ಇನ್ಸ್‌ಪೈಯರ್ ಅವಾರ್ಡ್‌ ಕಾರ್ಯಕ್ರಮ – ಕೆ.ಪಿ.ಎಸ್ ಬೆಳ್ಳಾರೆ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಆಯ್ಕೆ

ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಸಲ್ಪಡುತ್ತಿರುವ ಇನ್ಸ್‌ಪೈಯರ್ ಅವಾರ್ಡ್‌ ಕಾರ್ಯಕ್ರಮದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಇದರ ಪ್ರಾಥಮಿಕ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಅವಾರ್ಡ್‌ಗೆ ಆಯ್ಕೆಯಾಗಿರುತ್ತಾರೆ. 6ನೇ ಆಂಗ್ಲ ಮಾಧ್ಯಮ ವಿಭಾಗದ ಗ್ರೀಷ್ಮಾ.ಕೆ ಎಸ್ ಹಾಗೂ 7ನೇ ಆಂಗ್ಲ ಮಾಧ್ಯಮದ ವೈಷ್ಣವ್.ಕೆ ಆಯ್ಕೆಯಾದ ವಿದ್ಯಾರ್ಥಿಗಳು.

. . . . . . . . .

ವಿಜ್ಞಾನ ಶಿಕ್ಷಕ ದಿನೇಶ್ ಮಾಚಾರ್ ಇವರ ಮಾರ್ಗದರ್ಶನದಲ್ಲಿ ಈ ವಿದ್ಯಾರ್ಥಿಗಳು ಮಾದರಿಗಳ ಪ್ರಸ್ತಾವನೆಯನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿದ್ದರು. ಪದವೀಧರೇತರ ಮುಖ್ಯೋಪಾಧ್ಯಾಯರಾದ ಮುಖ್ಯೋಪಾಧ್ಯಾಯ ಮಾಯಿಲಪ್ಪ.ಜಿ, ಎಸ್‌.ಡಿ.ಎಂ.ಸಿ ಕಾರ್ಯಾಧ್ಯಕ್ಷರಾದ ಹರ್ಷ ಜೋಗಿಬೆಟ್ಟು ಮತ್ತು ಶಿಕ್ಷಕ ವೃಂದ ಆಯ್ಕೆಯಾಗಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಿರುತ್ತಾರೆ. ಕೆ.ಪಿ.ಎಸ್‌ ಬೆಳ್ಳಾರೆ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಕಳೆದ 2020-21ನೇ ಶೈಕ್ಷಣಿಕ ವರ್ಷದಿಂದಲೂ ಸತತವಾಗಿ ಈ ಸ್ಪರ್ಧೆಗೆ ಆಯ್ಕೆಯಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ 14 ವಿದ್ಯಾರ್ಥಿಗಳು ಈ ಪಾರಿತೋಷಕಕ್ಕೆ ಭಾಜನರಾಗಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲೂ ಕೂಡ ಇಬ್ಬರು ವಿದ್ಯಾರ್ಥಿಗಳು ಅಯ್ಕೆಯಾಗಿರುವುದು ಪ್ರಶಂಸನೀಯ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading