Ad Widget

ಸಮಸ್ತ ಪಬ್ಲಿಕ್ ಪರೀಕ್ಷೆ – ಬೆಳ್ಳಾರೆಯ ಪಳ್ಳಿಮಜಲು ಮದರಸಕ್ಕೆ ಶೇ.100 ಫಲಿತಾಂಶ

ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ ನಡೆಸಿದ 2025-26ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಬೆಳ್ಳಾರೆ ಗ್ರಾಮದ ಪಳ್ಳಿಮಜಲು ಸಿರಾಜುಲ್ ಹುದಾ ಸೆಕೆಂಡರಿ ಮದರಸಕ್ಕೆ ಶೇ.100 ಫಲಿತಾಂಶ ಬಂದಿದೆ. ಈ ಮದರಸದ ಪ್ಲಸ್ ಟು ವಿಭಾಗದ ಫಾತಿಮತ್ ಶಮ್ನ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ದ್ವಿತೀಯ ಸ್ಥಾನವನ್ನು ಆಯಿಶತ್ ರಾಶಿದ ಪಡೆದುಕೊಂಡಿದ್ದಾರೆ. ಸಾಜಿದಾ ಡಿಸ್ಟಿಂಕ್ಷನೊಂದಿಗೆ ತೇರ್ಗಡೆಗೊಂಡಿದ್ದಾರೆ. 5ನೇ ತರಗತಿಯ ಪಹೀಮ್ ಅಹಮದ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, 5ನೇ ತರಗತಿಯ ತನ್ವೀರ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 7ನೇ ತರಗತಿಯ ಮುಹಮ್ಮದ್ ಶಮ್ಮಾಸ್ ಎಸ್.ಬಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು,ದ್ವಿತೀಯ ಸ್ಥಾನವನ್ನು ಮುಹಮ್ಮದ್ ಜಝೀಲ್ ಪಡೆದುಕೊಂಡಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading