ಮೆದಿನಡ್ಕ : ಮುತ್ತುಮಾರಿಯಮ್ಮ ದೇವಾಲಯದಲ್ಲಿ ನಿರ್ಮಾಣವಾದ ಇಂಟರ್ ಲಾಕ್ ಉದ್ಘಾಟನೆ

ಅಜ್ಜಾವರ ಗ್ರಾಮದ ಮೆದಿನಡ್ಕ ಮುತ್ತುಮಾರಿಯಮ್ಮ ದೇವಾಲಯದಲ್ಲಿ ರೂ 3.50ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ನೆಲಹಾಸು(ಇಂಟರ್ ಲಾಕ್) ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ಮುರುಳ್ಯ ನೆರವೇರಿಸಿದರು. ಈ ಸಂದರ್ಭದಲ್ಲಿ ಸುಭೋದ್ ಶೆಟ್ಟಿ ಮೇನಾಲ, ರಾಜೇಶ್ ರೈ ಮೇನಾಲ, ವಿಕ್ರಂ ಅಡ್ಪಂಗಾಯ, ವಸಂತ ನಡುಬೈಲು,‌ ಕಿಟ್ಟಣ್ಣ ರೈ‌ ಮೇನಾಲ, ನಯನ ರೈ ಮೇನಾಲ, ಚಂದ್ರಶೇಖರ ಕೇರ್ಪಳ, ಚಂದ್ರಶೇಖರ ನೆಡಿಲು, ದೇವಸ್ಥಾನದ ಅಧ್ಯಕ್ಷರಾದ ನಾಚಿಮುತ್ತು, ಪ್ರಧಾನ ಕಾರ್ಯದರ್ಶಿ ರಮೇಶ್ ಮೇದಿನಡ್ಕ, ಗೌರವಾಧ್ಯಕ್ಷ ದಯಾಳ್ ಮೆದಿನಡ್ಕ, ಸದಸ್ಯರಾದ ಶಿವಪಾಕ್ಯಂ, ದೇವಸ್ಥಾನದ ಅರ್ಚಕರಾದ ಯೋಗರಾಜ್ , ಕರುಣಾಕರ, ರಾಧಾಕೃಷ್ಣ ಸೇರಿದಂತೆ ಊರ ಭಕ್ತಾದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿ ವತಿಯಿಂದ ಮಾನ್ಯ ಶಾಸಕರನ್ನು ಮತ್ತು ಗುತ್ತಿಗೆದಾರ ಚಂದ್ರಶೇಖರ್ ಕೇರ್ಪಳ ರವರನ್ನು ಗೌರವಿಸಲಾಯಿತು. ರಮೇಶ್ ಮೇದಿನಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading