Ad Widget

ಹರಿಹರ ಪಳ್ಳತ್ತಡ್ಕ : ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಉದ್ಘಾಟನಾ ಕಾರ್ಯಕ್ರಮ

ಹರಿಹರ ಪಳ್ಳತ್ತಡ್ಕ ಗ್ರಾಮದ ಕಲ್ಲೇಮಠ ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಉದ್ಘಾಟನಾ ಕಾರ್ಯಕ್ರಮವು ಫೆ.12ರಂದು ನಡೆಯಿತು.
ನಿವೃತ್ತ ಉಪನ್ಯಾಸಕರಾದ ರಾಮಚಂದ್ರ ಪಳಂಗಾಯ ರವರು ತೆಂಗಿನಕಾಯಿ ಒಡೆಯುವ ಮೂಲಕ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀಧರ ಭಾಗವತ್ ರವರು ದೀಪ ಬೆಳಗಿಸುವ ಮೂಲಕ ಗ್ರಾಮ ಪಂಚಾಯತ್ ಗ್ರಂಥಾಲಯ ಮತ್ತು ಅರಿವು ಕೇಂದ್ರವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ಪಳಂಗಾಯ ರವರು “ಉತ್ತಮ ಗ್ರಂಥಾಲಯವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ” ಎಂದು ಹೇಳುತ್ತಾ ಗ್ರಂಥಾಲಯದಿಂದ ಆಗುವ ಪ್ರಯೋಜನಗಳನ್ನು ವಿವರಿಸಿದರು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ ರವರು ಹಾಗೂ ಮಾಜಿ ಅಧ್ಯಕ್ಷರಾದ ಹಿಮ್ಮತ್.ಕೆ.ಸಿ ರವರು ಮಾತನಾಡುತ್ತಾ ಗ್ರಂಥಾಲಯದ ಮಹತ್ವದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಿಜಯ ಕುಮಾರ್ ಅಂಙಣ, ಉಪಾಧ್ಯಕ್ಷರಾದ ಜಯಂತ ಬಾಳುಗೋಡು, ಸದಸ್ಯರಾದ ಪೃಥ್ವಿಚಂದ್ರ ಮುಂಡಾಜೆ, ಬಿಂದು.ಪಿ, ಪದ್ಮಾವತಿ ಕಲ್ಲೇಮಠ, ಶಿಲ್ಪಾ ಕೊತ್ನಡ್ಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶ್ಯಾಮ್ ಪ್ರಸಾದ್, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಿಮ್ಮತ್.ಕೆ.ಸಿ, ಗ್ರಂಥಾಲಯ ಸಲಹಾ ಸಮಿತಿಯ ಸದಸ್ಯರು, ಸಚಿನ್ ಕ್ರೀಡಾ ಸಂಘದ ಅಧ್ಯಕ್ಷರಾದ ಮನೀಶ್ ಪಲ್ಲತ್ತಡ್ಕ ಹಾಗೂ ಸದಸ್ಯರು, ಗುತ್ತಿಗೆದಾರರಾದ ಯತೀಶ್ ವಾಡ್ಯಪ್ಪನಮನೆ ಹಾಗೂ ರಾಧಾಕೃಷ್ಣ ಕಟ್ಟೆಮನೆ, ಹರಿಹರ ಪಳ್ಳತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ದೇವಕಿ ನೆತ್ತಾರ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ವೆಂಕಟೇಶ್ ನಾಯಕ್, ಬಾಳುಗೋಡು ಪ್ರಾಥಮಿಕ ಶಾಲಾ ಶಿಕ್ಷಕರಾದ ಶುಭಾ, ಅಂಗನವಾಡಿ ಕಾರ್ಯಕರ್ತರಾದ ಹರಿಣಿ.ಹೆಚ್.ಜಿ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆ ವೇದಾವತಿ, ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ನಿರ್ದೇಶಕರಾದ ರಾಜೇಶ್ ಪರಮಲೆ, ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಇಂದಿರಾಂಭ.ಎಸ್.ಎನ್, ಪ್ರಿಯಾ ಕಲ್ಲೇಮಠ, ಜಯಕುಮಾರ್ ಕಲ್ಲೇರಿಕಟ್ಟ ಹಾಗೂ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಮೇಲ್ವಿಚಾರಕರಾದ ಚಂದ್ರಿಕಾ ರವರು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ಪಿ.ಡಿ.ಓ ಶ್ಯಾಮ್ ಪ್ರಸಾದ್ ರವರು ಸ್ವಾಗತಿಸಿ ಧನ್ಯವಾದ ಸಮರ್ಪಿಸಿದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading