Ad Widget

ಗುಂಗುರು ಕೂದಲಿನ ಸಮಸ್ಯೆಯೇ? ಹಾಗಾದರೆ ಇದನ್ನು ಪಾಲನೆ ಮಾಡಿ

ಗುಂಗುರು ಕೂದಲನ್ನು ಸರಿಯಾಗಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸವೆಂದು ಕೆಲವರು ಭಾವಿಸುತ್ತದೆ ಆದರೆ ಅದು ಕಷ್ಟದ ಕೆಲಸವಲ್ಲ. ಕೂದಲು ಸುಕ್ಕುಗಟ್ಟಲು ತೇವಾಂಶದ ಕಾರಣವು ಆಗಿರಬಹುದು. ಗುಂಗುರು ಕೂದಲು ಹೆಚ್ಚಿನವರಿಗೆ ಚೆನ್ನಾಗಿಯೇ ಕಾಣಿಸುತ್ತದೆ. ಅದರೆ ಆ ಕೂದಲನ್ನು ಕೆಲವರಂತೂ ಕಷ್ಟವೆಂದೇ ಭಾವಿಸುತ್ತಾರೆ.

. . . . . . .

ಆದರೆ ವಿಪರ್ಯಾಸವೇನೆಂದರೆ ತೇವಾಂಶ ಹೊಂದಿದ ವಾತಾವರಣವು ನಿಮ್ಮ ಕೂದಲನ್ನು ಇನ್ನಷ್ಟು ಒರಟಾಗಿಸುತ್ತದೆ. ಹಾಗಾದರೆ ಕೂದಲನ್ನು ಹೊಳೆಯುವಂತೆ ನಯವಾಗಿಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಸಾಕು.

ನೈಸರ್ಗಿಕ ಎಣ್ಣೆಯನ್ನು ಬಳಸಬೇಕು:

ಬಾದಾಮಿ, ಜೊಜೋಬ (Seed oil), ತೆಂಗಿನಕಾಯಿ ಎಣ್ಣೆಗಳು ನಿಮ್ಮ ನೆತ್ತಿ ಹಾಗೂ ಕೂದಲನ್ನು ಪೋಷಿಸಲು ಸಹಾಯಕವಾಗಿದೆ. ನಿಮ್ಮ ನೆತ್ತಿಗೆ ಇಂತಹ ನೈಸರ್ಗಿಕ ಎಣ್ಣೆಯನ್ನು ಹಾಕಿಕೊಂಡು ಚೆನ್ನಾಗಿ ಮಸಾಜ್ ಮಾಡಿ. ಸುಮಾರು 30 ನಿಮಿಷಗಳ ನಂತರ ಚೆನ್ನಾಗಿ ತೊಳೆಯಿರಿ. ಇದು ನಿಮ್ಮ ಕೂದಲಿಗೆ ಹಾಗೂ ನೆತ್ತಿಯ ಚರ್ಮಕ್ಕೆ ಉತ್ತಮ ಆರೋಗ್ಯವನ್ನು ಒದಗಿಸುತ್ತದೆ. ಬಾದಾಮಿ ಮತ್ತು ತೆಂಗಿನ ಎಣ್ಣೆಯ ಮಿಶ್ರಣದಿಂದ ನೆತ್ತಿಗೆ ಚೆನ್ನಾಗಿ ಮಸಾಜ್ ಮಾಡುವುದರಿಂದ ಇದು ನಿಮ್ಮ ಕೂದಲಿನ ತಲೆಹೊಟ್ಟು ಹಾಗೂ ಒಣಗುವಿಕೆಯನ್ನು ತಡೆಗಟ್ಟುತ್ತದೆ.

ಕೂದಲನ್ನು ಅತಿಯಾಗಿ ತೊಳೆಯಬಾರದು :

ಸ್ಯಾಂಪನ್ನು ಹೆಚ್ಚಾಗಿ ಬಳಸುವುದರಿಂದ ನಿಮ್ಮ ಕೂದಲಿನಲ್ಲಿರುವ ನೈಸರ್ಗಿಕ ಎಣ್ಣೆ ಅಂಶವು ಕಡಿಮೆಯಾಗುತ್ತದೆ. ಇದರಿಂದಾಗಿ ನಿಮ್ಮ ಕೂದಲಿನ ಹೊಳಪು ಕಡಿಮೆಯಾಗಬಹುದು. ಆದ್ದರಿಂದ ಕೂದಲನ್ನು ಪ್ರತಿದಿನ ತೊಳೆಯದೆ, ವಾರಕ್ಕೆ ಎರಡು ಅಥವಾ ಮೂರು ಬಾರಿ ತೊಳೆಯುವುದು ಸೂಕ್ತ. ಇದು ನಿಮ್ಮ ಕೂದಲನ್ನು ನೈಸರ್ಗಿಕವಾಗಿರಿಸಿ, ತೇವಾಂಶವನ್ನು ಉಳಿಸಿಕೊಳ್ಳುತ್ತಾ, ಕೂದಲಿನ ಬಲವನ್ನು ಹೆಚ್ಚಿಸುತ್ತದೆ.

ಕಂಡೀಶನರ್ ಉಪಯೋಗಿಸಬೇಕು :

ತಲೆ ಕೂದಲಿಗೆ ಶಾಂಪು ಮಾಡುವಾಗ ¤ªÀÄä ಕೂದಲಿನ ‌ ಹೊರಪೊರೆಯನ್ನು ತೆರೆದು ಕೊಳಕು ಹಾಗೂ ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಆದ್ದರಿಂದ ಶಾಂಪು ಮಾಡಿದ ನಂತರ ಕಂಡಿಶನಲ್ ಹಚ್ಚಬೇಕು. ಇದು ನಿಮ್ಮ ಕೂದಲಿನ ಹೊರಪದರಗಳನ್ನು ಮುಚ್ಚುವುದರಿಂದ ಕೂದಲಿನ ಬುಡದಲ್ಲಿ ಒದ್ದೆಯ ಅಂಶವನ್ನು ಹೊರಹೋಗದಂತೆ ತಡೆಯುತ್ತದೆ.

ಕ್ರೀಮ್, ಸೀರಂಗಳನ್ನು ಬಳಸಿ:

ಕೆಲವೊಂದು ಕ್ರೀಮ್, ಸ್ಪ್ರೇ ಹಾಗೂ ಸೀರಂಗಳು ಕೂದಲು ಹೊರಟಾಗುವುದನ್ನು ತಡೆಗಟ್ಟುತ್ತದೆ. ಯುಟ್ಯೂಬ್ ಬಳಸುವುದರಿಂದ ಕೂದಲು ಸುಕ್ಕುಗಟ್ಟುವುದನ್ನು ಎದುರಿಸಬಹುದು.

ಹೀಟ್ ಪ್ರೊಟೆಕ್ಷನ್ ಸ್ಪ್ರೇ :

ನಿಮ್ಮ ಕೂದಲು ತೇವವಾಗಿರುವ ಸಂದರ್ಭದಲ್ಲಿ ಪೂರ್ತಿ ಕೂದಲಿಗೆ ಹೀಟ್ ಪ್ರೊಟೆಕ್ಷನ್ ಸ್ಪ್ರೇಯನ್ನು ಬಳಸಿ. ನಂತರ ಪ್ಯಾಡಲ್ ಬ್ರಷ್ ನಿಂದ ಕೂದಲನ್ನು ಒಣಗಿಸುವ ಮೂಲಕ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಿ. ನಿಮ್ಮ ಕೂದಲನ್ನು ಸ್ಟೈಲಿಂಗ್ ಉಪಕರಣಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸಿಕೊಳ್ಳಿ. ಹೇರ್ ಸ್ಟ್ರೇಟನರ್ ಬಳಸುವುದಾದರೆ, ಇದರ ಮೊದಲು ಹೀಟ್ ಪ್ರೊಡಕ್ಷನ್ಸ್ ಸ್ಪ್ರೇಯನ್ನು ಬಳಸಲು ಮರೆಯದಿರಿ.

ದಿಂಬಿನಲ್ಲಿ ಹತ್ತಿಯ ಪರ್ಯಾಯ ರೇಷ್ಮೆಯ ಕವರನ್ನು ಬಳಸಿ :

ಹತ್ತಿಯಿಂದ ಮಾಡಲ್ಪಟ್ಟ ದಿಂಬಿನ ಕವರ್ ನಿಮ್ಮ ಕೂದಲು ಮತ್ತು ನೆತ್ತಿಯಿಂದ ಎಣ್ಣೆಯಂಶಗಳನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ಕೂದಲು ಒಡೆಯುವುದು ಮತ್ತು ಉದುರುವುದು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಹತ್ತಿಯ ಬದಲು ರೇಷ್ಮೆಯ ದಿಂಬಿನ ಕವರ್ ಬಳಸುವುದರಿಂದ ಇಂತಹ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

7. ಅಗಲವಾದ ಹಲ್ಲಿನ ಬಾಚಣಿಗೆಗಳನ್ನು ಬಳಸಿ :

ಸೂಕ್ಷ್ಮ ಹಲ್ಲಿರುವ ಬಾಚಣಿಗೆಗಳು ಅದರ ಹಲ್ಲುಗಳ ಮಧ್ಯೆ ಹೆಚ್ಚು ಅಂತರವಿರದ ಕಾರಣ ಹೆಚ್ಚಿನ ಘರ್ಷಣೆಯನ್ನು ಉಂಟು ಮಾಡಿ ಕೂದಲನ್ನು ಹಾನಿಗೊಳಿಸುತ್ತದೆ. ಹಾಗಾಗಿ ಅಗಲ ಹಲ್ಲುಗಳ ವಿಶಾಲ ಸ್ಥಳವನ್ನು ಹೊಂದಿರುವ ಬಾಚಾಣಿಗೆಯನ್ನು ಬಳಸುವುದರಿಂದ ಕೂದಲು ಒಡೆಯುವುದನ್ನು ತಡೆಯಬಹುದು. ಹಾಗೂ ಇದು ಕೂದಲನ್ನು ಬಿಡಿಸಲು ಸುಲಭವಾಗುತ್ತದೆ.

8. ಮೈಕ್ರೋ ಫೈಬರ್ ಟವಲ್ ಉಪಯೋಗಿಸಿ:

ಸಾಮಾನ್ಯ ಟವಲ್ಗಳು ನಿಮ್ಮ ಕೂದಲಿನ ಹೊರಪೊರೆಗಳಿಗೆ ಹಾನಿ ಮಾಡುವ ಮೂಲಕ ಕೂದಲು ಒಡೆಯಬಹುದು. ಹಾಗೂ ಕೂದಲು ಉದುರುವ ಸಮಸ್ಯೆಗಳು ಕೂಡ ಹೆಚ್ಚಾಗಬಹುದು. ಆದರೆ ನಾವು ಮೃದುವಾಗಿರುವ ಮೈಕ್ರೋಫೈಬರ್ ಟವಲ್ ಗಳನ್ನು ಬಳಸುವುದರಿಂದ ಇಂತಹ ಸಮಸ್ಯೆಗಳಿಂದ ಪಾರಾಗಬಹುದು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!