ಹತ್ತೂರ ಒಡೆಯ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರಿಗೆ ವರ್ಷಾವಧಿ ಜಾತ್ರೋತ್ಸವದ ಸಂಭ್ರಮ ; ಬಲ್ನಾಡು ಭಂಡಾರದ ಮನೆಯಿಂದ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಯತ್ತ ಹೊರಟ ಶ್ರೀ ದಂಡನಾಯಕ ಉಳ್ಳಾಲ್ತಿ ದೈವ – ಇಂದು ರಾತ್ರಿ ಸಣ್ಣರಥೋತ್ಸವ – ನಾಳೆ ರಾತ್ರಿ ದೇವರ ಬ್ರಹ್ಮರಥೋತ್ಸವ – ಪುತ್ತೂರು ಬೆಡಿ

ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ವರ್ಷಾವಧಿ ಜಾತ್ರೋತ್ಸವವು ಅತ್ಯಂತ ಸಂಭ್ರಮ ಸಡಗರದೊಂದಿಗೆ ಜರುಗುತ್ತಿದ್ದು, ಜಾತ್ರೋತ್ಸವದ ಪ್ರಮುಖ ಅಂಗಗಳಲ್ಲಿ ಒಂದಾದ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರವು ಬಲ್ನಾಡು ಭಂಡಾರದ ಮನೆಯಿಂದ ಹೊರಟಿದ್ದು, ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿಧಿಯತ್ತ ಸಾವಿರಾರು ಮಂದಿ ಭಕ್ತಾದಿಗಖ ಸಮ್ಮುಖದಲ್ಲಿ ಕಾಲ್ನಡಿಯ ಮೂಲಕ ಸಾಗಿ ಬರುತ್ತಿದೆ. ರಾತ್ರಿ ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರವು ದೇವಸ್ಥಾನ ತಲುಪಿದ ಬಳಿಕ ಸಣ್ಣ ರಥೋತ್ಸವ ನಡೆಯಲಿದೆ.
ನಾಳೆ(ಎ.17)ರಂದು ರಾತ್ರಿ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವ ಹಾಗೂ ಪುತ್ತೂರು ಬೆಡಿ ನಡೆಯಲಿದೆ.
ಎ.10ರಿಂದ ಜಾತ್ರೋತ್ಸವವು ಆರಂಭಗೊಂಡಿದ್ದು, ಪ್ರತಿದಿನ ರಾತ್ರಿ ಶ್ರೀ ದೇವರ ಉತ್ಸವ ಪೇಟೆ ಸವಾರಿ ನಡೆಯುತ್ತಿದೆ. ಇಂದು ಬೆಳಿಗ್ಗೆ ತುಲಾಭಾರ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರದ ಮನೆಯಿಂದ ಮಾಮೂಲು ಪ್ರಕಾರ ಬರುವ ಕಿರುವಾಳು ಪಾಲಕಿ ಉತ್ಸವವು ಬಲ್ನಾಡಿನಿಂದ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಕಾಲ್ನಡಿಗೆಯಲ್ಲಿ ಹೊರಟಿದೆ. ರಾತ್ರಿ ದೇವಸ್ಥಾನದಲ್ಲಿ ಸಣ್ಣ ರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.
ಎ.‌17ರಂದು ನಾಳೆ ಬೆಳಿಗ್ಗೆ ಉತ್ಸವ, ವಸಂತಕಟ್ಟೆಪೂಜೆ, ದರ್ಶನಬಲಿ, ಬಟ್ಟಲುಕಾಣಿಕೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಶ್ರೀ ದೇವರ ಉತ್ಸವ ನಂತರ ಸಿಡಿಮದ್ದು ಪ್ರದರ್ಶನ, ಪುತ್ತೂರು ಬೆಡಿ, ಶ್ರೀದೇವರ ಬ್ರಹ್ಮರಥೋತ್ಸವ ನಡೆಯಲಿದೆ. ಜಾತ್ರೋತ್ಸವವು ಎ‌.20ರಂದು ಕೊನೆಗೊಳ್ಳಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading