Ad Widget

ಪರ್ಲೆಡಿ – ಅಂಬೆಕಲ್ಲು ಕಾಂಕ್ರೀಟ್ ರಸ್ತೆ ಉದ್ಘಾಟನೆ

ದೇವಚಳ್ಳ ಗ್ರಾಮದ ಪರ್ಲೆಡಿ – ಅಂಬೇಕಲ್ಲು ಕಾಂಕ್ರೀಟ್ ರಸ್ತೆಯ ಉದ್ಘಾಟನೆ ಫೆ.17 ರಂದು ರಸ್ತೆಯ ಫಲಾನುಭವಿ ಹಾಗೂ ಹಿರಿಯರಾದ ಬಾಲಪ್ಪ ನಾಯ್ಕರವರು ಟೇಪ್ ಎಳೆಯುವ ಮೂಲಕ ನೆರವೇರಿಸಿದರು. 

. . . . . . . . .

ಪದ್ಮನಾಭ ಗೌಡ ಅಂಬೆಕಲ್ಲುರವರು ದೀಪ ಬೆಳಗಿ, ನಾರಾಯಣ ನಾಯ್ಕ ಪರ್ಲೆಡಿ ತೆಂಗಿನಕಾಯಿ ಒಡೆದರು. 

. . . . . . .

ದೇವಚಳ್ಳ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿ ರಸ್ತೆ ನಿರ್ಮಾಣ ಮತ್ತು ಯೋಜನೆಯ ವಿವರಗಳನ್ನು ನೀಡಿ ತಮಗೆ 20 ವರ್ಷಗಳ ಕಾಲ ಪಂಚಾಯತ್ ಸದಸ್ಯರಾಗಿ ಜನಸೇವೆ ಮಾಡಲು ಹಾಗೂ ದಾಖಲೆಯ ಯೋಜನೆಗಳನ್ನು ತಂದು ಅನುಷ್ಠಾನಗೊಳಿಸಲು ಅವಕಾಶ ನೀಡಿದಕ್ಕಾಗಿ ಧನ್ಯವಾದ ಅರ್ಪಿಸಿದರು. 

ಕುಸುಮಾಧರ ಪರ್ಲೆಡಿ ಮಾತನಾಡಿ “ಶೈಲೇಶ್ ಅಂಬೆಕಲ್ಲುರವರು ಒಬ್ಬ ಅಭಿವೃದ್ಧಿಯ ಹರಿಕಾರರಾಗಿ ನಮ್ಮ ಭಾಗಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ವಿಶೇಷ ಅಭಿನಂದನೆಗಳು” ಎಂದರು. 

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಮತಿ ಅಶ್ವಿನಿ ಅಂಬೆಕಲ್ಲು, ರಾಜೇಶ್ ಅಂಬೆಕಲ್ಲು, ಸತೀಶ್ ಗುಡ್ಡೆ, ಫಲಾನುಭವಿಗಳಾದ ಮನಮೋಹನ್ ಅಂಬೆಕಲ್ಲು, ಪ್ರಶಾಂತ್ ಅಂಬೆಕಲ್ಲು, ಗಣೇಶ್ ಪರ್ಲೆಡಿ, ಹಿತನ್ ಅಂಬೆಕಲ್ಲು ಮೊದಲಾದವರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading