ಶುದ್ಧ ಷಷ್ಠಿ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಅಧಿಕ ಭಕ್ತಾದಿಗಳು

ಸುಬ್ರಹ್ಮಣ್ಯ ಮಾರ್ಚ್ 24 : ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರತಿ ತಿಂಗಳು ಬರುವ ಶುದ್ಧ ಷಷ್ಠಿಯಂತೆ ಮಾರ್ಚ್ ತಿಂಗಳ ಈ ದಿನ ಮಂಗಳವಾರ ಶುದ್ಧ ಷಷ್ಠಿ ದಿನವಾದ್ದರಿಂದ ಅಧಿಕ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಆಶ್ಲೇಷ ಬಲಿ, ನಾಗ ಪ್ರತಿಷ್ಠೆ ಹಾಗೂ ಸರ್ಪ ಸಂಸ್ಕಾರ ಹಾಗೂ ಇನ್ನಿತರ ಸೇವೆ ಗಳಲ್ಲಿ ಪಾಲ್ಗೊಂಡರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಲ್ಲಿ ಆಶ್ಲೇಷ ನಕ್ಷತ್ರ ಹಾಗೂ ಶುದ್ಧ ಷಷ್ಠಿ ವಿಶೇಷ ದಿನವಾಗಿದ್ದು, ಅಂದು ಹೊರ ಊರು ಹಾಗೂ ಹೊರ ರಾಜ್ಯಗಳಿಂದ ಅಧಿಕ ಸಂಖ್ಯೆಯ ಭಕ್ತಾದಿಗಳು ಬಂದು ಸೇವೆಯನ್ನು ಸಲ್ಲಿಸುತ್ತಾರೆ. ಇಂತಹ ವಿಶೇಷ ದಿನಗಳಲ್ಲಿ ಶ್ರೀ ದೇವಳದವರು ಕೂಡ ಭಕ್ತಾದಿಗಳಿಗೆ ಸುಗಮ ದರ್ಶನ, ಪ್ರಸಾದ ವ್ಯವಸ್ಥೆ ಹಾಗೂ ಭೋಜನ ಪ್ರಸಾದವನ್ನು ನೀಡುವಲ್ಲಿ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading