ಸುಳ್ಯ: ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ – ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಕಾರ್ಯಕ್ರಮ ಆಯೋಜನೆ

ಸುಳ್ಯ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂವಿಧಾನ ಶಿಲ್ಪಿ, ಸಾಮಾಜಿಕ ಸಮಾನತೆಯ ಹರಿಕಾರ ಡಾ. ಬಿ.ಆರ್ ಅಂಬೇಡ್ಕರ್ 135ನೇ ಜಯಂತಿ ಆಚರಣೆಯನ್ನು ಇಂದು ಸುಳ್ಯದಲ್ಲಿ ಸುಮಾರು 15 ವರ್ಷಗಳಿಂದ ನಿರ್ಮಾಣ ಕಾರ್ಯ ಕುಂಠಿತ ಗೊಂಡು ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನದ ವಠಾರದಲ್ಲಿ ಇಂದು ಆಯೋಜಿಸಲಾಯಿತು.

. . . . . . . . .

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರುರವರು ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕವಾಗಿ ಮಾತನಾಡಿ “ಡಾ. ಬಿ ಆರ್ ಅಂಬೇಡ್ಕರ್ ರವರು ಸಾಮಾಜಿಕ ಶೋಷಿತವರ್ಗದ ಧ್ವನಿಯಾಗಿ, ತಮ್ಮ ಅಪಾರ ಬುದ್ದಿಮತ್ತೆಯಿಂದ ಸಂವಿಧಾನ ರಚನೆ ಮಾಡಿ ನಮ್ಮ ದೇಶ ಇಂದಿಗೂ ಪ್ರಜಾಪ್ರಭುತ್ವದ ಅಡಿಪಾಯದಲ್ಲಿ ಭದ್ರವಾಗಿದೆ. ಸಂವಿಧಾನದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿಕೊಟ್ಟಿದ್ದಾರೆ. ಆದರೆ ಈಗಿನ ಕಾಲಘಟ್ಟದಲ್ಲಿ ಸಂವಿಧಾನವನ್ನೇ ಒಪ್ಪಿಕೊಳ್ಳುವ ಮನಸ್ಥಿತಿಯಲ್ಲಿ ಇಲ್ಲದ ಒಂದು ವರ್ಗ ಅಂಬೇಡ್ಕರ್ ರವರ ಮೂಲ ಆಶಯಕ್ಕೆ ವಿರುದ್ಧವಾಗಿರುವುದು ಅಪಾಯಕಾರಿಯಾಗಿದೆ. ಸುಳ್ಯದ ಈ ಅಂಬೇಡ್ಕರ್ ಭವನ ನಿರ್ಮಾಣ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವುದು ಮೀಸಲು ಕ್ಷೇತ್ರವಾದ ಸುಳ್ಯಕ್ಕೆ ಕಪ್ಪು ಚುಕ್ಕೆಯಾಗಿದೆ. ನಮ್ಮ ಸರಕಾರ ಈಗಾಗಲೇ ಉಳಿದಿರುವ ನಿರ್ಮಾಣಕಾರ್ಯ ಪೂರ್ಣಗೊಳಿಸಲು ಅನುದಾನ ಬಿಡುಗಡೆಗೊಳಿಸಿದ್ದು, ಕಾಮಗಾರಿ ಹಸ್ತಾಂತರ ಗೊಂಡಿರುತ್ತದೆ. ಎಲ್ಲರ ಅಪೇಕ್ಷೆ ಮತ್ತು ಪ್ರಯತ್ನದಿಂದ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಂಡು ಮುಂದಿನ ಬಾರಿ ಅಂಬೇಡ್ಕರ್ ಭವನದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ ನಡೆಯುವಂತಾಗಲಿ” ಎಂದು ಹೇಳಿದರು.

. . . . . . .

ದ.ಕ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ “ಅಂಬೇಡ್ಕರ್ ಆಶಯ ವಿಚಾರದಾರೆಗಳು ಭಾರತದಲ್ಲಿ ವಿಶೇಷವಾದ ಸಾಮಾಜಿಕ ಕ್ರಾಂತಿಯನ್ನು ಉಂಟು ಮಾಡಿದೆ. ಶೋಷಿತ ವರ್ಗದ ಅಸ್ಪೃಶ್ಯತೆ ದೂರವಾಗಳು ಅಂಬೇಡ್ಕರ್ ರವರ ಚಿಂತನೆ ಮತ್ತು ಸಂವಿಧಾನ ಮೂಲ ಕಾರಣವಾಗಿದೆ. ಪರಿಶಿಷ್ಟರು ಇಂದು ಸಾಮಾಜಿಕವಾಗಿ ಮುಂಚೂಣಿಯಲ್ಲಿರಬೇಕಾದರೆ ಅದು ಅಂಬೇಡ್ಕರ್ ರವರ ಕೊಡುಗೆ” ಎಂದು ಈ ಸಂದರ್ಭದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾಯರ್ತೋಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ವೆಂಕಪ್ಪ ಗೌಡ ಮಾತನಾಡಿ “ಸಂವಿಧಾನದ ಮೂಲಕ ಡಾ. ಬಿ ಆರ್ ಅಂಬೇಡ್ಕರ್ ರವರು ಸಮ ಸಮಾಜ ನಿರ್ಮಾಣಕ್ಕೆ ತಳಹದಿಯನ್ನು ಹಾಕಿಕೊಟ್ಟವರು. ವಿಶ್ವದಲ್ಲಿ ಭಾರತ ಇಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಗಟ್ಟಿಯಾಗಿ ಇರಬೇಕಾದರೆ ಅದು ಅಂಬೇಡ್ಕರ್ ರವರ ಕೊಡುಗೆ. ಮೀಸಲಾತಿ ಮೂಲಕ ಪರಿಶಿಷ್ಟ ಸಮುದಾಯದ ಜನರನ್ನು ಸಮಾಜದ ಮುನ್ನೆಲೆಗೆ ತರುವಲ್ಲಿ ಸಂವಿಧಾನದ ಆಶಯದಿಂದ ಆಗಿದೆ” ಎಂದು ಹೇಳಿದರು.

ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸಂವಿಧಾನ ಪೀಠಿಕೆ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪಿ ಎಸ್ ಗಂಗಾಧರ್, ಕೆ.ಗೋಕುಲ್ ದಾಸ್, ನಂದರಾಜ್ ಸಂಕೇಶ್, ಶಾಫಿ ಕುತ್ತಮೊಟ್ಟೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಶಶಿಧರ್ ಎಂ.ಜೆ, ರಾಜು ಪಂಡಿತ್, ಜಿ ಕೆ ಹಮೀದ್, ಎಸ್ ಕೆ ಹನೀಪ್, ರಂಜಿತ್ ರೈ ಮೇನಾಲ, ವಿಜೇಶ್ ಹಿರಿಯಡ್ಕ, ಕೇಶವ ಮೊರಂಗಲ್ಲು, ಆನಂದ ಬೆಳ್ಳಾರೆ, ಆದಂ ಕಡಬ, ಆಶೀಶ್ ಕೃಷ್ಣಪ್ಪ, ಶ್ರೀಮತಿ ಗೀತಾ ಕೋಲ್ಚಾರ್, ಶ್ರೀಮತಿ ಅನುಸೂಯ, ಶ್ರೀಮತಿ ತಿರುಮಲೇಶ್ವರಿ, ಶ್ರೀಮತಿ ಸುಂದರಿ ಮುಂಡಡ್ಕ, ಸಿದ್ದಿಕ್ ಕೊಕ್ಕೊ, ಶರೀಪ್ ಕಂಠಿ, ಡೇವಿಡ್ ಧೀರಾ ಕ್ರಾಸ್ತಾ, ರಕ್ಷಿತ್ ದೊಡ್ಡಡ್ಕ, ಚಂದ್ರನ್ ಕೂಟೆಲು, ಅರುಣಾಚಲಂ ಕೂಟೆಲು, ಶರವಣ ಬೆಂಗಮಲೆ, ಪ್ರೇಮಹರೀಶ್ವರನ್ ಗಾಂಧಿ, ಮಧುಸೂಧನ ಬೂಡು, ಅಬ್ಬಾಸ್ ಎ ಬಿ, ಜಂಶೀರ್ ಸಾಲೆಕ್ಕಾರ್, ಮಂಜುನಾಥ್ ಮಡ್ತಿಲ ಉಪಸ್ಥಿತರಿದ್ದರು.

ಸೂಡ ಅಧ್ಯಕ್ಷ ಕೆ.ಎಂ ಮುಸ್ತಫಾ ಸ್ವಾಗತಿಸಿ ಎಸ್.ಸಿ ಘಟಕ ಅಧ್ಯಕ್ಷ ಮಹೇಶ್ ಬೆಳ್ಳಾರ್ಕರ್ ವಂದಿಸಿದರು. ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಭವಾನಿಶಂಕರ್ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading