ಅನಾರೋಗ್ಯದಿಂದಿರುವ ವ್ಯಕ್ತಿಗೆ ಒಕ್ಕಲಿಗ ಸಂಘದಿಂದ ಧನ ಸಹಾಯ ವಿತರಣೆ

ಸುಬ್ರಹ್ಮಣ್ಯ ಏಪ್ರಿಲ್ 10 : ಸುಬ್ರಹ್ಮಣ್ಯ ಗ್ರಾಮದ ಅಗ್ರಹಾರ ಶಿವಪ್ಪಗೌಡ(ರಾಮಣ್ಣ) ಹಾಗೂ ಜಾನಕಿ ಅವರ ಪುತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ನೌಕರರಾಗಿರುವ ರವಿ ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಈಗಾಗಲೇ ಆಸ್ಪತ್ರೆಗೆ ದಾಖಲಾಗಿ ತುಂಬಾ ವೆಚ್ಚವನ್ನು ಮಾಡಿದ್ದು, ಬಡತನದಲ್ಲಿರುವ ಅವರ ಕುಟುಂಬದ ಆರ್ಥಿಕ ನೆರವಿಗೆ ಸುಬ್ರಹ್ಮಣ್ಯ ಗ್ರಾಮ ಒಕ್ಕಲಿಗ ಗೌಡ ಸಮಾಜ ಬಾಂಧವರು ಒಟ್ಟು ಸೇರಿ ರೂ 25,000/- ಮೊತ್ತವನ್ನು ಅವರ ಮನೆಗೆ ತೆರಳಿ ರವಿಯವರು ಶೀಘ್ರ ಗುಣಮುಖರಾಗಲೆಂದು ಆ ದೇವರಲ್ಲಿ ಪ್ರಾರ್ಥಿಸಿ ಧನಸಹಾಯವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಒಕ್ಕಲಿಗ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ಡಾ.ಎ.ಎ ತಿಲಕ್, ಕಾರ್ಯದರ್ಶಿ ವಿಶ್ವನಾಥ ನಡುತೋಟ, ಪದಾಧಿಕಾರಿಗಳಾದ ಡಾ. ಶಿವಕುಮಾರ್ ಹೊಸಳ್ಳಿಕೆ, ಗೋಪಾಲ ಎಣ್ಣೆಮಜಲು, ಅಶೋಕ್ ಕುಮಾರ್ ಮೂಲೆಮಜಲು, ಗಿರಿಧರ ಸ್ಕಂದ, ಉಮೇಶ್ ಹೊಸಳ್ಳಿಕೆ, ಈಶ್ವರ ಗೌಡ ಅರಂಪಾಡಿ, ಚಂದ್ರಶೇಖರ ಪಾಾನತ್ತಿಲ, ರವಿಯವರ ತಮ್ಮ ನಾರಾಯಣ ಅಗ್ರಹಾರ ಮತ್ತಿತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading