ವಿಶ್ವ ಅರಣ್ಯ ದಿನಾಚರಣೆಯ ಪ್ರಯುಕ್ತ ಪೆರ್ನಾಜೆಯಿಂದ ಪಂಜಿಗುಂಡಿಯವರೆಗೆ ಸ್ವಚ್ಛತಾ ಅಭಿಯಾನ


ಕರ್ನಾಟಕ ಅರಣ್ಯ ಇಲಾಖೆ ಪುತ್ತೂರು ವಲಯ, ಸ್ಕೌಟ್ ಗೈಡ್ ಯುವದ್ವನಿ , ಯುವಕ ಮಂಡಲ(ರಿ) ಕನಕಮಜಲು, ಗ್ರಾಮ ಪಂಚಾಯತ್ ಕನಕಮಜಲು ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಅರಣ್ಯ ದಿನಾಚರಣೆ ಪ್ರಯುಕ್ತ ಸ್ವಚ್ಛತಾ ಅಭಿಯಾನ ಪೆರ್ನಾಜೆಯಿಂದ ಪಂಜಿಗುಂಡಿಯವರೆಗೆ ಮಾ 21 ರಂದು ನಡೆಯಿತು ಪೆರ್ನಾಜೆಯಿಂದ ಆನೆಗುಂಡಿ ಮೂಲಕ ಪಂಜಿಗುಂಡಿಯವರೆಗೆ ರಸ್ತೆಯ ಎರಡು ಬದಿಗಳಲ್ಲಿದ್ದ ಕಸಗಳನ್ನು ಹೆಕ್ಕಿ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಪುತ್ತೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯ್ಕ್, ವಲಯ ಅರಣ್ಯಾಧಿಕಾರಿ ಕಿರಣ್, ಜಾಲ್ಸೂರು ಶಾಖೆಯ ಉಪ ವಲಯಾರಣ್ಯಾಧಿಕಾರಿ ರಂಜಿತಾ ಪಿ., ಕನಕಮಜಲು ಗಸ್ತು ಅರಣ್ಯ ಪಾಲಕ ಸನತ್‌ಕುಮಾರ್, ವಿವಿಧ ಭಾಗದ ಉಪವಲಯಾರಣ್ಯಾಧಿಕಾರಿಗಳು, ಗಸ್ತು ಅರಣ್ಯ ಪಾಲಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕನಕಮಜಲು ಗ್ರಾ.ಪಂ. ಮಾಜಿ ಅಧ್ಯಕ್ಷರುಗಳಾದ ಶ್ರೀಧರ್ ಕುತ್ಯಾಳ, ಶಾರದಾ ಉಗ್ಗಮೂಲೆ,ಮಾಜಿ ಸದಸ್ಯ ಜಗನ್ನಾಥ ಮಾಣಿಮಜಲು, ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಅಶ್ವಥ್ ಅಡ್ಕಾರು, ಸ್ಕೌಟ್ ಗೈಡ್ ಯುವ ಧ್ವನಿ ಅಧ್ಯಕ್ಷ ಭರತ್ ನಾಯಕ್, ಭಾರತ್ ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷ ರಾಜು ಪಂಡಿತ್, ಕಾರ್ಯದರ್ಶಿ ಪ್ರೇಮಲತಾ, ಖಜಾಂಜಿ ರೇವತಿ, ಸ್ಕೌಟ್ ಗೈಡ್ ಶಿಕ್ಷಕರಾದ ಶ್ರೀಹರಿ ಪೈಂದೋಡಿ, ನಳಿನಾಕ್ಷಿ ಕಲ್ಮಡ್ಕ, ಪ್ರಮುಖರಾದ ಹರೀಶ್ ಮೂರ್ಜೆ, ಬಾಲಚಂದ್ರ ನೆಡಿಲು ಮೊದಲಾದವರು ಉಪಸ್ಥಿತರಿದ್ದರು. ಸ್ವಚ್ಛತಾ ಅಭಿಯಾನದಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳು, ಸಿಬ್ಬಂದಿಗಳು, ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು, ಸುಳ್ಯ ರೋಟರಿ, ವಿನೋಬಾನಗರ ವಿವೇಕಾನಂದ ಶಾಲಾ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಯುವ ಧ್ವನಿಯ ಸಂಯೋಜಕ ಕೀರ್ತನ್ ಕಾರ್ಯಕ್ರಮ ನಿರೂಪಿಸಿದರು. ಉಪಹಾರದ ವ್ಯವಸ್ಥೆಯನ್ನು ಕನಕಮಜಲು ಯುವಕ ಮಂಡಲ, ನೀರು ಮತ್ತು ಹಣ್ಣನ್ನು ದಿನೇಶ್ ರಾವ್ ಮೊಗೇರು ನೀಡಿ ಸಹಕರಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading