ಸುಬ್ರಹ್ಮಣ್ಯ : ಅಂತರ್ ಕಾಲೇಜು ಪುರುಷರು ಮತ್ತು ಮಹಿಳಾ ವಿಭಾಗದ ಹಗ್ಗಜಗ್ಗಾಟ ; “ಹಗ್ಗಜಗ್ಗಾಟ ಸ್ಪರ್ಧೆಗೆ ಶಕ್ತಿ ಪ್ರಧಾನ ಅಲ್ಲ, ಯುಕ್ತಿ ಸೇರಿದರಷ್ಟೇ ಇಲ್ಲಿ ಗೆಲುವು ಸಾಧ್ಯ” : ನಿತ್ಯಾನಂದ ಮುಂಡೋಡಿ

ಸುಬ್ರಹ್ಮಣ್ಯ : “ಹಗ್ಗಜಗ್ಗಾಟ ಸ್ಪರ್ಧೆಗೆ ಶಕ್ತಿ ಪ್ರಧಾನ ಅಲ್ಲ. ಯುಕ್ತಿ ಸೇರಿದರಷ್ಟೇ ಇಲ್ಲಿ ಗೆಲುವು ಸಾಧ್ಯವಿದೆ. ಶಕ್ತಿ ಮತ್ತು ಯುಕ್ತಿ ಮಿಳಿತವಾಗುವ ಸ್ಪರ್ಧೆಯನ್ನು ಅತ್ಯಂತ ಯಶಸ್ವಿ ರೀತಿಯಲ್ಲಿ ಇಲ್ಲಿ ಆಯೋಜಿಸಿದ ಸಂಘಟಕರ ಪ್ರಯತ್ನ ಶ್ಲಾಘನೀಯವಾದದು” ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಹೇಳಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜು ಮತ್ತು ಮಂಗಳೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾದ ಅಂತರ್ ಕಾಲೇಜು ಪುರುಷರು ಮತ್ತು ಮಹಿಳಾ ವಿಭಾಗದ ಹಗ್ಗಜಗ್ಗಾಟ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ಹಗ್ಗಜಗ್ಗಾಟ ಸ್ಪರ್ಧೆ ಈಗ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಪಡೆಯುತ್ತಿದೆ. ಕೆ.ಎಸ್.ಎಸ್ ಕಾಲೇಜು ಇದನ್ನು ಅರ್ಥಪೂರ್ಣ ರೀತಿಯಲ್ಲಿ ಅನುಷ್ಠಾನಿಸಿದೆ” ಎಂದ ಅವರು “ಧಾರ್ಮಿಕ ಕೇಂದ್ರದ ಮೂಲಕ ನಡೆಸಲ್ಪಡುವ ಕಾಲೇಜು ಜಿಲ್ಲೆಗೆ ಮಾದರಿಯಾಗುವ ಹಾಗೆ ತನ್ನ ಚಟುವಟಿಕೆಯನ್ನು ಹೊಂದಿರುವುದು ಸಂತಸದ ಸಂಗತಿ” ಎಂದರು.
ಸಭಾಧ್ಯಕ್ಷತೆ ವಹಿಸಿದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಮಾತನಾಡಿ “ಕಬಡ್ಡಿ, ಲಗೋರಿ, ಹಗ್ಗಜಗ್ಗಾಟಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಗುತ್ತಿದೆ. ಈ ಎಲ್ಲ ಆಟಗಳು ಗ್ರಾಮಾಂತರ ಪ್ರದೇಶದ ಪ್ರತಿಭೆಗಳ ಪರಿಶ್ರಮದ ಆಟ. ಅವು ಹಂತ ಹಂತವಾಗಿ ಬೆಳೆದು ಎಲ್ಲೆಡೆ ಪಸರಿಸಿದೆ” ಎಂದ ಅವರು “ಕ್ರೀಡೆಯಿಂದ ಸಮಾಜದಲ್ಲಿ ಸಾಮರಸ್ಯ ವಾತಾವರಣ ಮೂಡಿಸಲು ಸಾಧ್ಯವಿದೆ” ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಬಹುಮಾನ ಪ್ರಯೋಕರಾದ ಜೋಸ್ ದಂಪತಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಮಾಧವ.ಡಿ, ಸುಬ್ರಹ್ಮಣ್ಯ ಕೆ.ಎಸ್.ಎಸ್ ಕಾಲೇಜಿನ ಪಿ.ಟಿ.ಎ ಅಧ್ಯಕ್ಷರಾದ ರವಿ ಕಕ್ಕೆಪದವು, ಮಂಗಳೂರು ವಿ.ವಿ.ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಜೆರಾಲ್ಡ್ ಸಂತೋಷ್ ಡಿಸೋಜ, ಐ.ಕ್ಯೂ.ಎ.ಸಿ ಸಂಯೋಜಕರಾದ ಲತಾ ಬಿ.ಟಿ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್, ಕಾಲೇಜಿನ ದೈಹಿಕ ನಿರ್ದೇಶಕ ಡಾ.ದಿನೇಶ್ ಪಿ.ಟಿ ಉಪಸ್ಥಿತರಿದ್ದರು. 
ಕೆ.ಎಸ್.ಎಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ದಿನೇಶ್ ಸ್ವಾಗತಿಸಿ, ಉಪನ್ಯಾಸಕರಾದ ಅಶ್ವಿನಿ ವಂದಿಸಿದರು. ಡಾ‌.ವಿನ್ಯಾಸ್ ಹೊಸಳಿಕೆ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading