ಮಾ.24 ರಿಂದ ಎ.02 ರವರೆಗೆ ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೋತ್ಸವ

ಯೇನೆಕಲ್ಲು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಮಾ.24ರಂದು ಮೊದಲ್ಗೊಂಡು ಎ.02ರ ತನಕ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಮಾ.24ರಂದು ಗಣಪತಿ ಹೋಮ, ಗೊನೆಮುಹೂರ್ತ ನಡೆಯಲಿದೆ. 
ಮಾ.27ರಂದು ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಸಂಜೆ ಗಂಟೆ 6:00 ರಿಂದ ಭಜನೆ, ಸಂಜೆ 7:00 ಗಂಟೆಯಿಂದ ರಂಗಪೂಜೆ, ಬಳಿಕ ಶ್ರೀ ಭೂತಬಲಿ ಉತ್ಸವ, ವಸಂತಕಟ್ಟೆ ಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ನಡೆಯಲಿದೆ.
ಮಾ.28ರಂದು ಬೆಳಿಗ್ಗೆ 9:00ರಿಂದ ಮಹಾಗಣಪತಿ ಹೋಮ, ಕಲಶಪೂಜೆ, ಶ್ರೀ ದೇವರ ಬಲಿ ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈದಿಕ ಕಾರ್ಯಗಳು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಶ್ರೀ ಉಳ್ಳಾಕುಲು, ಉಳ್ಳಾಳ್ತಿ, ಬಚ್ಚನಾಯಕ ದೈವಸ್ಥಾನದಲ್ಲಿ ಮಾ.‌29ರಂದು ಸಂಜೆ ಗಂಟೆ 6:00ರಿಂದ ಉಗ್ರಾಣ ತುಂಬಿಸುವುದು, ರಾತ್ರಿ 9:00ರಿಂದ ಉಳ್ಳಾಕುಲು ವಗೈರೆ ದೈವಗಳ ನೇಮ ನಡೆಯಲಿದೆ.
ಮಾ.‌30ರಂದು ರಾತ್ರಿ 8:00 ಗಂಟೆಯಿಂದ ಉಳ್ಳಾಳ್ತಿ ವಗೈರೆ ದೈವಗಳ ನೇಮ ನಡೆಯಲಿದೆ.
ಮಾ.31ರಂದು ಸಂಜೆ 7:00 ಗಂಟೆಯಿಂದ ಭಂಡಾರ ಬಂದು ಉಡ್ಡೋತ್ತಾರು-ಕುಮಾರ ದೈವಗಳ ನೇಮ ನಡೆಯಲಿದೆ.
ಎ.01ರಂದು ಬೆಳಿಗ್ಗೆ 6:00 ಗಂಟೆಯಿಂದ ಶ್ರೀ ಬಚ್ಚನಾಯಕ ದೈವದ ನೇಮ ಬಳಿಕ ಕೋಟಿನಾಯಕ ದೈವದ ನೇಮ, ರಾತ್ರಿ 8:00 ರಿಂದ ಪ್ರಧಾನಿ ವಗೈರೆ ದೈವಗಳ ನೇಮ ಬಳಿಕ ಭಂಡಾರ ಹೊರಡಲಿದೆ.
ಎ.02ರಂದು ರಾತ್ರಿ 8:00ರಿಂದ ಗುಳಿಗ ದೈವದ ನೇಮ ನಡೆಯಲಿದೆ.
ಮಾ.31ರಂದು ಶಿವಕುಮಾರ್ ನೆಕ್ರಾಜೆ ಇವರ ನೇತೃತ್ವದಲ್ಲಿ ಸಂಜೆ 7:00ರಿಂದ 9:00 ಗಂಟೆವರೆಗೆ ಭಜನೆ ಮತ್ತು ಕುಣಿತ ಭಜನೆ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ರಾತ್ರಿ 9:00ರಿಂದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪ್ರಿಯಾ ಮ್ಯೂಸಿಕಲ್ಸ್ ಪುತ್ತೂರು, ಗುರುಪ್ರಿಯಾ ಕಾಮತ್ ಮತ್ತು ತಂಡದಿಂದ “ಗಾನಾಮೃತ – 2026” ಆರ್ಕೆಸ್ಟ್ರಾ ನಡೆಯಲಿದೆ. 
ಎ.21ರಂದು ದೇವರ ಪ್ರತಿಷ್ಠಾ ದಿವಸ ನಡೆಯಲಿದ್ದು, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ 7;30ಕ್ಕೆ ರಂಗಪೂಜೆ ಪ್ರಸಾದ ವಿತರಣೆ ನಡೆಯಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading