Ad Widget

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಕ್ರೀಡಾಪಟುಗಳಿಗೆ ಸನ್ಮಾನ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಇತ್ತೀಚೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ಜರಗಿದ ಮಂಗಳೂರು ವಿಶ್ವವಿದ್ಯಾಲಯ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಹುಡುಗರ ಹಾಗೂ ಹುಡುಗಿಯರ ವಿಭಾಗದಲ್ಲಿ ಕೆ. ಎಸ್. ಎಸ್. ಕಾಲೇಜಿನ ಹುಡುಗರು ಹಾಗೂ ಹುಡುಗಿಯರು ತೃತೀಯ ಸ್ಥಾನವನ್ನ ಗಳಿಸಿರುತ್ತಾರೆ.

. . . . .

ಆ ನಿಟ್ಟಿನಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನವರು ಮಂಗಳವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ವಿಜೇತರಾದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡಿರುವರು. ವಿಜೇತರಾದ ಹುಡುಗರ ವಿಭಾಗದಲ್ಲಿ ಸುಮಂತ್ 1 ಬಿಎ ,ಜೀವನ್ 1 ಬಿ ಕಾಮ್, ವರುಣ್ 1ಬಿ ಕಾಂ, ದಿಶಾಂತ್ 2 ಬಿಎ, ರಕ್ಷಿತ್ 3ಬಿಕಾಂ ,ವಿಜಯ್ ಕುಮಾರ್ 3 ಬಿಕಾಂ, ಹುಡುಗಿಯರ ವಿಭಾಗದಲ್ಲಿ ಅರ್ಚನಾ 1ಬಿಕಾಂ, ಪುನೀತ 1 ಬಿಕಾಂ ,ಪ್ರತಿಕ್ಷ 1 ಬಿ ಕಾಂ, ಪ್ರಗತಿ 2 ಬಿ ಕಾಮ್, ದೀಕ್ಷಾ3 ಬಿ ಎ ,ಹಾಗೂ ಹಂಪಿಕಂ 3 ಬಿಕಾಂ ಆಗಿರುತ್ತಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ರಾಮಚಂದ್ರ ಪಳಂಗಾಯ ವಹಿಸಿದ್ದು ಅವರು ಮಾತನಾಡುತ್ತಾ ಹಿಂದೆ ಗುರುವಿದ್ದು ಮುಂದೆ ಗುರಿ ಇದ್ದಾಗ ಗುರಿ ತಲುಪಲು ಸಾಧ್ಯ ಎಂದು ನುಡಿದರು. ಕುಕ್ಕೆ ಸುಬ್ರಮಣ್ಯ ಲಯನ್ಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ಪ್ರೊ. ರಂಗಯ್ಯ ಶೆಟ್ಟಿಗಾರ್ ಪ್ರಾಸ್ತಾವಿಕ ಮಾತುಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಕೆ. ಎಸ್ .ಎಸ್. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ದಿನೇಶ್ ಮಾತನಾಡಿ ಲಯನ್ಸ್ ಕ್ಲಬ್ಬಿನವರು ನೀಡುವ ಸನ್ಮಾನ ಚಿಕ್ಕದಾದರೂ ಮನಸ್ಸು ದೊಡ್ಡದಾಗಿರುತ್ತದೆ ಅಲ್ಲದೆ ಇದು ಕ್ರೀಡಾಪಟುಗಳಿಗೆ ಮುಂದೆ ರಾಷ್ಟ್ರಮಟ್ಟದಲ್ಲಿ ಕ್ರೀಡಾ ಪ್ರತಿಭೆಗಳಾಗಿ ಹೊರಹೊಮ್ಮಲು ಪ್ರೇರೇಪಿಸುತ್ತದೆ ಎಂದರು. ಲಯನ್ಸ್ ಕ್ಲಬ್ ಖಜಾಂಜಿ ಚಂದ್ರಶೇಖರ ಪಾಣೆತ್ತಿಲ್ ವೇದಿಕೆಯಲ್ಲಿದ್ದರು. ಲಯನ್ಸ್ ಕ್ಲಬ್ಬಿನ ಸದಸ್ಯರುಗಳಾದ ಪ್ರಕಾಶ್ ಶೆಟ್ಟಿ ,ಕೃಷ್ಣಕುಮಾರ್ ಬಾಳುಗೋಡು, ದಿನೇಶ್ ಎಂಪಿ, ಮೋಹನ್ದಾಸ್ ರೈ ಸಭೆಯಲ್ಲಿ ಇದ್ದರು . ಕ್ಲಬ್ಬಿನ ಸದಸ್ಯ ಪವನ್ ಪ್ರಾರ್ಥಿಸಿದರು. ಕ್ಲಬ್ ಕಾರ್ಯದರ್ಶಿ ಸತೀಶ ಕೂಜುಗೂಡು ಸ್ವಾಗತಿಸಿದರು. ಕ್ಲಬ್ಬಿನ ಸದಸ್ಯೆ ವಿಮಲ ರಂಗಯ್ಯ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಕ್ಲಬ್ಬಿನ ಉಪಾಧ್ಯಕ್ಷ ಅಶೋಕ್ ಮೂಲೆ ಮಜಲು ಧನ್ಯವಾದ ಸಮರ್ಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!