ದ್ವಾದಶ ರಾಶಿಗಳ ದಿನ ಭವಿಷ್ಯ


ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

ದಿನಾಂಕ17/04/2026 ಶುಕ್ರವಾರ
*01,🐏ಮೇಷರಾಶಿ🐏*
📃,ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಾಧ್ಯತೆ ಇರುವುದು. ಉದ್ಯೋಗದಲ್ಲಿ ಉನ್ನತಿಗೆ ಸಂಬಂದಿಸಿದ ಶುಭ ಸಮಾಚಾರವನ್ನುಪಡೆಯುವಿರಿ,ನಿಮ್ಮ ಎಲ್ಲಾ ಕೆಲಸಗಳಿಂದ ನಿಮ್ಮ ಮನಸ್ಸಿಗೆ ಇಂದು ಸಂತೋಷವಾಗಿರುತ್ತದೆ. ನಿಮ್ಮ ಸಾಮಾನ್ಯ ಜ್ಞಾನದ ಜೊತೆಗೆ ನಿಮ್ಮ ನಿರಂತರ ಪ್ರಯತ್ನ ಖಂಡಿತವಾಗಿಯೂ ಯಶಸ್ಸು ತರುವುದರಿಂದತಾಳ್ಮೆಯಿಂದಿರಿ
ಗಮನಿಸಿ:- ಇಂದು ನಿಮ್ಮ ಸ್ನೇಹಿತರೊಬ್ಬರುದೊಡ್ಡ ಮೊತ್ತದ ಧನ ಸಹಾಯವನ್ನು ಕೇಳಬಹುದು,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,
*02,🐂ವೃಷಭರಾಶಿ🐂*
📃,ಯೋಗ್ಯವಾದುದನ್ನು ಮಾಡುವ ಕ್ರಿಯಾಶೀಲತೆ ನಿಮ್ಮಲ್ಲಿದೆ. ಸಕಾರಾತ್ಮಕವಾಗಿ ಮುಂದುವರಿಯಿರಿ. ಭಗವಂತನು ನಿಮ್ಮ ಮೇಲೆ ಕರುಣೆ ತೋರುವನು. ವಿವಾಹ ಸಂಬಂಧ ಮಾತುಕತೆಗಳು ಫಲಪ್ರದವಾಗುವುವು, ಇಂದು ನೀವುವ್ಯಾಪಾರವ್ಯವಹಾರದಲ್ಲಿ ಕೆಲವು ಸವಾಲುಗಳಿಂದ ಸಮಸ್ಯೆಗಳನ್ನುಎದುರಿಸುತ್ತೀರಿ.ನೀವು ಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿಗಳನ್ನು ತಲುಪುತ್ತೀರಿ,
ಪರಿಹಾರ:-ಶ್ರೀ ರಾಘವೇಂದ್ರ ಸ್ವಾಮಿಯನ್ನು ಪ್ರಾರ್ಥಿಸಿ,
*03,👥ಮಿಥುನ ರಾಶಿ👥*
📃,ಹೆಚ್ಚಿನ ಉತ್ಸಾಹ, ಶಕ್ತಿ, ಸಾಮರ್ಥ್ಯವನ್ನು ಪಡೆಯುವ ನಿಮ್ಮ ಕೆಲಸವೊಂದು ಈ ದಿನ ಕೈಗೂಡಲಿದೆ.ಸಕಾರಾತ್ಮಕವಾದ.ಪ್ರಸಿದ್ಧಿಗೆದಾರಿಸುಗಮವಾಗಲಿದೆ. ಇದು ನೀವು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತ ಅವಕಾಶ ಕೂಡಿಬರಬಹುದು. ವಿವಿಧ ಮೂಲಗಳಿಂದ ಹಣ ಬರುವುದು. ನಿಮಗಿಂತ ಹೆಚ್ಚಾಗಿ ಇತರರ ಕೆಲಸಗಳತ್ತ ಗಮನ ಹರಿಸುವುದರಿಂದ ನೀವು ತೊಂದರೆಗೆ ಈ ದಿನ ಸಿಲುಕಬಹುದು,
ಗಮನಿಸಿ:- ಇತರರ ವಿಚಾರಗಳಲ್ಲಿ ಮೂಗು ತೂರಿಸಬೇಡಿ,
ಪರಿಹಾರ:- ಇಂದು ಸಂಜೆ ನವಗ್ರಹ ಪ್ರದಕ್ಷಿಣೆ ಮಾಡಿ,
*04,🦀ಕಟಕ ರಾಶಿ🦀*
📃,ಅನೇಕ ದಿನಗಳಿಂದ ನಡೆಯುತ್ತಿರುವ ವ್ಯಾಜ್ಯಕ್ಕೆ ಹಲವು ಬಗೆಯ ನಾಟಕೀಯ ತಿರುವುಗಳು ಸಿಗಬಹುದು. ಇದರಿಂದ ಕೆಲಸಕಾರ್ಯಗಳಿಗೆ ಅಡೆತಡೆಗಳುಉಂಟಾಗುವುವು. ಬೇರೆಯವರೊಂದಿಗೆ ನಿಮ್ಮ ಕೆಲಸಗಳನ್ನು ಅಂತಿಮಗೊಳಿಸುವಾಗ ಅವರು ನಿಮ್ಮನ್ನು ಕೆಲವು ಸಮಸ್ಯೆಗೆ ಸಿಲುಕಿಸಬಹುದು,
ಗಮನಿಸಿ:-ಇಂದು ನೀವು ಇತರರ ಮಾತುಗಳನ್ನು ನಂಬಿ ಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆಯಿದೆ ಜಾಗ್ರತೆ ವಹಿಸಿ,
ಪರಿಹಾರ:-ನಿಮ್ಮ ಕುಲದೇವರ ಪ್ರಾರ್ಥನೆ ಮಾಡಿ,
*05,🦁ಸಿಂಹ ರಾಶಿ🦁*
📃,ನಿಮ್ಮ ಒಳಮನಸ್ಸಿನ ಮಹತ್ವಾಕಾಂಕ್ಷೆಗಳಾದ ಅಧಿಕಾರ ಮತ್ತು ಜನಪ್ರಿಯತೆಗಳು ನಿಮ್ಮ ಆತುರದಿಂದ ಹಾಳಾಗುವುವು. ಈಬಗ್ಗೆಯೋಚಿಸಿಹೆಜ್ಜೆಯನ್ನಿಡಿ.ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದು ಒಳ್ಳೆಯದು. ನಿಮ್ಮ ಒಡಹುಟ್ಟಿದವರೊಂದಿಗೆ ಯಾವುದೇಜಗಳವಾಡುವುದನ್ನು.ನೀವುಇಂದುತಪ್ಪಿಸಬೇಕು,
ಗಮನಿಸಿ:-ಇಂದು ನೀವು ಧಾರ್ಮಿಕ ಸ್ಥಳಕ್ಕೆ ಅಥವಾ ಬಂದುಮಿತ್ರರನ್ನು ಭೇಟಿ ಮಾಡುವ ಸಾಧ್ಯತೆಯಿದೆ,
ಪರಿಹಾರ:-ಶ್ರೀದುರ್ಗಾಪರಮೇಶ್ವರಿಯನ್ನು ಪ್ರಾರ್ಥಿಸಿ,
*06,👩‍🦳ಕನ್ಯಾ ರಾಶಿ👩‍🦳*
📃,ಉತ್ತಮ ವಿಚಾರವಾಗಿ ನೀವುಒಳ್ಳೆಯನೆರೆಹೊರೆಯವರನ್ನು ಗೆಳೆಯರನ್ನಾಗಿ ಪಡೆದುಕೊಳ್ಳುವಿರಿ. ನೀವಾಡುವ ಮಾತುಗಳಿಂದ ಅವರು ಪ್ರಭಾವಿತರಾಗಿ ನಿಮಗೆ ಸಹಾಯ ನೀಡುವರು ಮಕ್ಕಳ ಆಟಪಾಠಗಳಿಂದ ಸಂತೋಷ ಹೊಂದುವಿರಿ. ಕೆಲವು ನಿಮ್ಮ ಸ್ಥಗಿತಗೊಂಡ ಕೆಲಸವನ್ನುಪೂರ್ಣಗೊಳಿಸುವಲ್ಲಿ ನಿಮ್ಮ ಸ್ನೇಹಿತರ ಸಹಕಾರದಿಂದಪೂರ್ಣಗೊಳ್ಳುತ್ತದೆ,
ಗಮನಿಸಿ:-ಇಂದು ನಿಮ್ಮ ಸ್ನೇಹಿತರಸಹಕಾರದೊರೆಯುತ್ತದೆ,
ಪರಿಹಾರ:-ನಿಮ್ಮ ಗುರುಗಳ ಆಶೀರ್ವಾದ ಪಡೆಯಿರಿ,
*07,⚖️ತುಲಾ ರಾಶಿ⚖️*
📃,ಉತ್ತಮ ಸಮಾಜದ ಸಂಘಟನೆಗೆ ಕಾರಣರಾಗಿ ಪ್ರಶಂಸೆ ಗಳಿಸುವ ಸಾಧ್ಯತೆ ಇದೆ. ನಿಮ್ಮಿಂದ ದೂರವಾಗಿದ್ದ ಸ್ನೇಹಿತರು ಪುನಃ ನಿಮ್ಮ ಸ್ನೇಹ ಹಸ್ತಕ್ಕಾಗಿ ಕೈಚಾಚುವರು. ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವ ಸಂದರ್ಭ ಎದುರಾಗುವುವು ಮತ್ತು ನೀವು ಯಾವುದೇ ಈ ಹಿಂದೆ ಹೂಡಿಕೆಯನ್ನು ಮಾಡಿದ್ದರೆ, ಅದರಲ್ಲಿನಿಮಗೆಲಾಭವಾಗುವುದು,
ಗಮನಿಸಿ:-ಆರೋಗ್ಯದ ವಿಚಾರದಲ್ಲಿ ಏರಿಳಿತಗಳು ಉಂಟಾಗುವ ಸಾಧ್ಯತೆ ಇದೆ,
ಪರಿಹಾರ:-ಇಂದು ಶಿವನ ದೇವಸ್ಥಾನದಲ್ಲಿ.ಸಿಹಿ ಹಂಚಿ,
*08,🦂ವೃಶ್ಚಿಕ ರಾಶಿ🦂*
📃,ಅನೇಕ ರೀತಿಯ ಬದಲಾವಣೆಗಳ ಕುರಿತು ನೀವು ಮರು ಚಿಂತನೆ ಮಾಡಬೇಕಾಗಿದೆ. ಮಕ್ಕಳು ಮಾಡುವ ತಪ್ಪಿಗೆ ನಿಮಗೆ ಬೇಸರವುಂಟಾಗುವುದು. ಕುಟುಂಬದಲ್ಲಿ ಕಲಹಗಳ ಸಾಧ್ಯತೆ, ಇಂದು ನಿಮಗೆ ಹಣಕಾಸಿನ ಸಮಸ್ಯೆಗಳನ್ನು ತರುತ್ತದೆ, ನೀವು ಮೊದಲು ಯಾವುದೇಹೂಡಿಕೆಮಾಡಿದ್ದರೆ,ಅದರಿಂದ ನೀವು ನಷ್ಟವನ್ನು ಭರಿಸಬೇಕಾಗಬಹುದು. ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಜನರೊಂದಿಗೆ ಉತ್ತಮ ವ್ಯವಹಾರ ನಡೆಸಿ,
ಗಮನಿಸಿ:-ಇಂದುಸರಳ ಹಾಗೂ ಸುಖ ಜೀವನ ನಡೆಸಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಸ್ತೋತ್ರ ಪಠಿಸಿ,
*09,🏹ಧನುಸ್ಸು ರಾಶಿ🏹*
📃,ಅಧ್ಯಾತ್ಮದ ಓದು ಹೊಸ ರೀತಿಯ ಚಿಂತನೆಗಳಿಗೆ ನಿಮ್ಮನ್ನು ಸಂವೇದಿಸಲು ಸೂಕ್ತವಾದ ದಿನವಾಗಿದೆ. ನಿಮ್ಮ ಮನಸ್ಸಿನ ತಾಕಲಾಟಕ್ಕೆ ಅಧ್ಯಾತ್ಮದ ಓದು ಪರಿಹಾರ ಸೂಚಿಸಬಲ್ಲದು. ಆದಷ್ಟು ಮೌನವನ್ನು ಆಚರಿಸುವುದು ಒಳ್ಳೆಯದು.ಸಾಮಾಜಿಕ ಜೀವನವು ಇಂದು ಸುಖಮಯವಾಗಿರುವುದು ಜನರು ಇಂದು ನಿಮ್ಮ ಸೇವೆಯನ್ನು ಬಯಸುವರು, ಗಮನಿಸಿ:-ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರುಇಂದುಜಾಗರೂಕರಾಗಿರಬೇಕು,
ಪರಿಹಾರ:-ಶ್ರೀ ಗುರು ರಾಘವೇಂದ್ರರ ಪ್ರಾರ್ಥನೆ ಮಾಡಿ,
*10,🐊ಮಕರ ರಾಶಿ🐊*
📃,ನಿಮ್ಮದೇ ಅದ ವಿಶೇಷ ಆಲೋಚನೆಗಳು ನಿಮಗೆ ಧನಲಾಭ ವಿಚಾರದಲ್ಲಿ ಬೆಂಬಲಿಸಬಲ್ಲವು. ನಿಮ್ಮ ಆತ್ಮೀಯ ಗೆಳೆಯರು ಇಲ್ಲವೆ ಬಂಧುಗಳು ನಿಮಗೆ ಸಹಾಯ ಹಸ್ತ ನೀಡುವರು. ಹಣಕಾಸಿನ ಪರಿಸ್ಥಿತಿ ಸುಧಾರಿಸುವುದು. ಹಣದ ವಿಷಯದಲ್ಲಿ, ನೀವು ವ್ಯವಹಾರವನ್ನುಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಸಂಗೀತಮತ್ತುಚಿತ್ರಕಲೆಗಾರರಿಗೆ.ವಿಶೇಷಅನುಕೂಲವಾಗಲಿದೆ,
ಗಮನಿಸಿ:- ಈ ದಿನ ನಿಮಗೆ ಲಾಭದಾಯಕ ದಿನವಾಗಲಿದೆ,
ಪರಿಹಾರ:-ಶ್ರೀದುರ್ಗಾಸ್ತೋತ್ರವನ್ನು ಪಠಿಸಿ,
*11,⚱️ಕುಂಭ ರಾಶಿ⚱️*
📃,ಮನೆಯಿಂದ ಹೊರಹೋಗುವಾಗ ನಿತ್ಯ ಉಪಯೋಗಿಸುವ ವಸ್ತುಗಳ ವಿಚಾರದಲ್ಲಿಎಚ್ಚರಿಕೆಯಿಂದಿರಿ, ನೀವುಯಾವುದೇಬೆಲೆಬಾಳುವ.ವಸ್ತುಗಳನ್ನು ಇಂದು ಕಳೆದುಕೊಳ್ಳಬಹುದು. ಕುಟುಂಬದಲ್ಲಿ ನೀವು ಯಾವುದೇ ನಿರ್ಧಾರವನ್ನು ಶಾಂತವಾಗಿತೆಗೆದುಕೊಳ್ಳಬೇಕು.ವಾಹನ ಚಾಲನೆ ಮಾಡುವಾಗ ಮತ್ತುಪ್ರಯಾಣದಲ್ಲಿಎಚ್ಚರದಿಂದ ಇರಿ,
ಗಮನಿಸಿ:- ನಿಮಗೆ ಬೆಂಬಲ ನೀಡುವ ಸ್ನೇಹಿತರೊಂದಿಗೆ ಹೆಚ್ಚು ಮಾತನಾಡಿ,
ಪರಿಹಾರ:-ನಿಮ್ಮ ಕುಲ ದೇವರ ಪ್ರಾರ್ಥನೆ ಮಾಡಿ,
*12,🐋ಮೀನ ರಾಶಿ🐋*
📃,ಏಕಾಂತಮಯವಾದ ಸ್ಥಳವನ್ನು ಬಯಸಿ ಹೋಗಲು ಪ್ರಯತ್ನಿಸುವಿರಿ. ಆದರೆ ಒಂಟಿತನವೂಬೇಸರವನ್ನುಂಟು ಮಾಡುವುದು. ನಿಮ್ಮ ಒಳಗಿನ ತುಮುಲಗಳನ್ನು ಸ್ನೇಹಿತರ ಬಳಿ ಇಲ್ಲವೆ ಬಂಧುಗಳ ಬಳಿ ಹೇಳಿಕೊಂಡು ಮನಸ್ಸನ್ನುಹಗುರಮಾಡಿಕೊಳ್ಳಿ.ವ್ಯಾಪಾರ ಮಾಡುವ ಜನರು ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಅನಗತ್ಯ ಆಲೋಚನೆಗಳು ನಿಮ್ಮಮನಸ್ಸನ್ನುಆಕ್ರಮಿಸಿಕೊಳ್ಳಲು ಬಿಡಬೇಡಿ,
ಗಮನಿಸಿ:- ಇಂದು ಶಾಂತವಾಗಿರಲು ಪ್ರಯತ್ನಿಸಿ,
ಪರಿಹಾರ:-ಶ್ರೀಆಂಜನೇಯನಸ್ಮರಣೆ ಮಾಡಿ,

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading