ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲದ ಆಮಂತ್ರಣ ಬಿಡುಗಡೆ – ಕೊಳ್ಳಿಮುಹೂರ್ತ

ದ.ಕ ಸಂಪಾಜೆ ಗ್ರಾಮದ ಇತಿಹಾಸ ಪ್ರಸಿದ್ದ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ಒತ್ತೆಕೋಲ ಉತ್ಸವವು ಮಾ.28 ರಿಂದ 30 ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಮಾರ್ಚ್ 14 ರಂದು ಒತ್ತೆಕೋಲದ ಆಮಂತ್ರಣ ಬಿಡುಗಡೆ ಹಾಗೂ ಕೊಳ್ಳಿ ಮೂಹೂರ್ತ ನಡೆಯಿತು.
ಶ್ರೀ ಮಹಾವಿಷ್ಣು ಮೂರ್ತಿ ದೈವಸ್ಥಾನದಲ್ಲಿ ಶ್ರೀ ದೈವಕ್ಕೆ ವಿಶೇಷ ಪೂಜೆಯನ್ನು ಮಾಡಿ ಬಳಿಕ ಕೆ.ಬಿ ಕೇಶವ ಆಚಾರ್ಯ ಕೀಲಾರು ಬೈಲು ಮುಹೂರ್ತದ ಕೊಳ್ಳಿಯನ್ನು ಕಡಿದು, ವಾದ್ಯ ಘೋಷದೊಂದಿಗೆ ಒತ್ತೆಕೋಲ ಗದ್ದೆಗೆ ಸಾಗಿ ಬಂದಿತು. ಬಳಿಕ ಗದ್ದೆಯ ವಿಷ್ಣುಮೂರ್ತಿ ಕಟ್ಟೆಗೆ ವಿಶೇಷ ಪೂಜೆ ಪ್ರಾರ್ಥನೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಒತ್ತೆಕೋಲ ಉತ್ಸವ ಸಮಿತಿಯ ಗೌರವಾಧ್ಯಕ್ಷ ರಾಜಾರಾಮ ಕೀಲಾರು, ಅಧ್ಯಕ್ಷ ಕೆ.ಆರ್ ಜಗದೀಶ್ ರೈ, ಮೊಕ್ತೇಸರ ಕೆ.ಕರುಣಾಕರ, ಕಾರ್ಯದರ್ಶಿ ಕೆ.ವಿ ಮಂಜುನಾಥ್, ಕೋಶಾಧಿಕಾರಿ ಬಿ.ಆರ್ ಪದ್ಮಯ್ಯ, ಗೌರವ ಸಲಹೆಗಾರರಾದ ಶ್ರೀಧರ ಮಾದೇಪಾಲು ಮತ್ತು ಸತೀಶ್ ದೋಳ, ಅರ್ಚಕರಾದ ನರಸಿಂಹ ಭಟ್, ದೈವದ ಪ್ರಧಾನ ಪೂಜಾರಿ ನಾರಾಯಣ.ಬಿ ಮಣಿಯಾಣಿ, ಉಪ ಪೂಜಾರಿ ಕುಂಞ ರಾಮ ಮಣಿಯಾಣಿ, ಶಿವರಾಮ ಮಣಿಯಾಣಿ, ಸಂಪಾಜೆ ವಲಯ ತೀಯ ಸಮಾಜದ ಅಧ್ಯಕ್ಷ ಶ್ರೀಧರ ಕಡೆಪಾಲ ಹಾಗೂ ದೈವಸ್ಥಾನದ ಪದಾಧಿಕಾರಿಗಳು, ಸದಸ್ಯರು, ಹಾಗೂ ತೀಯ ಸಮಾಜದ ಆಡಳಿತ ಮಂಡಳಿ ಸರ್ವಸದಸ್ಯರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading