Ad Widget

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ – ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ನಡೆದ ಒಂದು ವಾರದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ನ.01 ರಂದು ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಷನ್(ರಿ.) ಸುಳ್ಯ ಇದರ ಕಾರ್ಯದರ್ಶಿಗಳು ಹೇಮನಾಥ ಕೆ.ವಿ ಯವರು ವಹಿಸಿ, ಶಿಬಿರಾರ್ಥಿಗಳಿಗೆ ಗ್ರಾಮೀಣ ಜೀವನ ಶೈಲಿ, ಸಮಯ ಪ್ರಜ್ಞೆ ಹಾಗೂ ಸೇವಾ ಮನೋಭಾವ ಅರಿಯಲು ಇಂತಹ ಎನ್.ಎಸ್.ಎಸ್ ಶಿಬಿರ ಅವಶ್ಯಕ ಎಂದು ಶಿಬಿರದ ಪ್ರಾಮುಖ್ಯತೆಯನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪನಾ ಸಮಿತಿ ಶ್ರೀ ಸದಾಶಿವ ದೇವಸ್ಥಾನ ಆಲೆಟ್ಟಿ ಇದರ ಮಾಜಿ ಅಧ್ಯಕ್ಷರಾದ ತೀರ್ಥಕುಮಾರ್ ಕುಂಚಡ್ಕ, ಆಲೆಟ್ಟಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಕೃಪಾಶಂಕರ್ ತುದಿಯಡ್ಕ, ರೋಟರಿ ಕ್ಲಬ್ ಸಿಟಿ ಸುಳ್ಯದ ಅಧ್ಯಕ್ಷರಿಂದ ಹೇಮಂತ್ ಕಾಮತ್, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ. ವಿನಯ್ ಶಂಕರ್ ಭಾರಧ್ವಾಜ್ ಹಾಗೂ ಎನ್.ಎಸ್.ಎಸ್ ಘಟಕದ ನಾಯಕರುಗಳಾದ ಕು. ಸ್ಪಂದ ಹಾಗೂ ಮಿ. ರೋಹನ್ ಎಲ್ ಗೌಡ ಇವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಶಿಬಿರದ ತಂಡಗಳಿಗೆ ಪ್ರಶಸ್ತಿಯನ್ನು ನೀಡಲಾಯಿತು. ಕಾಲೇಜಿನ ಸಂಹಿತ ಸಿದ್ಧಾಂತ ವಿಭಾಗದ ಪ್ರಾಧ್ಯಾಪಕಿಯಾದ ಡಾ. ದೇವಿಕಾ ಶೆಟ್ಟಿ ಹಾಗೂ ಬಳಗದವರು ಪ್ರಾರ್ಥಿಸಿ, ಶಿಬಿರಾರ್ಥಿಗಳಾದ ಕು. ಐಶ್ವರ್ಯ ಸುಭಾಷ್ ರಾಯ್ಕರ್ ಸ್ವಾಗತಿಸಿ, ಕು. ಅನುಪ್ರಿಯ ಆರ್ ಹಾಗೂ ಚಂದನ್ ಕೆ.ಎಲ್ ಕಾರ್ಯಕ್ರಮವನ್ನು ನಿರೂಪಿಸಿ, ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಯೋಜನಾಧಿಕಾರಿ ಡಾ. ಪ್ರಮೋದ ಪಿ.ಎ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading