ಯೇನೆಕಲ್ಲು : ಮಹಿಮಾತ್ಮಕ ಬಚ್ಚನಾಯಕ ದೈವದ ಭಕ್ತಿ ಶ್ರದ್ಧೆಯ ನೇಮೋತ್ಸವ

ಸುಬ್ರಹ್ಮಣ್ಯ : ಕಡಬ ತಾಲೂಕಿನ ಯೇನೆಕಲ್ಲು ಗ್ರಾಮದ ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಬಚ್ಚನಾಯಕ ದೈವಸ್ಥಾನದಲ್ಲಿ ಬುಧವಾರ ಇತಿಹಾಸ ಪ್ರಸಿದ್ಧ ಹಾಗೂ ಮಹಿಮಾತ್ಮಕ ಶ್ರೀ ಬಚ್ಚನಾಯಕ ದೈವದ ನೇಮೋತ್ಸವವು ಶ್ರದ್ಧಾ ಭಕ್ತಿಯಿಂದ ಜರುಗಿತು. ಸಹಸ್ರಾರು ಭಕ್ತಾದಿಗಳು ಕಾರಣೀಕ ದೈವದ ದರುಶನ ಪಡೆದು ಪ್ರಸಾದ ಸ್ವೀಕರಿಸಿ ಕೃತಾರ್ಥರಾದರು. ಅಲ್ಲದೆ ಕಾರಣೀಕ ದೈವದ ನೇಮ ನಡಾವಳಿಗಳನ್ನು ವೀಕ್ಷಿಸಿದರು.

ಹರಿಕೆ ಸಮರ್ಪಣೆ : ಈ ಸಂದರ್ಭದಲ್ಲಿ ಭಕ್ತಾಧಿಗಳು ದೈವದಲ್ಲಿ ಅಭೀಷ್ಠ ಪೂರೈಕೆಗಾಗಿ ಅರಿಕೆಗಳನ್ನು ಮಾಡಿದರು. ಅಭಿಷ್ಠಗಳು ಹಾಗೂ ಇಷ್ಟಾರ್ಥಗಳು ಪೂರೈಕೆಯಾದ ಸಹಸ್ರಾರು ಭಕ್ತರು ಹರಕೆಯನ್ನು ತೀರಿಸಿದರು. ಮಾರುದ್ದದ ಸಾಲಿನಲ್ಲಿ ನಿಂತು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು. ಕೆಲವು ಭಕ್ತಾದಿಗಳು ದೈವಕ್ಕೆ ಭಕ್ತಿ ಹರಕೆಯ ರೂಪದಲ್ಲಿ ಚಿನ್ನದ ಮೀಸೆಯನ್ನು ಅರ್ಪಿಸಿದರು. ಕೆಲವರು ಸೀರೆ, ದೀಪಗಳನ್ನು ಸಮರ್ಪಿಸಿದರು. ಮಂಗಳವಾರ ರಾತ್ರಿಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೈವಸ್ಥಾನಕ್ಕೆ ಆಗಮಿಸುತ್ತಿದ್ದರು. ಬುಧವಾರ ಬೆಳಗ್ಗೆ ಅತ್ಯಧಿಕ ಸಂಖ್ಯೆಯಲ್ಲಿ ದೂರ-ದೂರುಗಳಿಂದ ಭಕ್ತರು ಆಗಮಿಸಿ ಶ್ರೀ ದೈವದ ಪ್ರಸಾದ ಸ್ವೀಕರಿಸಿದರು. 

ಕನ್ನಡದಲ್ಲಿ ನುಡಿ : ಬಚ್ಚನಾಯಕ ದೈವವು ಭಕ್ತರಿಗೆ ಕನ್ನಡದಲ್ಲಿ ಅಭಯ ನೀಡಿತು. ಅರಿಕೆಗಳನ್ನು ಮಾಡಿದ ಭಕ್ತರಿಗೆ ಮತ್ತು ಅಭಿಷ್ಠೆಗಳನ್ನು ಈಡೇರಿದವರಿಗೆ ಕನ್ನಡದಲ್ಲಿ ಅಭಯ ವ್ಯಾಖ್ಯೆ ನೀಡಿತು. ಭಕ್ತಾಧಿಗಳಿಗೆ ಮಂಗಳವಾರ ರಾತ್ರಿ ಅನ್ನಸಂತರ್ಪಣೆ ಮತ್ತು ಬುಧವಾರ ಬೆಳಗ್ಗೆ ಉಪಹಾರ ಹಾಗೂ ಮದ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಅಲ್ಲದೆ ಆಗಮಿಸಿದ ಭಕ್ತಾಧಿಗಳಿಗೆ ಮಜ್ಜಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು.ಅಲ್ಲದೆ ಭಕ್ತರು ಸೇವಾರ್ಥವಾಗಿ ಕುಡಿಯುವ ನೀರು ವ್ಯವಸ್ಥೆ ಮಾಡಿದ್ದರು.
ಕೋಟಿ ನಾಯಕ ನೇಮೋತ್ಸವ : ಬಚ್ಚನಾಯಕ ದೈವದ ಬಳಿಕ ಕೋಟಿನಾಯಕ ದೈವದ ನೇಮೋತ್ಸವ ನೆರವೇರಿತು. ಭಕ್ತರು ಶ್ರದ್ಧಾ ಭಕ್ತಿಯಿಂದ ಶ್ರೀ ದೈವದ ನೇಮ ನಡಾವಳಿಗಳನ್ನು ವೀಕ್ಷಿಸಿ ಪ್ರಸಾದ ಸ್ವೀಕರಿಸಿದರು. ರಾತ್ರಿ ಪ್ರಧಾನಿ ಮೊದಲಾದ ದೈವಗಳ ನೇಮ ನಡೆಯಿತು. ಬಳಿಕ ಭಂಡಾರ ಹೊರಡುವ ಕಾರ್ಯಕ್ರಮ ನೆರವೇರಿತು.ಈ ಮೊದಲು ಶ್ರೀ ಉಳ್ಳಾಕುಲು, ಉಳ್ಳಾಳ್ತಿ ಹಾಗೂ ಬಚ್ಚನಾಯಕ ದೈವಸ್ಥಾನದಲ್ಲಿ ಉಗ್ರಾಣ ಮುಹೂರ್ತ ಮತ್ತು ಮುಹೂರ್ತ ತೋರಣ ನಡೆಯಿತು. ಬಳಿಕ ಉಳ್ಳಾಕುಲು ಮೊದಲಾದ ದೈವಗಳ ನೇಮ, ಉಳ್ಳಾಳ್ತಿ ವಗೈರೆ ದೈವಗಳ ನೇಮ, ಉಡ್ಡೋತ್ತಾರು ಮತ್ತು ಕುಮಾರ ದೈವಗಳ ನೇಮ ನೆರವೇರಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading