ಬೆಳ್ಳಾರೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಾರಂಪರಿಕ ವಸ್ತುಗಳ ಪ್ರದರ್ಶನ ; “ಸ್ವ-ಉದ್ಯೋಗದಿಂದ ಮಹಿಳೆಯರ ಬದುಕು ಸದೃಢ” : ಭಾರತಿ ಕೆ.ಪಿ

“ಸ್ವ-ಉದ್ಯೋಗವು ಮಹಿಳೆಯರ ಬದುಕನ್ನು ಸದೃಢಗೊಳಿಸುತ್ತದೆ ಮತ್ತು ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುತ್ತದೆ. ಮುಂದಿನ ದಿನಗಳಲ್ಲಿ ಮಹಿಳೆಯರು ಸ್ವತಂತ್ರವಾಗಿ ಬದುಕು ಸಾಗಿಸಬೇಕು” ಎಂದು ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕಿ ಭಾರತಿ ಕೆ.ಸಿ ಹೇಳಿದರು. ಅವರು 21 ಮಾರ್ಚ್ 2026 ರಂದು ಸ್ನೇಹಶ್ರೀ ಮಹಿಳಾ ಮಂಡಲದ ವತಿಯಿಂದ ಬೆಳ್ಳಾರೆಯ ಜ್ಞಾನನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಪಾರಂಪರಿಕ ವಸ್ತುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. “ಮಹಿಳೆ ಮತ್ತು ಸ್ವ ಉದ್ಯೋಗ ಎಂಬ ವಿಷಯದ ಬಗ್ಗೆ ಪಂಚಾಯತ್ ರಾಜ್ ಸಂಸ್ಥೆ ಎನ್.ಆರ್.ಎಲ್.ಎಂ ತಾಲೂಕು ಪಂಚಾಯತ್ ಸುಳ್ಯ ಇದರ ಸಂಪನ್ಮೂಲ ವ್ಯಕ್ತಿ ಜಯಲಕ್ಷ್ಮಿ ಟಿ.ಡಿ ಮಾಹಿತಿ ನೀಡಿದರು. ಸ್ನೇಹಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪೂರ್ಣಿಮಾ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಬೆಳ್ಳಾರೆ ಜ್ಞಾನದೀಪ ಶಿಕ್ಷಣ ಸಂಸ್ಥೆ ನಿರ್ದೇಶಕ ಉಮೇಶ್ ಮಣಿಕ್ಕಾರ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭಹಾರೈಸಿದರು.  
ಮಹಿಳಾ ಮಂಡಲ ಉಪಾಧ್ಯಕ್ಷೆ ಪೂರ್ಣಿಮಾ ಪೆರುವಾಜೆ ಪ್ರಾರ್ಥಿಸಿ, ಕೋಶಾಧಿಕಾರಿ ಕುಸುಮಾ ಕುರುoಬುಡೇಲು ಸ್ವಾಗತಿಸಿ, ಕಾರ್ಯದರ್ಶಿ ಶೋಭಾ ಕುರುoಬುಡೇಲು ವಂದಿಸಿದರು. ಸದಸ್ಯೆ ಶಶಿಕಲಾ ಕಾರ್ಯಕ್ರಮ ನಿರೂಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading