ಬೆಳ್ಳಾರೆ : ಏ.24 ರಂದು ಶ್ರೀ ಸದಾಶಿವ ಶಿಶು ಮಂದಿರದ 17ನೇ ವರ್ಷಾಚರಣೆಯ ಅಂಗವಾಗಿ ಚಿಣ್ಣರ ಹಬ್ಬ-2026

ಶ್ರೀ ಸದಾಶಿವ ಚಾರಿಟೇಬಲ್ ಟ್ರಸ್ಟ್(ರಿ.) ಬೆಳ್ಳಾರೆ ಇದರ ಆಡಳಿತಕ್ಕೆ ಒಳಪಟ್ಟಿರುವ ಬೆಳ್ಳಾರೆಯ ಶ್ರೀ ಸದಾಶಿವ ಶಿಶು ಮಂದಿರದ ಹದಿನೇಳನೇ ವರ್ಷಾಚರಣೆಯ ಅಂಗವಾಗಿ ಚಿಣ್ಣರ ಹಬ್ಬವು ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಏ.24ರಂದು ಸಂಜೆ ಘಂಟೆ 4:30ರಿಂದ ರಾತ್ರಿ 9:00ರ ತನಕ ನಡೆಯಲಿದೆ. ಸಂಜೆ 4:30ಕ್ಕೆ ದೀಪ ಪ್ರಜ್ವಲನೆ, ಸಂಜೆ 4:45 ರಿಂದ ಸಂಸ್ಥೆಯ ಪುಟಾಣಿಗಳಿಂದ, ಹಿರಿಯ ವಿದ್ಯಾರ್ಥಿಗಳಿಂದ ಹಾಗೂ ಮಾತೃ ಮಂಡಳಿಯವರಿಂದ ವಿವಿಧ ಜಾನಪದ, ಶಾಸ್ತ್ರೀಯ ಸಂಗೀತ, ಭರತನಾಟ್ಯ ಇತ್ಯಾದಿ ನಡೆಯಲಿರುವುದು. ಸಂಜೆ 6:00ರಿಂದ ಸಭಾ ಕಾರ್ಯಕ್ರಮ ನಡೆಯಲಿರುವುದು. (ವರದಿ-ಎಂ.ಎ.ಮುಸ್ತಫಾ ಬೆಳ್ಳಾರೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading