ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಸಿದ್ಧವಾಗುತ್ತಿದೆ ನಿಡ್ವಾಳ ಕ್ಷೇತ್ರ – 4 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ; ಎ.24ರಿಂದ ಮೇ.03ರ ತನಕ ಕ್ಷೇತ್ರದಲ್ಲಿ ನಡೆಯಲಿದೆ ಉತ್ಸವ

ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುವ ಮಹಿಮಾತ್ಮಕ ಕ್ಷೇತ್ರ ನಿಡ್ವಾಳದ ಮಹಾವಿಷ್ಣು ದೇವಸ್ಥಾನವು ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗುತ್ತಿದೆ. ಎ.24ರಿಂದ ಮೇ.03ರ ತನಕ ಕ್ಷೇತ್ರದಲ್ಲಿ ಉತ್ಸವ ನಡೆಯಲಿದೆ. ಇದೀಗ ಸಕಲ ಭಕ್ತರ ಸಹಕಾರದಲ್ಲಿ ಶ್ರೀ ದೇವಳದ ಜೀರ್ಣೋದ್ಧಾರದ ಅಂತಿಮ ಕೆಲಸ ಕಾರ್ಯಗಳು ಭರದಿಂದ ನಡೆಯುತ್ತಿದೆ. 

ಸುಳ್ಯ ತಾಲೂಕು, ಐವತ್ತೊಕ್ಲು ಗ್ರಾಮದ ನಿಡ್ವಾಳ ಎಂಬಲ್ಲಿ ಪ್ರಕೃತಿಯ ಮಡಿಲಲ್ಲಿ ಶ್ರೀ ಮಹಾವಿಷ್ಣು ದೇವಸ್ಥಾನವು ನೂರಾರು ವರ್ಷಗಳ ಹಿಂದೆ ಪ್ರತಿಷ್ಠಾಪನೆಯಾಗಿದೆ. ಹಾಲು ಪಾಯಸ ಪ್ರಿಯನಾದ ಶ್ರೀ ದೇವರನ್ನು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದಲ್ಲಿ ಮಾಂಗಲ್ಯ ಯೋಗ, ಸಂತಾನ ಭಾಗ್ಯ ಮತ್ತು ನಮ್ಮಇಷ್ಟಾರ್ಥಗಳು ಸಿದ್ಧಿಯಾಗುವುದು. ತುಳುನಾಡಿನ ಅವಳಿ ವೀರ ಸಹೋದರರಾದ ಕೋಟಿ-ಚೆನ್ನಯರು ಎಣ್ಮೂರಿನ ಬಲ್ಲಾಳ ಅರಸರೊಡನಿರುವಾಗ ಶ್ರೀ ಮಹಾವಿಷ್ಣುದೇವರನ್ನು ಆರಾಧಿಸಿಕೊಂಡಿದ್ದು ಕ್ರಿಶ. 1585ರಲ್ಲಿ ಪಂಜ ಹಾಗೂಎಣ್ಮೂರಿನ ಬಲ್ಲಾಳ ಅರಸರಿಗೆ ನಡೆದ ಯುದ್ಧದಲ್ಲಿ ಪಾಲ್ಗೊಂಡು,ವಿಜಯ ಮಾಲೆಯನ್ನು ಎಣ್ಮೂರಿಗೆ ತಂದುಕೊಟ್ಟು, ದೈವತ್ವಕ್ಕೇರುವ ಸಂದರ್ಭದಲ್ಲಿ ಶ್ರೀ ಮಹಾವಿಷ್ಣು ದೇವರ ಪೂಜೆ ನಡೆದು ತೀರ್ಥ ಸ್ವೀಕರಿಸಿದ ನಂತರವೇ ಇಹಲೋಕ ತ್ಯಜಿಸಿದರು ಎಂದು ತಿಳಿದುಬರುತ್ತದೆ.

4 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ : ಶ್ರೀ ದೇವರ ಗರ್ಭಗುಡಿ, ಪ್ರದಕ್ಷಿಣೆ ಬರುವ ರೀತಿಯಲ್ಲಿ ಶ್ರೀ ಗಣಪತಿದೇವರ ಗುಡಿ, ತೀರ್ಥ ಮಂಟಪ, ಸುತ್ತುಗೋಪುರ, ಮುಖ್ಯದ್ವಾರ, ತೀರ್ಥ ಬಾವಿ, ಆವರಣಗೋಡೆ, ಅನ್ನಛತ್ರ, ಸಭಾಭವನ ಮಾತ್ರವಲ್ಲದೆ ಪ್ರಸ್ತುತ ಇರುವ ನಾಗ ದೇವರು, ಪ್ರಧಾನದೈವ ಮತ್ತು ಪರಿವಾರ ದೈವಗಳಿಗೆ ಮೂಲದಲ್ಲಿ ಸ್ಥಾನ ಚಾವಡಿಗಳ ನಿರ್ಮಾಣ ಕಾರ್ಯವು ಅಂದಾಜು ರೂಪಾಯಿ 4 ಕೋಟಿ ಮೊತ್ತ ತಗುಲಲಿದೆ. ಪಾದುಕಾನ್ಯಾಸ ಮತ್ತು ಗರ್ಭಾನ್ಯಾಸದೊಂದಿಗೆ ಗರ್ಭಗುಡಿ ಮತ್ತು ತೀರ್ಥ ಮಂಟಪ, ಸುತ್ತುಪೌಳಿ ಮೊದಲಾದ ಕೆಲಸಗಳು ಪೂರ್ಣಗೊಳ್ಳುತ್ತಿದ್ದು, ನೆಲಕ್ಕೆ ಶಿಲೆಹಾಸುವುದು ಸೇರಿದಂತೆ ಅನೇಕ ಕೆಲಸಗಳು ಭರದಿಂದ ಸಾಗುತ್ತಿದೆ.

ಧನ ಸಹಕಾರ ಅಗತ್ಯ : ದೇವಳದಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯ ನಡೆಸಲು ಭಕ್ತರು ಉದಾರದೇಣಿಗೆಯನ್ನಿತ್ತು ಸಹಕರಿಸಬೇಕಾಗಿ ಆಡಳಿತ ಮಂಡಳಿ, ಪುನರ್ ನಿರ್ಮಾಣ ಸಮಿತಿ ವಿನಂತಿಸಿದೆ.  ಧನ ಸಹಕಾರ ನೀಡುವವರು ಕರ್ನಾಟಕ ಬ್ಯಾಂಕ್ ನ ನಿಂತಿಕಲ್ ಶಾಖೆಯ ಶ್ರೀ ದೇವಳದ ಖಾತೆ ಸಂಖ್ಯೆ 9912000100005801ಕ್ಕೆ ಜಮೆ ಮಾಡಲು ವಿನಂತಿಸಿದೆ. ಐ.ಎಫ್.ಎಸ್.ಸಿ ಕೋಡ್ .ಎ.ಆರ್ ಬಿ0000991 ಆಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading