ ಸಂಭ್ರಮ ಪ್ರಯುಕ್ತ ವಿಶೇಷವಾಗಿ ಸಂಘಟಕರ ಆಯೋಜನೆಯಲ್ಲಿ ಏನೆಕಲ್ಲಿನ ಅರ್ಪಣಾ ಕ್ರೀಡಾಂಗಣ ಹಮ್ಮಿ ಕೊಂಡ ಏನೆಕಲ್ ಗ್ರಾಮ ವ್ಯಾಪ್ತಿಗೆ ಒಳ ಪಟ್ಟ ಲೀಗ್ ಮಾದರಿಯ “ಕಲಾಮಾಯೆ ಟ್ರೋಫಿ -2026” ಕ್ರಿಕೆಟ್ ಪಂದ್ಯಾಟ ಯಶಸ್ವಿನ ಕ್ರೀಡಾ ಕೈಂಕರ್ಯಕ್ಕೆ ಸಾಕ್ಷಿಯಾಯಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading