“ಎಂ.ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ”ಯ ಫಲಿತಾಂಶ ಪ್ರಕಟ ; ಸೆ.27 ರಂದು ಬಹುಮಾನ ವಿತರಣೆ ಕಾರ್ಯಕ್ರಮ ; ಬಹುಮಾನಿತರ ವಿವರ ಇಲ್ಲಿದೆ

ಚೆಂಬು ಸಾಹಿತ್ಯ ವೇದಿಕೆಯ ವತಿಯಿಂದ ಏರ್ಪಡಿಸಲಾಗಿದ್ದ 7ನೇ ವರ್ಷದ “ಎಂ.ಜಿ ಕಾವೇರಮ್ಮ ಅರೆಭಾಷೆ ಕವನ ಸ್ಪರ್ಧೆ”ಯ ಫಲಿತಾಂಶವು ಪ್ರಕಟಗೊಂಡಿದ್ದು, ಸ್ಪರ್ಧೆಗೆ ಬಂದಂತಹ 35 ಕವಿತೆಗಳಲ್ಲಿ 3 ಕವಿತೆಗಳನ್ನು ಬಹುಮಾನಕ್ಕಾಗಿ ಆಯ್ಕೆ ಮಾಡಲಾಗಿದೆ. ಸ್ಪರ್ಧೆಗೆ ಬಂದಂತಹ ಉಳಿದೆಲ್ಲಾ ಕವಿತೆಗಳನ್ನು ಬರೆದವರಿಗೆ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು ಎಂದು ಸ್ಪರ್ಧೆಯ ಆಯೋಜಕರು ತಿಳಿಸಿದ್ದಾರೆ.
ಕವಿತೆಗಳ ಮೌಲ್ಯಮಾಪಕರಾಗಿ ಕವಯಿತ್ರಿ ಶ್ರೀಮತಿ ಸ್ಮಿತಾ ಅಮೃತರಾಜ್ ಉಪಸ್ಥಿತರಿದ್ದರು.
ಬಹುಮಾನಗಳ ಪ್ರಾಯೋಜಕರಾಗಿ ಬಾರಿಯಂಡ ಜೋಯಪ್ಪ ಹಾಗೂ ಶ್ರೀಮತಿ ಚಂದ್ರಾವತಿ ಬಡ್ಡಡ್ಕ ತಲಾ 1 ಸಾವಿರ ರೂಪಾಯಿಗಳನ್ನು ನೀಡಿದ್ದಾರೆ.
ಪ್ರಥಮ ಬಹುಮಾನ ಜೀವನ್ ಪುರ ರವರು ಬರೆದಂತಹ “ಬೊದ್ಕು ಬಾಳೆಲೆನಂಗೆ” ಕವಿತೆಗೆ, ದ್ವಿತೀಯ ಬಹುಮಾನ ವಿಮಲಾರುಣ ಪಡ್ಡಂಬೈಲು ರವರು ಬರೆದಂತಹ “ಆಟಿ” ಕವಿತೆಗೆ ಹಾಗೂ ತೃತೀಯ ಬಹುಮಾನ ಬಿಟ್ಟೀರ ಚೋಂದಮ್ಮ ಬೆಂಗಳೂರು ಇವರು ಬರೆದಂತಹ “ನೆಂಪೇ ಬಾತ್ಲೆ” ಕವಿತೆಗೆ ಲಭಿಸಿದೆ.
ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆಗಳಾಗಿ ಸೀತಾರಾಮ ಕೇವಳ ರವರು ಬರೆದಂತಹ “ಇದ್ದದ್ ಇಲ್ಲದ್”, ಓಂ.ಶ್ರೀ ದಯಾನಂದ ರವರು ಬರೆದಂತಹ “ಸತ್ತಲಿಗೆನೇ ಸಾಯಲಿ ನಾನ್”, ಶಿವದೇವಿ ಅವನೀಶ್ಚಂದ್ರ ಅವರು ಬರೆದಂತಹ “ಇದ್ ಬಾಳುವವದ ಬದ್ಕ್”, ಮಮತಾ ಪಡ್ಡಂಬೈಲು ರವರು ಬರೆದಂತಹ “ತವರ್’ನ ಹಾಡ್”, ಯೋಗೀಶ್ ಹೊಸೊಳಿಕೆ ರವರು ಬರೆದಂತಹ “ನೆನ್ಪಾದೆ ನಂಗೆ ಒಂದೊಂದೆ”, ಎಂ.ಕೆ ಧನಲಕ್ಷ್ಮಿ ರವರು ಬರೆದಂತಹ “ಶಿಕ್ಷಣ ಬ್ರಹ್ಮ”, ಗೋಪಾಲಕೃಷ್ಣ ಮೂಟೇರ ರವರು ಬರೆದಂತಹ “ಮಲ್ಲಿಗೆಯ ಗೂಡೆ”, ಕಟ್ರತನ ಲಲಿತಾ ರವರು ಬರೆದಂತಹ “ಬಲಿಪಶುಗ”, ಲೋಹಿತಾಶ್ವ ಕೊಯಿಂಗಾಜೆ ರವರು ಬರೆದಂತಹ “ಕಾಡ್ ಕರೆ ಕವನ”, ರೆಷ್ಮಾ ಮನೋಜ್ ಕುಕ್ಕನೂರು ರವರು ಬರೆದಂತಹ “ನನ್ನರಸ ಇಂದ್ ಬಾದೋ”, ಅನನ್ಯ ಸುಬ್ರಹ್ಮಣ್ಯ ರವರು ಬರೆದಂತಹ “ಮೊಡ್ಪಲೆಲಿ ಸೂರ್ಯ”, ಬೃಂದಾ ಕುದ್ಪಾಜೆ ರವರು ಬರೆದಂತಹ “ನಾನ್ ನನ್ನ ಮಗಳ್”, ದರ್ಶನ್ ಕೊಳಿಮಾಡು ರವರು ಬರೆದಂತಹ “ಕೊಂಡಾಟಲಿ ಸಾಕಿದ ಕೂಸುನ ಬೊದ್ಕು” ಹಾಗೂ ಜಯಶ್ರೀ ರಾಮಚಂದ್ರ ಪಲ್ಲತಡ್ಕ ರವರು ಬರೆದಂತಹ “ಜೋಗುಳ ಪದ” ಕವಿತೆಗಳು ಆಯ್ಕೆಯಾಗಿವೆ.
ಈ ಸ್ಪರ್ಧೆಯ ಬಹುಮಾನ ವಿತರಣೆಯು ಸೆಪ್ಟೆಂಬರ್ 27 ಶನಿವಾರದಂದು ಪೂರ್ವಾಹ್ನ 10:30ಕ್ಕೆ ಸುಳ್ಯದ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಲಿರುವ ಸಂಧ್ಯಾರಶ್ಮಿ ಸಾಹಿತ್ಯ ಸಂಘದ ತಿಂಗಳ ಸಾಹಿತ್ಯ ಕಾರ್ಯಕ್ರಮದಲ್ಲಿ ನಡೆಯಲಿದೆ ಎಂದು ಸ್ಪರ್ಧೆಯ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading