ಎಣ್ಮೂರು ಸರಕಾರಿ ಪ್ರೌಢಶಾಲೆಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಶ್ರಮದಾನ

ಶಿಸ್ತು, ಸಹಕಾರ ಮತ್ತು ಸೇವಾ ಮನೋಭಾವವನ್ನು ಎಳವೆಯಲ್ಲೇ ಮಕ್ಕಳಲ್ಲಿ ಬೆಳೆಸಲು ಪೂರಕವಾದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಒಂದು ದಿನದ ಶ್ರಮದಾನವನ್ನು ಇತಿಹಾಸ ಪ್ರಸಿದ್ಧವಾದ ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ನಡೆಸಿದರು. ಎಣ್ಮೂರು ಸರಕಾರಿ ಶಾಲೆಯ ಸುಮಾರು 21 ಸ್ಕೌಟ್ಸ್ ಮತ್ತು 26 ಗೈಡ್ಸ್ ಗಳು ಶ್ರಮದಾನದಲ್ಲಿ ಭಾಗವಹಿಸಿದರು. ಸ್ಕೌಟ್ಸ್ ಶಿಕ್ಷಕರಾದ ಲಿಂಗಪ್ಪ ಬೆಳ್ಳಾರೆ ಇವರ ಮಾರ್ಗದರ್ಶನದಲ್ಲಿ ನಡೆದ ಶ್ರಮದಾನದಲ್ಲಿ ವಿದ್ಯಾರ್ಥಿಗಳು ಗರಡಿ ಪರಿಸರವನ್ನು ಸ್ವಚ್ಚಗೊಳಿಸಿದರು. ಹಾಗೂ ಪ್ರಸಾದವನ್ನು ಪ್ಲಾಸ್ಟಿಕ್ ಕವರ್ ಗೆ ತುಂಬಿಸುವ ಮೂಲಕ ಸಹಕರಿಸಿದರು. ಎಣ್ಮೂರು ಶ್ರೀ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯಲ್ಲಿ ಪ್ರಸಾದ ತುಂಬಿಸುವ ಸೇವೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳು 
ಬಾಲ್ಯದಲ್ಲಿಯೇ ಸೇವಾ ಮನೋಭಾವ ಬೆಳೆಸಿಕೊಂಡು ಆದರ್ಶ ವಿದ್ಯಾರ್ಥಿಗಳಾಗಿ ಎಂದು ಕೇರ್ಪಡ ಮಹಿಷಮರ್ದಿನಿ ದೇವಾಲಯದ ಆಡಳಿತ ಮೊಕ್ತೇಸರಾದ ಲೋಕನಾಥ್ ರೈ ಪಟ್ಟೆ ಹಾರೈಸಿದರು. ಈ ಸಂದರ್ಭದಲ್ಲಿ ಆದಿ ನಾಗಬ್ರಹ್ಮ ಕೋಟಿ ಚೆನ್ನಯ ಗರಡಿಯ ಆನುವಂಶಿಕ ಆಡಳಿತದಾರರಾದ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಕೇರ್ಪಡ ಮಹಿಷಮರ್ದಿನಿ ದೇವಾಲಯದ ಆಡಳಿತ ಮೊಕ್ತೇಸರಾದ ಲೋಕನಾಥ್ ರೈ ಪಟ್ಟೆ, ಸೀತಾರಾಮಾಂಜನೆಯ ಭಜನಾ ಮಂಡಳಿಯ ಅಧ್ಯಕ್ಷರಾದ ನಾಗೇಶ್ ರೈ ರವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading