ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಪಂಜದಲ್ಲಿ ಚಾಲನೆ

ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್(ರಿ.) ವತಿಯಿಂದ ಪಂಚಸಪ್ತತಿ ಸ್ವಚ್ಚತಾ ಅಭಿಯಾನ 2025, 75 ದಿನಗಳ ಸ್ವಚ್ಚತಾ ಅಭಿಯಾನದ ಚಾಲನೆಯನ್ನು ಅ.10 ರಂದು ಬೆಳಿಗ್ಗೆ 6:15ಕ್ಕೆ ಪಂಜದ ಹೃದಯ ಭಾಗದಲ್ಲಿರುವ ಬಸ್ಸು ತಂಗುದಾಣದಲ್ಲಿ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ಅಧ್ಯಕ್ಷರಾದ ಪವನ್ ಪಲ್ಲತ್ತಡ್ಕ ಇವರು ಚಾಲನೆಯನ್ನು ನೀಡಿ ಏಕದಿನದಲ್ಲಿ‌ ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಮತ್ತು ಸುಳ್ಯ ತಾಲೂಕಿನ ನೋಂದಾಯಿತ ಯುವಕ ಯುವತಿ ಮಂಡಲಗಳ ಆಶ್ರಯದಲ್ಲಿ ಇಂದು ಪಂಚ ಸಪ್ತತಿ 2025 ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದು  ತಿಳಿಸಿದ್ದಾರೆ.
ಪಂಜ ಬಸ್ಸು ತಂಗುದಾಣದ ಸ್ವಚ್ಛತೆಯನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷರಾದ ಹಿತೇಶ್ ಪಂಜದಬೈಲು, ಕಾರ್ಯದರ್ಶಿ ಶಶಿದಾಸ್ ನಾಗತೀರ್ಥ, ಪಂಜ ಗ್ರಾಮ ಪಂಚಾಯತ್ ನ ಸದಸ್ಯರಾದ ಚಂದ್ರಶೇಖರ ದೇರಾಜೆ, ಯುವಜನ ಸಂಯುಕ್ತ ಮಂಡಳಿ(ರಿ.) ಸುಳ್ಯ ಇದರ ನಿರ್ದೇಶಕರಾದ ಜನಾರ್ಧನ ನಾಗತೀರ್ಥ, ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading