Ad Widget

ದ್ವಾದಶ ರಾಶಿಗಳ ದಿನ ಭವಿಷ್ಯ

ಜ್ಯೋತಿಷ್ಯರು : ಪ್ರವೀಣ್ ಶಿಬರೂರಾಯ, ಮಂಡೆಕೋಲು, ಸುಳ್ಯ, ಮೊ: 9591969197

. . . . . . . . .

ದಿನಾಂಕ:10/3/2026 ಮಂಗಳವಾರ
01,🐏ಮೇಷರಾಶಿ🐏
📖,ನಿಮ್ಮ ಅನೇಕ ವಿಚಾರಗಳನ್ನು ಸುಮ್ಮನೆ ಯಾರ ಜತೆಗೂ ಹಂಚಿಕೊಳ್ಳದಿರಿ. ಹೊರಳು ದಾರಿಯಲ್ಲಿರುವ ನಿಮ್ಮ ದಾರಿ ತಪ್ಪಿಸಲು ಹಲವರು ಕಾದಿದ್ದಾರೆ. ಆದರೆ ಸತ್ಯ ನಿಷ್ಠೆಗೆ ಯಾವಾಗಲು ಜಯ. ಹಾಗಾಗಿ ನೀವು ಗೆಲುವಿನ ನಗು ಬೀರುವಿರಿ,
ಗಮನಿಸಿ:- ಪ್ರಯಾಣ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಿಮಗೆ ಆರಾಮ ಮತ್ತು ಸಂತೋಷ ತರುತ್ತದೆ,
ಪರಿಹಾರ:-ಶ್ರೀಗುರುರಾಘವೇಂದ್ರರ ಸ್ಮರಣೆ ಮಾಡಿ,
02,🐂ವೃಷಭರಾಶಿ🐂
📖,ನೀವು ಶಾಂತವಾಗಿದ್ದರೂ ನಿಮ್ಮನ್ನು ಅಶಾಂತ ರೂಪಕ್ಕೆ ತಳ್ಳುವವರನ್ನು ನೀವು ಎದುರಿಸಬೇಕಾಗುತ್ತದೆ. ಗೆಲ್ಲುವುದು ನಿಮಗೆ ಸಾಧ್ಯವಾದರೂ ನಿಮ್ಮ ಚೈತನ್ಯವನ್ನು ಕಲಕುವ ವಿಚಾರ ಹೆಚ್ಚಾಗವು ಸಾಧ್ಯತೆ ಇದೆ. ಬಯಸಿದ ಕಾರ್ಯವು ಈಡೇರಲು ಅಧಿಕ ಶ್ರಮ ಪಡುತ್ತಿದ್ದೀರಿ. ಆದರೆ ಯಶಸ್ಸು ಮರೀಚಿಕೆ ಆಗುತ್ತಿದೆ, ಗಮನಿಸಿ:-ಸಹೋದರರ ಸಂಗಡ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗುವುದು,
ಪರಿಹಾರ:-ಮನೆ ದೇವರ ಪ್ರಾರ್ಥನೆ ಮಾಡಿ,
03,👥ಮಿಥುನ ರಾಶಿ👥
📖,ಕಾಡಿನ ಸಿಂಹಕ್ಕೆ ಹಸಿವಿದ್ದರೂ ಅದು ಹುಲ್ಲು ತಿನ್ನುವುದಿಲ್ಲ. ಅಂತೆಯೇ ಕೆಲವೊಮ್ಮೆ ನಿಮ್ಮಿಂದ ತಪ್ಪಾದರೂ ನೀವು ಕ್ಷಮೆಯಾಚಿಸುವುದಿಲ್ಲ. ಇದರಿಂದಾಗಿ ಜನರು ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು, ನಡೆನುಡಿಯಲ್ಲಿ ಸೌಮ್ಯತೆ ಇರಲಿ, ಹಣದ ಪರಿಸ್ಥಿತಿ ಈ ದಿನ ಸುಧಾರಿಸುತ್ತದೆ, ಗಮನಿಸಿ:-ವಿಳಂಬಿತ ಪಾವತಿಗಳನ್ನು{ಸಾಲವನ್ನು}ತಪ್ಪದೆ ಈ ದಿನ ಪಾವತಿ ಮಾಡುವುದು ಒಳಿತು,
ಪರಿಹಾರ:-ಶ್ರೀಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ,
04,🦀ಕಟಕ ರಾಶಿ🦀
📖,ಮಾನಸಿಕ ಕಸಿವಿಸಿ ಇದ್ದರೂ ಅದೇ ನಿಮ್ಮ ಬೆಂಗಾವಲಿಗೆ ಬರುವುದು. ಒಂದು ನಿರ್ದಿಷ್ಟ ಕಾರ್ಯವನ್ನು ಮಾಡಲು ಹವಣಿಸುತ್ತಿದ್ದ ನಿಮಗೆ ಭಗವಂತನೇ ಅದನ್ನು ಒಳ್ಳೆಯ ಉದ್ದೇಶಕ್ಕಾಗಿ ತಪ್ಪಿಸುವನು. ಇದರಿಂದ ಮುಂದೆ ಒಳಿತಾಗುವುದು, ಧೈರ್ಯಂ ಸರ್ವತ್ರ ಸಾಧನಂ ಎಂದರು ಹಿರಿಯರು. ಧೈರ್ಯದಿಂದ ನಿರ್ಣಯ ತೆಗೆದುಕೊಂಡ ವಿಚಾರಗಳು ನಿಮಗೆ ಗೌರವ ಮತ್ತು ಕೀರ್ತಿಯನ್ನು ತಂದು ಕೊಡುವುದು,
ಗಮನಿಸಿ:-ಸಂತೋಷ ನಿಮ್ಮದಾಗುವುದು,
ಪರಿಹಾರ:-ತಾಯಿ ದುರ್ಗೆಯನ್ನು ಪ್ರಾರ್ಥಿಸಿ,
05,🦁ಸಿಂಹ ರಾಶಿ🦁
📖,ಮನುಷ್ಯ ಮನುಷ್ಯನ ಸಂಬಂಧದ ನೆಲೆಯನ್ನು ನೀವು ಅರಿಯುವಿರಿ. ನೀವು ನಿಮ್ಮದೆ ಆದ ತರ್ಕ ಕುತರ್ಕಗಳಿಂದ ಬಾಹ್ಯ ಜಗತ್ತಿನ ಜನರ ಸಂಪರ್ಕವನ್ನು ಕಳೆದುಕೊಳ್ಳುವಿರಿ. ಮನುಷ್ಯ ಸಂಘಜೀವಿ ಎಲ್ಲರ ಸಹಕಾರವು ಮುಖ್ಯ ಎಂದು ತಿಳಿಯಿರಿ. ನೂತನ ಮಿತ್ರರು ಸೇರ್ಪಡೆ ಮಾಡಿಕೊಳ್ಳಿ. ಅವರೊಂದಿಗಿನ ಮಾತುಕತೆಯು ಹೊಸ ಉದ್ಯಮಕ್ಕೆ ನಾಂದಿ ಹಾಡಲಿದೆ,
ಗಮನಿಸಿ:-ಉದ್ಯೋಗ ಕ್ಷೇತ್ರದಲ್ಲಿ ಸ್ವಲ್ಪ ಕಿರಿಕಿರಿ ಸಂಭವ ಇದೆ,
ಪರಿಹಾರ:-ಶಿವನ ಮಂತ್ರವನ್ನು ಪಠಿಸಿ,
06,👩‍🦳ಕನ್ಯಾ ರಾಶಿ👩‍🦳
📖,ದುಡ್ಡೇ ದೊಡ್ಡಪ್ಪ ವಿದ್ಯೆ ಅವರಪ್ಪ. ಹಾಗಾಗಿ ನೀವು ಜಾಣ್ಮೆಯಿಂದ ಕೆಲಸ ನಿರ್ವಹಿಸುವ ಮುಂಚೆ ಮುಂಗಡ ಹಣವನ್ನು ಪಡೆದೆ ಆರಂಭಿಸಿ. ಇದರಿಂದ ನಿಮಗೂ ನೆಮ್ಮದಿ ಉಂಟಾಗುವುದು. ಮಾನಸಿಕ ಭಯ ನೀಮ್ಮ ದೈರ್ಯಗೆಡಿಸಬಹುದು. ಸಕಾರಾತ್ಮಕ ಚಿಂತನೆ ಇರಲಿ,
ಗಮನಿಸಿ:-ಮುಂದಿನ ಉಜ್ವಲವಾದ ಭವಿಷ್ಯದ ಬಗ್ಗೆ ಚಿಂತಿಸಿ ಮುನ್ನಡೆಯಿರಿ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿ ಪ್ರಾರ್ಥನೆ ಮಾಡಿ,
07,⚖️ತುಲಾ ರಾಶಿ⚖️
📖,ಮನಸ್ಸಿನ ಹೊಯ್ದಾಟ ಇದ್ದರೂ ಸಂಕಲ್ಪಿತ ಕಾರ್ಯಸಿದ್ಧಿಗೆ ಅವಕಾಶ ಕೂಡಿ ಬರುವುದು. ಆರೋಗ್ಯದ ಮೇಲೆ ಗಮನವಿರಲಿ. ಇಂದಿನ ಎಲ್ಲಾ ಕೆಲಸ ಕಾರ್ಯಗಳು ಕೈಗೂಡುವವು. ರಿಯಲ್ ಎಸ್ಟೇಟ್ ಮತ್ತು ಆರ್ಥಿಕ ವ್ಯವಹಾರಗಳಿಗೆ ಒಳ್ಳೆಯ ದಿನ,
ಗಮನಿಸಿ:-ನಿಮ್ಮ ಜ್ಞಾನ ಮತ್ತು ಒಳ್ಳೆಯ ಹಾಸ್ಯ ನಿಮ್ಮ ಬಳಿಯಿರುವ ಜನರನ್ನು ಆಕರ್ಷಿಸಬಹುದು,
ಪರಿಹಾರ:-ಗುರುಗಳ ಮಾರ್ಗ ದರ್ಶನ ಪಡೆಯಿರಿ,
08,🦂ವೃಶ್ಚಿಕ ರಾಶಿ🦂
📖,ಎಲ್ಲಾ ಸಕಲ ಸಂಪತ್ತು ಇದ್ದರೂ ಅದನ್ನು ಅನುಭವಿಸಲು ಆಗುತ್ತಿಲ್ಲ. ಎಲ್ಲವೂ ಎದುರಿಗೆ ಇದ್ದರೂ ಅದು ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬದಂತೆ ನಿತ್ಯ ಜೀವನಕ್ಕೆ ಉಪಯೋಗಕ್ಕೆ ಬರುತ್ತಿಲ್ಲ. ಕುಲದೇವರನ್ನು ಆರಾಧನೆ ಮಾಡಿ. ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ. ನಿಮ್ಮ ಕೆಲಸದ ಮೇಲೆ ಗಮನ ಹರಿಸಿ,
ಗಮನಿಸಿ:- ಇಂದು ಯಶಸ್ಸು ಮತ್ತುಮನ್ನಣೆನಿಮ್ಮದಾಗುತ್ತದೆ,
ಪರಿಹಾರ:-ಗುರುರಾಯರನ್ನು ನೆನೆಯಿರಿ,
09,🏹ಧನಸ್ಸು ರಾಶಿ🏹
📖,ನಿಮ್ಮನ್ನು ನೀವು ವಿಮರ್ಶಿಸುವ ಸಕಾಲ ಇದು. ನೀವು ಸಾಗಿ ಬಂದ ದಾರಿಯನ್ನು ಮತ್ತೊಮ್ಮೆ ಸಿಂಹಾವಲೋಕನ ಮಾಡಿಕೊಳ್ಳಿ. ಇದು ನಿಮ್ಮ ಮುಂದಿನ ಬಾಳಿನ ಮಾರ್ಗಸೂಚಿ ಆಗುವುದು. ನಿಮ್ಮ ಶಕ್ತಿಯ ಸೂಕ್ತ ನಿರ್ವಹಣೆಯಿಂದ ಕಾರ್ಯದಲ್ಲಿ ಜಯ ಹೊಂದಬೇಕು,
ಗಮನಿಸಿ:-ಮಾನಸಿಕ ಶಾಂತಿಗಾಗಿ ಕೆಲವು ದಾನ ಧರ್ಮಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ,
ಪರಿಹಾರ:-ತಂದೆತಾಯಿಯರ ಆಶೀರ್ವಾದ ಪಡೆಯಿರಿ,
10,🐊ಮಕರ ರಾಶಿ🐊
📖,ನಿಮ್ಮ ಬಗೆಗಿನ ಕೆಲವು ವಿಚಾರಗಳನ್ನು ತಿಳಿದು ನಿಮ್ಮ ಪ್ರಗತಿಯನ್ನು ಚಿವುಟಿ ಹಾಕುವ ಪ್ರಯತ್ನಗಳನ್ನು ಕೆಲವರು ಮಾಡುತ್ತಿರುವರು. ಇಂತಹ ಜನರಿಂದ ಆದಷ್ಟು ದೂರ ಉಳಿಯುವುದು ಒಳ್ಳೆಯದು. ಇಂದು ನಿಮಗೆ ದೊರಕುವ ಹೊಸ ಹೂಡಿಕೆಯ ಅವಕಾಶಗಳನ್ನು ಅನ್ವೇಷಿಸಿ-ಆದರೆ ಈ ಯೋಜನೆಗಳ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಿದ ನಂತರವೇ ನೀವು ಇದರಲ್ಲಿ ತೊಡಗಿಸಿಕೊಳ್ಳಬೇಕು,
ಗಮನಿಸಿ:- ಹಣ ಹೂಡಿಕೆ ವಿಷಯದಲ್ಲಿ ಎಚ್ಚರದಿಂದಿರಿ,
ಪರಿಹಾರ:-ಹನುಮಾನ್‌ ಚಾಲೀಸ್‌ ಪಠಣ ಮಾಡಿ,
11,⚱️ಕುಂಭ ರಾಶಿ⚱️
📖,ಏಕಾಏಕಿ ದೊಡ್ಡ ದೊಡ್ಡ ಯೋಜನೆಗಳನ್ನು ಬೆನ್ನು ಹತ್ತದಿರಿ. ಅಟ್ಟವನ್ನು ಏರದವರು ಬೆಟ್ಟವನ್ನು ಏರಬಹುದೇ? ಹಾಗಾಗಿ ತಾಳ್ಮೆಯಿಂದ ನಿಮ್ಮ ಮುಂದೆ ಇರುವ ಸರಳ ಕೆಲಸಗಳನ್ನು ಮನಸ್ಸುಕೊಟ್ಟು ಮಾಡಿ ಮತ್ತು ಆತ್ಮವಿಶ್ವಾಸ ಗಳಿಸಿಕೊಳ್ಳಿ,
ಗಮನಿಸಿ:-ಮಿತಿಯಿಲ್ಲದ ಸೃಜನಶೀಲತೆ ಮತ್ತು ಉತ್ಸಾಹ ನಿಮ್ಮನ್ನು ಮತ್ತೊಂದು ಅನುಕೂಲಕರ ದಿನಕ್ಕೆ ಕೊಂಡೊಯ್ಯುತ್ತದೆ,
ಪರಿಹಾರ:-ಶ್ರೀ ಆಂಜನೇಯ ಸ್ವಾಮಿಗೆ ವೀಳ್ಯದೆಲೆ ನೀಡಿ,
12,🐋ಮೀನ ರಾಶಿ🐋
📖,ನಿಮ್ಮಿಂದಲೇ ಸಮಗ್ರ ವಿಷಯವನ್ನು ತಿಳಿದುಕೊಂಡು ಅದಕ್ಕೆ ಬಣ್ಣ ಹಚ್ಚಿ ನಿಮ್ಮ ವಿರುದ್ಧ ಪಿತೂರಿ ನಡೆಸುವ ಜನರಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ನಿಮ್ಮ ಬಾಸ್ ಇಂದು ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. ಇಂದು ಜನರು ಹೊಗಳಿಕೆಗಳನ್ನು ನೀಡುತ್ತಾರೆ,
ಗಮನಿಸಿ:-ದೂರದಪ್ರಯಾಣದಿಂದತೊಂದರೆಯುಂಟಾಗುವುದು,
ಪರಿಹಾರ:-ಮನೆ ದೇವರನ್ನು ಮನದಲ್ಲಿ ನೆನೆಯಿರಿ,

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading