ಇಂದಿನ(ಏಪ್ರಿಲ್ 09) ಕ್ಯಾಂಪ್ಕೋ ಮಾರುಕಟ್ಟೆ ಮಾಹಿತಿ – ಕಾಳುಮೆಣಸು ಧಾರಣೆಯಲ್ಲಿ ಮತ್ತೆ ಏರಿಕೆ, ರಬ್ಬರ್ ಬೆಲೆಯಲ್ಲಿ ಅಲ್ಪ ಇಳಿಕೆ ; ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಇಂದಿನ ಮಾರುಕಟ್ಟೆ ಧಾರಣೆಯನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ದಿನಾಂಕ : 9 ಏಪ್ರಿಲ್ 2026
ವಾರ : ಗುರುವಾರ
ಮಾಹಿತಿ ಕೃಪೆ : ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ಪ್ರಮುಖ ಕೃಷಿ ಉತ್ಪನ್ನಗಳ ಇಂದಿನ(ಏಪ್ರಿಲ್ 09) ಮಾರುಕಟ್ಟೆ ಧಾರಣೆಯನ್ನು ಇಲ್ಲಿ ನೀಡಲಾಗಿದ್ದು, ಈ ಮಾಹಿತಿಯನ್ನು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಳ್ಳಲಾಗಿದೆ.

ಅಡಿಕೆ ಧಾರಣೆ
ಹೊಸ ಅಡಿಕೆ : 260-305-460-497/500
ಹಳೆ ಅಡಿಕೆ : 395-460-552/555
ಡಬಲ್ ಚೋಲ್ : 390-460-552/555
ಫಟೋರ : 280-400 ರಿಂದ 410
ಉಳ್ಳಿಗಡ್ಡೆ : 165-290
ಕರಿಗೋಟು : 230-265
(ಅಡಿಕೆಯ ಗಾತ್ರ ಮತ್ತು ಗುಣಮಟ್ಟದ ಮೇಲೆ ದರ ನಿಗದಿ ಮಾಡಲಾಗುತ್ತದೆ)

ಇತರ ಪ್ರಮುಖ ಕೃಷಿ ಉತ್ಪನ್ನಗಳ ಧಾರಣೆ
ಕಾಳುಮೆಣಸು : 575-675
ಹಸಿ ಕೊಕ್ಕೋ : 70-100
ಒಣ ಕೊಕ್ಕೋ : 270-300
ಕೊಬ್ಬರಿ : 150-180
ಇಂದು ಗುರುವಾರ(ಏಪ್ರಿಲ್ 9) ಕಾಳುಮೆಣಸು ಧಾರಣೆಯು ಮತ್ತೆ ಚೇತರಿಕೆ ಕಂಡಿದೆ. ನಿನ್ನೆಯ(ಏಪ್ರಿಲ್ 8) ಗರಿಷ್ಠ ಬೆಲೆ ₹670 ಕ್ಕೆ ಹೋಲಿಸಿದರೆ ಇಂದು ಪ್ರತಿ ಕೆಜಿಗೆ 5 ರೂಪಾಯಿ ಏರಿಕೆಯಾಗಿದ್ದು, ₹675 ತಲುಪಿದೆ.

ರಬ್ಬರ್ ಧಾರಣೆ
ಗ್ರೇಡ್ : 226.00
ಲಾಟ್ : 198.00
ಸ್ಕ್ರ್ಯಾಪ್ 1ನೇ ದರ್ಜೆ : 137.50
ಸ್ಕ್ರ್ಯಾಪ್ 2ನೇ ದರ್ಜೆ : 128.50
ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ರಬ್ಬರ್ ಧಾರಣೆಯಲ್ಲಿ ಇಂದು ಗುರುವಾರ(ಏಪ್ರಿಲ್ 09) ಅಲ್ಪ ಇಳಿಕೆ ಕಂಡುಬಂದಿದೆ. ನಿನ್ನೆಯ(ಏಪ್ರಿಲ್ 8) ದರಕ್ಕೆ ಹೋಲಿಸಿದರೆ ಗ್ರೇಡ್ ರಬ್ಬರ್ ಬೆಲೆಯಲ್ಲಿ ಪ್ರತಿ ಕೆಜಿಗೆ 2 ರೂಪಾಯಿ ಹಾಗೂ ಲಾಟ್ ರಬ್ಬರ್ ಬೆಲೆಯಲ್ಲಿ 1 ರೂಪಾಯಿ ಇಳಿಕೆಯಾಗಿದೆ. ಸ್ಕ್ರ್ಯಾಪ್ ರಬ್ಬರ್ ಬೆಲೆಗಳೂ ಕೂಡ ತಲಾ 50 ಪೈಸೆಗಳಷ್ಟು ಅಲ್ಪ ಕುಸಿತ ಕಂಡಿವೆ.

ಕೃಷಿಕರ ಗಮನಕ್ಕೆ : ಈ ಮೇಲಿನ ಮಾರುಕಟ್ಟೆ ಧಾರಣೆಯು ಇಂದಿನ ಮಾರುಕಟ್ಟೆ ಸ್ಥಿತಿ-ಗತಿಯನ್ನು ಆಧರಿಸಿದ್ದು, ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading