ಇನ್ಸ್ಪೈರ್ ಅವಾರ್ಡ್‌ಗೆ ಕೋಲ್ಚಾರು ಶಾಲೆಯ 4 ವಿದ್ಯಾರ್ಥಿಗಳು ಆಯ್ಕೆ

ಸುಳ್ಯ ತಾಲೂಕು ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಕೋಲ್ಚಾರು ಇಲ್ಲಿಯ ವಿದ್ಯಾರ್ಥಿಗಳು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ಆಯೋಜಿಸುವ ಪ್ರತಿಷ್ಠಿತ INSPIRE Awards – MANAK ಯೋಜನೆಗೆ ಆಯ್ಕೆಯಾಗಿರುತ್ತಾರೆ.
ಈ ಯೋಜನೆಯಡಿ ಶಾಲೆಯ 6ನೇ ತರಗತಿಯ ವಿದ್ಯಾರ್ಥಿಗಳಾದ ಚಿಂತನ್ ಕೆ.ಎಸ್, ತೃಪ್ತಿ ಕೆ.ವಿ, ಯೋಗರಾಜ ಫಕ್ಕಿರೇಶ ಮಾದರ ಹಾಗೂ ಫಾತಿಮತ್ ಹಫೀಜಾ ಕೆ.ಎಚ್ ಅವರು ತಮ್ಮ ವೈಜ್ಞಾನಿಕ ಆಲೋಚನೆಗಳು ಮತ್ತು ನವೀನ ಆವಿಷ್ಕಾರಾತ್ಮಕ ಕಲ್ಪನೆಗಳ ಮೂಲಕ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳು ತಲಾ 10,000 ರೂಪಾಯಿ ನಗದು ಬಹುಮಾನವನ್ನು ಪಡೆದಿರುತ್ತಾರೆ. 
ವಿದ್ಯಾರ್ಥಿಗಳಲ್ಲಿ ವಿಜ್ಞಾನ ಪ್ರೇರಣೆ ಮತ್ತು ಸೃಜನಾತ್ಮಕ ಚಿಂತನೆ ಬೆಳೆಸುವ ಉದ್ದೇಶದಿಂದ ನಡೆಯುವ ಈ ರಾಷ್ಟ್ರೀಯ ಮಟ್ಟದ ಯೋಜನೆಯಲ್ಲಿ ಇವರ ಸಾಧನೆ ಶಾಲೆಗೆ ಕೀರ್ತಿ ತಂದಿದೆ. ಈ ಸಾಧನೆಗೆ ಶಾಲೆಯ ಶಿಕ್ಷಕರು ಸಮರ್ಪಕ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳನ್ನು ಉತ್ತೇಜಿಸಿರುವುದು ಶ್ಲಾಘನೀಯವಾಗಿದೆ.
2025 -2026 ನೇ ಸಾಲಿನಲ್ಲಿ ಸುಳ್ಯ ತಾಲೂಕಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅತಿ ಹೆಚ್ಚು ಇನ್ಸ್ಪೈರ್ ಅವಾರ್ಡ್ ಪಡೆದ ಶಾಲೆ ಎಂಬ ಹೆಗ್ಗಳಿಕೆಯನ್ನು ಕೋಲ್ಚಾರ್ ಸರಕಾರಿ ಶಾಲೆ ಪಡೆದಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ಶಾಲೆಯ ಎಸ್.ಡಿ.ಯಂ.ಸಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದು, ಮುಂದಿನ ಹಂತಗಳಲ್ಲಿಯೂ ವಿದ್ಯಾರ್ಥಿಗಳು ಹೆಚ್ಚಿನ ಸಾಧನೆ ಮಾಡಲಿ ಎಂದು ಹಾರೈಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading