Ad Widget

ಬೆಳ್ಳಾರೆ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವ

ಬೆಳ್ಳಾರೆ ಗ್ರಾಮದ ಬೂಡು ಶ್ರೀ ಆದಿನಾಗಬ್ರಹ್ಮ ಮೊಗೇರ್ಕಳ ಹಾಗೂ ಸಪರಿವಾರ ದೈವಗಳ ನೇಮೋತ್ಸವವು ಫೆ.14 ಮತ್ತು 15ರಂದು ನಡೆಯಿತು. ಫೆ.14ರಂದು ಬೆಳಿಗ್ಗೆ ಗಣಪತಿ ಹೋಮ ಹಾಗೂ ಗೊನೆ ಮುಹೂರ್ತ ನಡೆಯಿತು. ಆ ಬಳಿಕ ಜಾಗದ ಪಂಜುರ್ಲಿಗೆ ತಂಬಿಲ ಸೇವೆ ನಡೆಯಿತು. ಅಪರಾಹ್ನ ಗುಳಿಗ ದೈವಕ್ಕೆ ಎಣ್ಣೆ ಬೂಳ್ಯ ನೀಡಿ ಗುಳಿಗ ದೈವದ ನೇಮೋತ್ಸವ ಜರುಗಿತು. ಸಂಜೆ ಶ್ರೀ ಮೊಗೇರ್ಕಳ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ, ಬಳಿಕ ಶ್ರೀ ಮೊಗೇರ್ಕಳ ದೈವಗಳ ಗರಡಿ ಇಳಿಯುವುದು, ಶ್ರೀ ತನ್ನಿಮಾಣಿಗ ದೈವದ ಗರಡಿ ಇಳಿಯುವುದು, ಪ್ರಸಾದ ವಿತರಣೆ ನಡೆಯಿತು. ಫೆ.15ರಂದು ಬೆಳಿಗ್ಗೆ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ, ಪ್ರಸಾದ ವಿತರಣೆ, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ ಸಾವಿರಾರು ಮಂದಿ ಭಕ್ತಾದಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ಗರಡಿಯ ಅಧ್ಯಕ್ಷ ಸುಂದರ ತೊಡಿಕಾನ, ಕಾರ್ಯದರ್ಶಿ ವಿಜಯ ಪಾಟಾಜೆ, ನೇಮೋತ್ಸವ ಸಮಿತಿ ಅಧ್ಯಕ್ಷ ಪ್ರಸಾದ್ ಬೀಡು, ಕಾರ್ಯದರ್ಶಿ ಹರೀಶ್ ಬೀಡು, ಪ್ರಜ್ವಲ್ ಸರ್ವೆ ಸೇರಿದಂತೆ ಗರಡಿಯ ಆಡಳಿತ ಸಮಿತಿ ಪದಾಧಿಕಾರಿಗಳು, ನೇಮೋತ್ಸವ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading