Ad Widget

ಝೀ ಕನ್ನಡ ಯುವರತ್ನ ಪ್ರಶಸ್ತಿ ಪಡೆದ ಗೀತಾ ಗುಡ್ಡೆಮನೆ

ರಾಷ್ಟ್ರೀಯ ಕ್ರೀಡಾಪಟು, ಸುಳ್ಯದವರಾದ ಗೀತಾ ಗುಡ್ಡೆಮನೆ ಅವರು ಝೀ ಮೀಡಿಯಾ ಸಂಸ್ಥೆಯ ಝೀ ಕನ್ನಡ ಯುವರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಗೀತಾ ಅವರ ಅಕಾಡೆಮಿಕ್ ಸಾಧನೆ ಮತ್ತು ಕ್ರೀಡಾ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

. . . . . . . . .

ಇವರು ಅಮರಪಡ್ನೂರು ಗ್ರಾಮದ ಕಂದಡ್ಕದ ದಿ. ಆನಂದ ಗೌಡ ಮತ್ತು ಶ್ರೀಮತಿ ಜಯ ದಂಪತಿಗಳ ಪುತ್ರಿ.

. . . . . . .

ಈ ಹಿಂದೆ ದಾವಣಗೆರೆ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದ ಇವರು ಪ್ರಸ್ತುತ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರಾಗಿದ್ದಾರೆ. ರಾಷ್ಟ್ರೀಯ ಕಬಡ್ಡಿ ಆಟಗಾರ್ತಿಯಾಗಿ, ರಾಜ್ಯ ಮಹಿಳಾ ಕಬಡ್ಡಿ ತಂಡದಲ್ಲಿ ಆಡಿದ್ದರಲ್ಲದೆ, ಮಹಿಳಾ ಕಬಡ್ಡಿ ತಂಡದ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದರು. ಪ್ರಸ್ತುತ ಮೈಸೂರು ವಿಶ್ವ ವಿದ್ಯಾಲಯದ ಪಿ.ಎಚ್.ಡಿ. ಸ್ಕಾಲರ್ ಆಗಿದ್ದಾರೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading