ಐವರ್ನಾಡು : ಸುಳ್ಯ ತಾಲೂಕು ಮಟ್ಟದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟ

. . . . . . . . .

ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಐವರ್ನಾಡು ಇದರ ಸಂಯುಕ್ತ ಆಶ್ರಯದಲ್ಲಿ ಸುಳ್ಯ ತಾಲೂಕು ಮಟ್ಟದ 14ರ ವಯೋಮಾನದ ಬಾಲಕ ಬಾಲಕಿಯರ ಖೋ ಖೋ ಪಂದ್ಯಾಟವು ಸೆ.1 ರಂದು ನಡೆಯಿತು.
ಪಂದ್ಯಾಟ ವನ್ನು ಶ್ರೀಮತಿ ಜೋತ್ಸ್ನಾ ಪಾಲೆಪಾಡಿ ಯವರು ಉದ್ಘಾಟಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಅರೆಬಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಸದಾನಂದ ಮಾವಜಿ ಅವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಕ್ಕಳಲ್ಲಿ ಆರೋಗ್ಯದ ಜೊತೆಗೆ ಶಿಸ್ತು ಮತ್ತು ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿ ಖೋ ಖೋ ಆಡುವುದರ ಮೂಲಕ ದೊರಕುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಖೋ ಖೋ ತೀರ್ಪುಗಾರರಾಗಿ ಆಯ್ಕೆಗೊಂಡ ಶ್ರೀ ವೀರನಾಥ ಬೆಳ್ಳಾರೆಯವರನ್ನು ಸನ್ಮಾನಿಸಲಾಯಿತ್ತು.
ಬಾಲಕರ ವಿಭಾಗದಲ್ಲಿ ಐವರ್ನಾಡು ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಹಾಗೂ ವಿದ್ಯಾಬೋಧಿನಿ ಪ್ರೌಢಶಾಲೆ ದ್ವಿತೀಯ ಸ್ಥಾನ ಗಳಿಸಿತು. ಬಾಲಕಿಯರ ವಿಭಾಗದಲ್ಲಿಯೂ ಐವರ್ನಾಡು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪ್ರಥಮ ಸ್ಥಾನ ಗಳಿಸಿ ಪಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ ಸ್ಥಾನ ಗಳಿಸಿತ್ತು. ಬಾಲಕರ ವಿಭಾಗದಲ್ಲಿಆಲ್ ರೌಂಡರ್ ಆಟಗಾರನಾಗಿ ಗೌರವ್ ಪಿ.ಸಿ ಹಾಗೂ ಉತ್ತಮ ಓಟಗಾರನಾಗಿ ಮಹೇಶ್ ಎಸ್ ಹಾಗೂ ಬಾಲಕಿಯರಲ್ಲಿ ಆಲ್ ರೌಂಡರ್ ಆಟಗಾರ್ತಿಯಾಗಿ ಆರ್ಯ ಸತೀಶ ಹಾಗೂ ಉತ್ತಮ ಓಟಗಾರ್ತಿಯಾಗಿ ಕದಿ ಜತುಲ್ ಶಾಹಿನ ವೈಯಕ್ತಿಕ ಚಾಂಪಿಯನ್ ಪಡೆದುಕೊಂಡರು. ಎಸ್. ಡಿ.ಎಂ. ಸಿ ಅಧ್ಯಕ್ಷರಾದ ಶ್ರೀ ಹೊನ್ನಪ್ಪ ನಾಯ್ಕ ಉದ್ದಂಪಾಡಿ ಅಧ್ಯಕ್ಷತೆ ವಹಿಸಿದರು . ಖೋ ಖೋ ಪಂದ್ಯಾಟದ ಸಂಘಟನಾ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ದಿನೇಶ್ ಮಡ್ತಿಲ ಸ್ವಾಗತಿಸಿ ಪ್ರಾಸ್ತಾವಿಸಿದರು . ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀ ಬಾಲಕೃಷ್ಣ ಕೀಲಾಡಿ ,ಸದ್ಯಸ್ಯರಾದ ಶ್ರೀ ಸುಂದರ ಲಿಂಗಂ , ಶ್ರೀಮತಿ ಗೀತಾ ಕಟ್ಟತಾರು ಶ್ರೀ ಯೋಗೇಶ್ ಕಲ್ಲಗದ್ದೆ , ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಸೂಪಿ ಪೆರಾಜೆ ,ಕ್ಲಸ್ಟರ್ ಸಿ.ಅರ್.ಪಿ ಅನುರಾಧ , ಮುಖ್ಯೋಪಾಧ್ಯಾಯರಾದ ಶ್ರೀಮತಿ ಹೇಮಾವತಿ, ವೀರಪ್ಪಗೌಡ ಮೊಟ್ಟೆ ,ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಮಾಲತಿ .ಬಿ ಮೊದಲಾದವರು ಉಪಸ್ಥಿತರಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading