Ad Widget

ಸುಳ್ಯ : ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ದಿವಸ್

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇದರ ಹಿಂದಿ ವಿಭಾಗದ ವತಿಯಿಂದ  2025-26 ನೇ ಸಾಲಿನ “ಹಿಂದಿ ದಿವಸ್ ಸಮಾರೋಹ್” ಕಾರ್ಯಕ್ರಮವು ಸೆ.18 ರಂದು ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತೀಶ್ ಎನ್.ಪಿ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ.ದುರ್ಗಾರತ್ನ.ಸಿ ರವರು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾಲೇಜಿನ ಹಿಂದಿವಿಭಾಗದ ಮುಖ್ಯಸ್ಥರಾದ
ಶ್ರೀ ರಾಮಕೃಷ್ಣ ಕೆ.ಎಸ್ ರವರು ಕಾರ್ಯಕ್ರಮದ ಪ್ರಾಸ್ತಾವಿಕತೆ ಯೊಂದಿಗೆ ಸರ್ವರನ್ನು ಸ್ವಾಗತಿಸಿದರು.
ಜೊತೆಗೆ ವೇದಿಕೆಯಲ್ಲಿ ಹಿಂದಿ ಸಂಘದ ಅಧ್ಯಕ್ಷ ಗೌತಮ್ ಎಂ.ಬಿ ಹಾಗೂ ಕಾರ್ಯದರ್ಶಿ ವಕ್ಷಿತ.ಎಚ್ ರವರು ಉಪಸ್ಥಿತರಿದ್ದರು.
ಹಾಗೆಯೇ ಈ ಕಾರ್ಯಕ್ರಮದಲ್ಲಿ ಕಳೆದ ವರುಷ ಕಾಲೇಜಿನಲ್ಲಿ ಹಿಂದಿ ವಿಭಾಗ ಹಾಗೂ ವಿಭಾಗ ಅಧ್ಯಕ್ಷರ ವತಿಯಿಂದ ನಡೆಸಿರುವ “ಉಚಿತ ಸ್ಪೋಕನ್ ಹಿಂದಿ ಸರ್ಟಿಫಿಕೇಟ್ ಕೋರ್ಸ್” ನ ಪ್ರಮಾಣ ಪತ್ರಗಳನ್ನು ಹಾಗೂ 2024-25ನೇ ಸಾಲಿನ ಹಿಂದಿ ಭಾಷೆಯಲ್ಲಿ ಪ್ರತಿ ತರಗತಿಯ ಅತ್ಯಂತ ಅಧಿಕ ಅಂಕಗಳಿಸಿದ  ವಿದ್ಯಾರ್ಥಿಗಳಿಗೆ ಉಡುಗೊರೆ ಗಳನ್ನು, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಮದ್ರಾಸ್ ವತಿಯಿಂದ ಆಯೋಜಿಸುವ ಹಿಂದಿ ಪರೀಕ್ಷೆಗಳನ್ನು ವಿಭಾಗ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಕೆ.ಎಸ್ ರವರ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಬರೆದಿದ್ದು, ಅದರ ಅಂಕಪಟ್ಟಿಯ ವಿತರಣೆಯನ್ನು, ಹಾಗೆ ಹಿಂದಿ ದಿವಸದ ಪೂರ್ವಭಾವಿಯಾಗಿ ಅನೇಕ ಸ್ಪರ್ಧೆಗಳನ್ನು ಹಿಂದಿ ಹಾಗೂ ಕನ್ನಡ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದು, ಅದರಲ್ಲಿ ವಿಜೇತರಿಗೆ ಬಹುಮಾನ ವಿತರಣೆಗಳನ್ನು ಮಾಡಲಾಯಿತು.
ಹಿಂದಿ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಕೆ.ಎಸ್ ಪ್ರಸ್ತಾವನೆ ಗೈದು ಸ್ವಾಗತಿಸಿದರು.
ವಕ್ಷಿತಾ ವಂದಿಸಿದರು.
ಪ್ರತೀಕ್ಷಾ ಮೋಕಾಶಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಮೈತ್ರಿ.ಎನ್ ಹಾಗೂ ಕಾರ್ತಿಕ್ ಕುಮಾರ್ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.
ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಹಿಂದಿ ದಿವಸ್ ಕಾರ್ಯಕ್ರಮ ಪೂರ್ಣಗೊಂಡಿತು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading