Ad Widget

ಅಡ್ಕಾರು ಅಂಜನಾದ್ರಿ ಶ್ರೀ ಆಂಜನೇಯನ ಕ್ಷೇತ್ರದಲ್ಲಿ ಚೈತನ್ಯ ಬ್ರಹ್ಮಕಲಶೋತ್ಸವ ಸಂಭ್ರಮ ; ಶ್ರೀ ಕರಿಚಾಮುಂಡಿ ದೈವದ ಪ್ರತಿಷ್ಠೆ – ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಬ್ರಹ್ಮಕಲಶಾಭಿಷೇಕ ; ಇಂದು ರಾತ್ರಿ ದೇವರ ಉತ್ಸವ ಬಲಿ – ದರ್ಶನಬಲಿ – ದೈವ -ದೇವರ ಭೇಟಿ – ಗುಳಿಗದೈವದ ಕೋಲ

ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಜನಾದ್ರಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಕ್ಷೇತ್ರದಲ್ಲಿ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಚೈತನ್ಯ ಬ್ರಹ್ಮಕಲಶೋತ್ಸವ ಹಾಗೂ ಕರಿಚಾಮುಂಡಿ ದೈವದ ಪ್ರತಿಷ್ಠೆಯು ಮಾ.06ರಂದು ಬೆಳಿಗ್ಗೆ ನಡೆಯಿತು.
ಮಾ.05ರಂದು ಬೆಳಿಗ್ಗೆ ತಿಲಹವನ, 12 ತೆಂಗಿನಕಾಯಿಗಳ ಗಣಪತಿ ಹವನ, ಭಾಗ್ಯಸೂಕ್ತ ಹವನ, ಪವಮಾನ ಹವನ, ಐಕ್ಯಮತ್ಯ ಹವನ, ನವಗ್ರಹ ಶಾಂತಿ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.
ರಾತ್ರಿ ವಾಸ್ತುಪೂಜಾ, ವಾಸ್ತುಬಲಿ, ರಾಕ್ಷೋಘ್ನ ಹವನ ಅಧಿವಾಸಂಗ ಹವನ, ಬಿಂಬಶುದ್ಧಿ, ಕಲಶಪೂಜೆ, ನವಚಂಡಿಕಾ ಕಲಶ ಪ್ರತಿಷ್ಠೆ, ಚಂಡಿಕಾ ಪಾರಾಯಣ ಆಶ್ಲೇಷ ಬಲಿ, ಆಶ್ಲೇಷ ಬಲಿ ಹವನ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋಧಾವಳಿಗಳು ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಮಾ.06ರಂದು ಬೆಳಿಗ್ಗೆ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹವನ, ಪ್ರತಿಷ್ಠಾಂಗ ಹವನ, ಶ್ರೀ ಕರಿಚಾಮುಂಡಿ ದೈವದ ಪ್ರತಿಷ್ಠೆ, ಕಲಶಾಭಿಷೇಕ, ಗುಳಿಗ ಸನ್ನಿಧಿ ಹಾಗೂ ಕರಿಚಾಮುಂಡಿ ದೈವದ ಸನ್ನಿಧಿಯಲ್ಲಿ ದೇವಕ್ರಿಯಾ ತಂಬಿಲ, ಶ್ರೀ ಮಹಾಗಣಪತಿ ಸಹಿತ ಚಂಡಿಕಾ ಮಹಾಯಾಗ ನಡೆಯಿತು.
ಈ ಸಂದರ್ಭದಲ್ಲಿಸಹಸ್ರ ಮಾತೆಯರಿಂದ ಸಹಸ್ರಕಂಠ ಲಲಿತ ಸಹಸ್ರನಾಮ ಪಾರಾಯಣ ನಡೆಯಿತು.
ಬೆಳಿಗ್ಗೆ ವೃಷಭ ಲಗ್ನದಲ್ಲಿ ಮಂಗಲದರ್ಶನ, ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಚೈತನ್ಯ ಬ್ರಹ್ಮಕಲಶೋತ್ಸವ, ಸೀಯಾಳಾಭಿಷೇಕ, ವಸೋರ್ಧಾರ ಸಹಿತ ಚಂಡಿಕಾ ಮಹಾಯಾಗದ ಪೂರ್ಣಾಹುತಿ, ಶ್ರೀ ದೇವರಿಗೆ ಅಲಂಕಾರ ಸಹಿತ ಮಹಾಪೂಜೆ, ಬ್ರಹ್ಮಸಂತರ್ಪಣೆ, ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಗುಳಿಗ ದೈವದ ಭಂಡಾರ ತೆಗೆದು, ಶ್ರೀ ಗುಳಿಗರಾಜ ದೈವದ ಕೋಲ, ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ರಂಗಪೂಜೆ, ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತನಲಿ, ಕಟ್ಟೆಪೂಜೆ, ಶ್ರೀ ದರ್ಶನಬಲಿ, ದೈವ – ದೇವರ ಭೇಟಿ, ಬಟ್ಟಲುಕಾಣಿಕೆ, ಶ್ರೀಮುಡಿ ಗಂಧಪ್ರಸಾದ ನಡೆಯಲಿದೆ.
ಮಾ.7ರಂದು ಬೆಳಿಗ್ಗೆ ಶ್ರೀ ದೇವರಿಗೆ ನವಕ ಕಲಶಾಭಿಷೇಕ, ಎಳನೀರು ಅಭಿಷೇಕ, ಮಧ್ಯಾಹ್ನ ಶ್ರೀ ದೇವರಿಗೆ ಮಹಾಪೂಜೆ, ಸಂಪ್ರೋಕ್ಷಣೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ ಸಾಯಂಕಾಲ ಪೂಜೆ, ರಾತ್ರಿ ಪೂಜೆ, ನಿರ್ಮಾಲ್ಯ ವಿಸರ್ಜನೆ ನಡೆಯಲಿದೆ.
ಮಾ‌.9ರಂದು ಬೆಳಿಗ್ಗೆ ಶ್ರೀ ಪ್ರಸನ್ನಾಂಜನೇಯ ಸ್ವಾಮಿಗೆ ಉಷ:ಪೂಜೆ ನಡೆಯಲಿದೆ.
48 ಗಂಟೆಗಳ ಕಾಲ ನಿರಂತರವಾಗಿ ನಡೆಯಲಿರುವ ಅಖಂಡ ಭಜನಾ ಕಾರ್ಯಕ್ರಮ : ಶ್ರೀ ಪ್ರಸನ್ನಾಂಜನೇಯ ಸ್ವಾಮಿ ಹಾಗೂ ಗುಳಿಗರಾಜ ಕ್ಷೇತ್ರದ ಚೈತನ್ಯ ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ಜಾತ್ರೋತ್ಸವದ ಪ್ರಯುಕ್ತ 48 ಗಂಟೆಗಳ ಕಾಲ ನಿರಂತರ ಅಖಂಡ ಭಜನಾ ಸೇವೆಯು ಮಾ.07ರಂದು ಸೂರ್ಯೋದಯದಿಂದ ಮಾ.09ರಂದು ಬೆಳಗ್ಗಿನ ತನಕ ನಡೆಯಲಿದೆ.
ಮಾ.07ರಂದು ಬೆಳಿಗ್ಗೆ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೊಕ್ತೇಸರರಾದ ಗುರುರಾಜ್ ಭಟ್ ಅವರು ದೀಪಪ್ರಜ್ವಲನೆ ಮಾಡಲಿದ್ದಾರೆ. ಅಖಂಡ ಭಜನಾ ಸಮಿತಿ ಗೌರವಾಧ್ಯಕ್ಷರಾದ ಜಯರಾಮ ರೈ ಜಾಲ್ಸೂರು, ಸುಳ್ಯ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ ಅವರು ಗೌರವ ಉಪಸ್ಥಿತರಿರಲಿದ್ದಾರೆ.
48 ಗಂಟೆಗಳ ಅಖಂಡ ಭಜನಾ ಸೇವೆಯು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಜಾಲ್ಸೂರು ವಲಯದ ನಿರ್ದೇಶನದಲ್ಲಿ ಶ್ರೀ ಪ್ರಸನ್ನಾಂಜನೇಯ ಬ್ರಹ್ಮಕಲಶ ಅಖಂಡ ಭಜನಾ ಸೇವಾ ಸಮಿತಿ ಅಂಜನಾದ್ರಿಯ ನಿರ್ವಹಣೆಯಲ್ಲಿ ಜರುಗಲಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading