ವಳಲಂಬೆ : ಸತ್ಯನಾರಾಯಣ ದೇವರ ಪೂಜೆ, ದೈವಗಳ ನೇಮೋತ್ಸವ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24 ರಂದು ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ಮಾ.25 ರಂದು ದೈವಗಳ ನೇಮೋತ್ಸವ ನಡೆಯಿತು.
ಮಾ.24 ರಂದು ಗಣಪತಿ ಹೋಮ ಮತ್ತು ಶತರುದ್ರಾಭಿಷೇಕ ಹಾಗೂ 41ನೇ ವರ್ಷದ ಸಾಮೂಹಿಕ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ, ರಾತ್ರಿ ಶ್ರೀ ದುರ್ಗಾ ಪೂಜೆ ಮತ್ತು ಕಾರ್ತಿಕ ಪೂಜೆ ನಡೆಯಿತು. ಮಾ.24 ರಂದು ಸಂಜೆ 7 ರಿಂದ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಕೇಂದ್ರ ವಳಲಂಬೆ ಇವರ ಸಹಯೋಗದೊಂದಿಗೆ ” ಶ್ರೀನಿವಾಸ ಕಲ್ಯಾಣ” ಎಂಬ ಯಕ್ಷಗಾನ ಪ್ರದರ್ಶನಗೊಂಡಿತು.‌ ಮಾ.25 ರಂದು ರಾಜ್ಯ ದೈವ ಹಾಗೂ ಪುರುಷ ದೈವದ ನೇಮ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ ಹಾಗೂ ಸದಸ್ಯರು, ಭಕ್ತಾಧಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading