Ad Widget

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಕೆವಿಜಿ ಸಮೂಹ ಸಂಸ್ಥೆ ಇದರ ವತಿಯಿಂದ ಸುಳ್ಯ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಮಾ.7ರಂದು ನಡೆಯಿತು.ಕರ್ನಾಟಕ ಸರ್ಕಾರದ ಮೀನುಗಾರಿಕಾ ಸಹಾಯಕ ನಿರ್ದೇಶಕಿ ಮಿಲನ ಕೆ. ಭರತ್ ಉದ್ಘಾಟಿಸಿದರು.

. . . . . . . . .

ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಲಿಬರಲ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಕೆ ವಿ ಚಿದಾನಂದ ವಹಿಸಿದರು. ಅಕಾಡೆಮಿ ಲಿಬರಲ್ ಎಜುಕೇಶನ್ ಸೊಸೈಟಿ ಉಪಾಧ್ಯಕ್ಷೆ ಶೋಭ ಚಿದಾನಂದ, ಕೆವಿಜಿ ಆಯುರ್ವೇದ ಪ್ರಾಂಶುಪಾಲರಾದ ಡಾ.ಲೀಲಾದರ್, ಅಕಾಡೆಮಿ ಲಿಬರಲ್ ಎಜುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಐಶ್ವರ್ಯ, ಸಾಂದೀಪ್ ವಿಶೇಷ ಮಕ್ಕಳ ಸಂಚಾಲಕಿ ಹರಿಣಿ ಸದಾಶಿವ ಮೊದಲಾದವರು ಉಪಸ್ಥಿತರಿದ್ದರು.

. . . . . . .

ಇದೇ ಸಂಸ್ಥೆ ಉದ್ಯೋಗಿಗಳಿಗೆ ಅರೋಗ್ಯ ಕಾರ್ಡ್ ವಿತರಿಸಲಾಯಿತು.ಕಾರ್ಯಕ್ರಮದ ಆರಂಭದಲ್ಲಿ ಡಾ.ಸ್ಮೀತಾ‌ ತಂಬಾನ್ ಮತ್ತು ಡಾ.ಅನಿತಾ ಪಾರ್ಥಿಸಿದರು. ಡಾ.ಹರ್ಷಿತ ಎಂ ಸ್ವಾಗತಿಸಿ ಡಾ.ದಿಪ್ತಿ ,ಲತಾಶ್ರೀ ಸುಪ್ರಿತ್ ಕಾರ್ಯಕ್ರಮ ನಿರೂಪಿಸಿದರು. ಮಿಥಾಲಿ ರೈ ಧನ್ಯವಾದ ಸಮರ್ಪಣೆ ಮಾಡಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading