“ಸಮಾಜಮುಖಿ ಸೇವೆಯು ತ್ರಿಚಕ್ರ ಸಾರಥಿಗಳ ಧ್ಯೇಯವಾಗಲಿ” : ರಾಜೇಶ್ ಎನ್.ಎಸ್ ಅಭಿಮತ ; ಕುಕ್ಕೆ ಆಟೋ ಚಾಲಕ ಸಂಘದ ಪದಗ್ರಹಣ

ಸುಬ್ರಹ್ಮಣ್ಯ : “ಜನತೆಗೆ ಸೇವೆ ನೀಡುವ ಮೂಲಕ ಉತ್ತಮ ಕಾರ್ಯವನ್ನು ಅಟೋ ಸಂಘವು ನಡೆಸುತ್ತಿದೆ. ಜನ ಹಿತ ಕಾರ್ಯವನ್ನು ನೆರವೇರಿಸುವುದು ತ್ರಿಚಕ್ರ ಸಾರಥಿಗಳ ಧ್ಯೇಯವಾಗಬೇಕು. ಪ್ರತಿಯೊಬ್ಬ ಚಾಲಕರೂ ಸಮಾಜಸೇವೆಗೆ ಮುಂದಡಿಯಿಟ್ಟರೆ ಸಂಘಕ್ಕೆ ಕೂಡಾ ಮತ್ತಷ್ಟು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ” ಎಂದು ನಿಕಟಪೂರ್ವ ಗ್ರಾ.ಪಂ ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್ ಹೇಳಿದರು. ಸುಬ್ರಹ್ಮಣ್ಯದ ಕುಕ್ಕೆಶ್ರೀ ಅಟೋ ಚಾಲಕ ಮ್ಹಾಲಕರ ಸಂಘದ 2026-27ನೇ ಸಾಲಿನ ಅಧ್ಯಕ್ಷರಾದ ಭುವನೇಶ್ ಅಗೋಳಿಕಜೆ ಮತ್ತು ತಂಡದ ಪದಗ್ರಹಣ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

ಪದಪ್ರಧಾನ : ನೂತನ ಅಧ್ಯಕ್ಷರಾದ ಭುವನೇಶ್ ಅಗರಿಕಜೆ ಅವರಿಗೆ ಸ್ಥಾಪಕಾಧ್ಯಕ್ಷರಾದ ಉಮೇಶ್ ಕೆ.ಎನ್, ನಿರ್ಗಮನ ಸಂಘಟನಾ ಕಾರ್ಯದರ್ಶಿ ಯಶೋಧರ ಕಂದಡ್ಕ, ನಿರ್ಗಮನ ಕಾರ್ಯದರ್ಶಿ ರಮಾಕಾಂತ ನಾಯಕ್ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ, ಕೋಶಾಧಿಕಾರಿ ಗಣೇಶ್ ಆಗೋಳಿಕಜೆ, ಉಪಾಧ್ಯಕ್ಷ ಶರತ್ ದೇವರಗದ್ದೆ, ಜತೆ ಕಾರ್ಯದರ್ಶಿ ಸದಾನಂದ ದೇವರಗದ್ದೆ , ಸಂಘಟನಾ ಕಾರ್ಯದರ್ಶಿ ಕುಮಾರ್ ನಾಯ್ಕ್ ನೂಚಿಲ, ನಿರ್ದೇಶಕರಾದ ಪ್ರಶಾಂತ್ ಮುಜೂರು, ದಿನೇಶ್ ಗಾಂಗೇಯ, ಮಹೇಶ್ ಗುಡ್ಡೆಮನೆ, ಉಷಾ ಕುಮಾರ್ ಕುಲ್ಕುಂದ, ತೇಜಕುಮಾರ್ ಆಗೋಳಿಕಜೆ, ಮಹೇಶ್‌ಚಂದ್ರ ನೂಚಿಲ ಪದಪ್ರಧಾನ ಮಾಡಿದರು.

ಸನ್ಮಾನ : ಸಮಾರಂಭದಲ್ಲಿ ಹಿರಿಯ ಅಟೋ ಮ್ಹಾಲಕರು ಮತ್ತು ನಿವೃತ್ತ ಮುಖ್ಯಗುರು ಪುಂಗವ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸ್ಥಾಪಕಾಧ್ಯಕ್ಷರಾದ ಉಮೇಶ್ ಕೆ.ಎನ್ ಸಭಾಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ರತ್ನಾಕರ ಸುಬ್ರಹ್ಮಣ್ಯ, ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ದಿನೇಶ್ ಬಿ.ಎನ್, ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷರಾದ ಡಾ.ರವಿ ಕಕ್ಕೆಪದವು, ಸುಬ್ರಹ್ಮಣ್ಯ-ಐನೆಕಿದು ಸಹಕಾರಿ ಸಂಘದ ಅಧ್ಯಕ್ಷರಾದ ಎಚ್.ಎಲ್.ವೆಂಕಟೇಶ್, ಕುಕ್ಕೆ ಶ್ರೀ ಅಟೋ ಸಂಘದ ಸ್ಥಾಪಕಾಧ್ಯಕ್ಷರಾದ ಕೇಶವ ಅರಂಪಾಡಿ ಮುಖ್ಯ ಅತಿಥಿಗಳಾಗಿದ್ದರು. 
ನಿಯೋಜಿತ ಅಧ್ಯಕ್ಷರಾದ ಭುವನೇಶ್ ಅಗೋಳಿಕಜೆ, ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ, ನಿರ್ಗಮನ ಸಂಘಟನಾ ಕಾರ್ಯದರ್ಶಿ ಯಶೋಧರ ಕಂದಡ್ಕ, ನಿರ್ಗಮನ ಕಾರ್ಯದರ್ಶಿ ರಮಾಕಾಂತ್ ನಾಯಕ್ ವೇದಿಕೆಯಲ್ಲಿದ್ದರು.
ರಾಜ್ಯ ವಾಲಿಬಾಲ್ ತೀರ್ಪುಗಾರರಾದ ದೀಪಕ್ ನಂಬಿಯಾರ್ ನಿರೂಪಿಸಿದರು. ಕಾರ್ಯದರ್ಶಿ ವಿಘ್ನೇಶ್ ದೇವರಗದ್ದೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುಮಾರ ನಾಯ್ಕ್ ನೂಚಿಲ ವಂದಿಸಿದರು. ಸದಸ್ಯ ಚಂದ್ರಶೇಖರ ಮಾನಾಡು ಪ್ರಾರ್ಥನೆ ಹಾಡಿದರು. ಕಾರ್ಯಕ್ರಮದಲ್ಲಿ ಸಂಘದ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading