Ad Widget

ಸುಳ್ಯ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಚುಟುಕು ಕವಿಗೋಷ್ಠಿ ಹಾಗೂ ಸಂಗೀತ ಸಂಭ್ರಮ

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಿತೇಶ್ ಸಂಗೀತ ಬಳಗ ಐವರ್ನಾಡು, ಸುಳ್ಯ ಇದರ ವತಿಯಿಂದ ಚುಟುಕು ಕವಿಗೋಷ್ಠಿ ಮತ್ತು ಸಂಗೀತ ಸಂಭ್ರಮ-2025 ಕಾರ್ಯಕ್ರಮವು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ನ ಸಭಾಂಗಣದಲ್ಲಿ ನ.02 ರಂದು ನಡೆಯಿತು.
ಸ್ವಾಗತವನ್ನು ಅಮಿತಾ ಲಾವಂತಡ್ಕ ಮಾಡಿದರು.
ಪುಷ್ಪಾವತಿ ಡಿ.ಪ್ರಾರ್ಥನೆ ನೆರವೇರಿಸಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿತೇಶ್ ಸಂಗೀತ ಬಳಗ ಐವರ್ನಾಡು, ಸುಳ್ಯ ಇದರ ಸದಸ್ಯರಾದ ಪ್ರಸಾದ್ ಕೆಮ್ಮಿಂಜೆ ವಹಿಸಿದ್ದರು.
ದೀಪ ಪ್ರಜ್ವಲನೆಯನ್ನು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಸಂಧ್ಯಾ ಉಬರಡ್ಕ ಮಾಡಿದರು.
ಜಿತೇಶ್ ಸಂಗೀತ ಬಳಗ ಐವರ್ನಾಡು, ಸುಳ್ಯ ಇದರ ಅಧ್ಯಕ್ಷರಾದ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ವೇದಿಕೆಯಲ್ಲಿ ಉಪಸ್ಥಿತಿಯಲ್ಲಿದ್ದರು.
ಸಭಾ ಕಾರ್ಯಕ್ರಮದ ನಂತರ ಗಾಯನ ಸಮನ್ವಯತೆ ನಡೆಯಿತು.
ಗಾಯಕರಾದ ಪುಷ್ಪಾವತಿ ಡಿ, ಎಂ.ಎ.ಮುಸ್ತಫಾ ಬೆಳ್ಳಾರೆ, ಶಯನಾ, ಶುಭಾ ರೈ ಪುತ್ತೂರು, ಸಾವಿತ್ರಿ ದೊಡ್ಮನೆ, ಧೃತಿ ಲಾವಂತಡ್ಕ, ವಿಜಯಕುಮಾರ್ ಕಾಣಿಚ್ಚಾರ್, ಪ್ರಮೀಳಾ ರಾಜ್, ಗಿರೀಶ್ ಪೆರಿಯಡ್ಕ, ಸುರೇಶ್ ರಾವ್ ಮಂಗಳೂರು, ಅಮಿತಾ ಲಾವಂತಡ್ಕ ಇವರ ಕನ್ನಡದ ಸಂಗಮ ವರ್ಣನೆಯ ಭಾವಗೀತೆಗಳು ಗಾಯನ ಚಂದಪೂರ್ಣ ಅಲೆಯಲ್ಲಿ ತೇಲಿಸಿತು.
ನಂತರ ಹಿರಿಯ ಕವಿಗಳಾದ ನಾರಾಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ಚುಟುಕು ಕವಿಗೋಷ್ಠಿ ನಡೆಯಲ್ಪಟ್ಟಿತು.
ಕವಿಗಳಾದ ಪುಷ್ಪಾವತಿ ಡಿ, ಎಂ.ಎ.ಮುಸ್ತಫಾ ಬೆಳ್ಳಾರೆ, ಶುಭಾ ರೈ ಪುತ್ತೂರು, ವಿಜಯಕುಮಾರ್ ಕಾಣಿಚ್ಚಾರ್, ಗಿರೀಶ್ ಪೆರಿಯಡ್ಕ, ತೇಜಸ್ವಿನಿ, ಸುಮಂಗಲಾ ಲಕ್ಷ್ಮಣ್ ಚುಟುಕುಗಳನ್ನು ವಾಚಿಸಿದರು.
ಈ ಸಾಹಿತ್ಯ,ಸಂಗೀತ ಸಂಭ್ರಮದಲ್ಲಿ ಶುಭಾ ರೈ ಪುತ್ತೂರು ನಿರೂಪಣೆಗೈದು ಧನ್ಯವಾದ ಸಲ್ಲಿಸಿದರು.

ವರದಿ : ಎಂ.ಎ.ಮುಸ್ತಫಾ ಬೆಳ್ಳಾರೆ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading