Ad Widget

ಕೇರಳದಲ್ಲಿ 7.25 ಕೋಟಿ ಖೋಟಾ ನೋಟು ಪತ್ತೆ – ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಪೊಲೀಸರ ವಶಕ್ಕೆ

. . . . . . .

2 ಸಾವಿರ ಮುಖಬೆಲೆಯ 7.25 ಕೋಟಿ ರೂ ಪತ್ತೆಯಾದ ಘಟನೆ ಕಾಸರಗೋಡು ಜಿಲ್ಲೆಯ ಕಾಞಾಂಗಾಡ್ ಸಮೀಪ ಅಂಬಲತರ ಪಾರಪಳ್ಳಿ ಗುರುಪುರದ ಬಾಡಿಗೆ ಮನೆಯೊಂದರಲ್ಲಿ ನಡೆದಿದೆ. ತನಿಖೆಯ ವೇಳೆ ಇವೆಲ್ಲವೂ ಖೋಟಾ ನೋಟುಗಳು ಎಂದು ಹೇಳಲಾಗುತ್ತಿದೆ.

ಸುಳ್ಯ ನಿವಾಸಿ ಸುಲೈಮಾನ್ ಸಹಿತ ಹಾಗೂ ಇಬ್ಬರನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.

ಅಂಬಲತರ ಠಾಣಾ ವ್ಯಾಪ್ತಿಯ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು ಸುಳ್ಯದ ಸುಲೈಮಾನ್ ಹಾಗೂ ಪೆರಿಯಾ ನಿವಾಸಿ ಅಬ್ದುಲ್ ರಜಾಕ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದರು. ಪ್ರಕರಣದಲ್ಲಿ ಪುತ್ತೂರಿನ ವ್ಯಕ್ತಿ ಓರ್ವರ ಕೈವಾಡ ಇರುವುದು ತನಿಖೆ ವೇಳೆ ಪೊಲೀಸರಿಗೆ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!