ಈಶ್ವರಮಂಗಲದಲ್ಲಿ ಪ್ರಥಮ ಬಾರಿಗೆ ಸಿ.ಸಿ ಕ್ಯಾಮೆರಾ ಸಹಿತ ವಿವಿಧ ಸೇವೆಗಳ ಹಮ್ನಾ ಪವರ್ ಸೊಲ್ಯೂಷನ್ ಎರಡನೇ ಮಳಿಗೆ ಶುಭಾರಂಭ

ಬೆಳ್ಳಾರೆಯಲ್ಲಿ ಕಳೆದ ಒಂದು ದಶಕದಿಂದ ಕಾರ್ಯಾಚರಿಸುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾದ ಹಮ್ನಾ ಪವರ್ ಸೊಲ್ಯೂಷನ್ ಸಂಸ್ಥೆ ತನ್ನ ಎರಡನೇ ಮಳಿಗೆಯನ್ನು ಗ್ರಾಹಕರ ಬೇಡಿಕೆಯ ಮೇರೆಗೆ ಈಶ್ವರಮಂಗಲ ಪಂಚಾಯತ್ ಕಛೇರಿ ಬಳಿ ಇಂದುಮೂಲೆ ಕಾಂಪ್ಲೆಕ್ಸ್‌ನಲ್ಲಿ ಆರಂಭಿಸಿ ಏ.20ರಂದು ಬೆಳಿಗ್ಗೆ ಬಹು:ಅಸ್ಸಯ್ಯದ್ ಮಶ್ಹೂದ್ ತಂಙಲ್ ಕೂರತ್ ಅವರಿಂದ ಶುಭಾರಂಭ ಕಂಡಿತು. ಜಲಾಲುದ್ದೀನ್ ಅಲ್ ಬುಖಾರಿ ಕುನ್ನುಂಗೈ ದು:ಆ ನೆರವೇರಿಸಿದರು. ಸಮಾಜ ಸೇವಕ‌ ಮಿನಿ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಅಧ್ಯಕ್ಷತೆ ವಹಿಸಿದ್ದರು. ಈಶ್ವರಮಂಗಲ ಹೊರ ಠಾಣಾ ಎ.ಎಸ್.ಐ ಪರಮೇಶ್ವರ್ ಉದ್ಘಾಟಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ನಿಕಟಪೂರ್ವ ಉಪಾಧ್ಯಕ್ಷರಾದ ಶ್ರೀರಾಮ ಮೇನಾಲ ಸ್ವಾಗತಿಸಿದರು. ಹಂಝ ಮುಸ್ಲಿಯಾರ್ ಬಿ.ಸಿ.ನಗರ, ಅಬ್ದುಲ್ ಅಝೀಝ್ ಮಿಸ್ಬಾಹಿ ತ್ವಯಿಬ, ಖಬೀರ್ ಹಿಮಮಿ ಬೋವಿಕ್ಕಾನ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಅಬ್ದುಲ್ ಖಾದರ್ ಹಾಜಿ ಹಿರಾ ಮುಖ್ಯ ಅತಿಥಿಯಾಗಿ ಆಗಮಿಸಿದರು. ಬಿ.ಪಿ.ಅಬ್ದುಲ್ ರಹಿಮಾನ್ ಹಾಜಿ ಬೈತಡ್ಕ, ಮುಹಮ್ಮದ್ ಹಾಜಿ ತಲೆಬೈಲ್, ಕಟ್ಟಡ ಮಾಲಕರಾದ ಮುಹಮ್ಮದ್ ಹಾಜಿ ಇಂದುಮೂಲೆ, ಶಂಸುದ್ದೀನ್ ಇಂದುಮೂಲೆ, ರಹೀಂ ತಲೆಬೈಲ್ ಉಪಸ್ಥಿತರಿದ್ದರು. ಸಂಸ್ಥೆಯ ಮಾಲಕರಾದ ಅಲ್ತಾಫ್ ಬೆಳ್ಳಾರೆ ತಮ್ಮಲ್ಲಿರುವ ಸಿಸಿ ಕ್ಯಾಮರಾ, ಇನ್ವರ್ಟರ್, ಬ್ಯಾಟರಿ, ಸೋಲಾರ್, ಸೋಲಾರ್ ವಾಟರ್ ಹೀಟರ್ ಮತ್ತು ಇನ್ನಿತರ ಸೇವೆಗಳ ಬಗ್ಗೆ ವಿವರಿಸಿ ಸರ್ವರ ಸಹಕಾರ ಕೋರಿ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading