ಮಾಣಿಬೆಟ್ಟು ಎಂಬಲ್ಲಿ ನಿರ್ಮಾಣವಾಗಿರುವ ಶ್ರೀ ಮಲೆಚಾಮುಂಡಿ, ಶ್ರೀ ಗುಳಿಗ ಹಾಗು ಶ್ರೀ ಭೈರವ ದೈವಗಳ ನೂತನ ಕಟ್ಟೆಗಳಲ್ಲಿ ದೈವಗಳ ಪ್ರತಿಷ್ಠಾ ಕಾರ್ಯಕ್ರಮ ಹರೀಶ್ ಭಟ್ ಹೊಸ್ಮಾರ್ ಹಾಗೂ ಆನಂದ ನಾಯ್ಕ ಕೋಣಕಜೆಯವರ ನೇತೃತ್ವದಲ್ಲಿ ಡಿ.6ರಿಂದ ಡಿ.9ರವರೆಗೆ ನಡೆಯಲಿದೆ.
ಡಿ.೬ರಂದು ಸಾಯಂಕಾಲ ಗಂಟೆ 7-೦೦ರಿಂದ ದೇವತಾ ಪ್ರಾರ್ಥನೆ, ಗುರುಗಣೇಶ ಪೂಜೆ, ಸ್ವಸ್ತಿ ಪಂಚಗವ್ಯ, ಪುಣ್ಯಾಹವಾಚನ, ಆಚಾರ್ಯವರಣ, ಸುದರ್ಶನ ಹೋಮ, ಉಚ್ಛಾಟನೆ, ಸಪ್ತಶುದ್ಧಿ, ರಾಕ್ಷೆಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ದಿಗ್ಗಲಿ, ಬಿಂಬ ಶುದ್ಧಿ, ಅಧಿವಾಸಾಧಿ ನಡೆಯಲಿದೆ.
ಡಿ.7ರಿಂದ ಪ್ರಾತಃಕಾಲ 7-15ರ ಶುಭಲಗ್ನದಲ್ಲಿ ಶ್ರೀ ಮಲೆಚಾಮುಂಡಿ ಹಾಗೂ ಶ್ರೀ ಗುಳಿಗ ದೈವದ ಪ್ರತಿಷ್ಠೆ ಕಾರ್ಯಕ್ರಮ ಹಾಗೂ ಸ್ವಸ್ತಿ ಪಂಚಗ್ರವ್ಯ, ಪುಣ್ಯಾಹವಾಚನ, ಗಣಹೋಮ, ಪ್ರಾಯಶ್ಚಿತ್ಯಾದಿ ಹೋಮಗಳು, ಪ್ರತಿಷ್ಠಾದಿವಾಸ, ಪ್ರತಿಷ್ಠೆ, ನವಕಲಶಾಭಿಷೇಕ, ಮೂರ್ತಿ ಪ್ರಸನ್ನ ಪೂಜೆ, ಪ್ರಸಾದ ವಿತರಣೆ. ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.
ಡಿ.೦9ರಂದು ಪೂರ್ವಾಹ್ನ ಗಂಟೆ 8-೦೦ರಿಂದ ಆನಂದ ನಾಯ್ಕ ಇವರ ನೇತೃತ್ವದಲ್ಲಿ ಶ್ರೀ ಭೈರವ ದೈವದ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ.
- Sunday
- November 24th, 2024