ಸಂಪಾಜೆ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಮತಿ ಶಕ್ತಿವೇಲು ಅಧ್ಯಕ್ಷತೆಯಲ್ಲಿ ನಡೆಯಿತು ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಪದ್ಮಾವತಿ ಮಂಡಿಸಿದರು ಮಾಜಿ ಪಂಚಾಯತ್ ಸದಸ್ಯರಾಗಿ ಮೃತರಾದ ಷಣ್ಮುಗಂ ರವರಿಗೆ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಿ ಶ್ರದ್ದಾಂಜಲಿ ಅರ್ಪಿಸಲಾಯಿತು. ಸಭೆಯಲ್ಲಿ ಕುಡಿಯುವ ನೀರು, ಬೀದಿ ದೀಪಗಳ ಕೋಟೇಸನ್ ಅಪ್ರೋವ್, ಒಣ ಮತ್ತು ಹಸಿ ಕಸ ಬೆರ್ಪಡಿಸಿ ಕೊಡದಿದ್ದರೆ ಸ್ವೀಕರಿಸದಿರಲು ತೀರ್ಮಾನಿಸಲಾಯಿತು ಮನೆ ತೆರಿಗೆ ವಸೂಲಿ, ತೆರಿಗೆ ಬಗ್ಗೆ ಸರ್ವೆ ಕಾರ್ಯಕ್ರಮ ನಡೆಸುವುದು.. ಸಾರ್ವಜನಿಕ ಅರ್ಜಿ ಪರಿಶೀಲನೆ ಮಾಡಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಸದಸ್ಯರುಗಳಾದ ಸೋಮಶೇಖರ್ ಕೊಇಂಗಾಜೆ, ಜಿ. ಕೆ ಹಮೀದ್ ಗೂನಡ್ಕ ಜಗದೀಶ್ ರೈ ಸುಂದರಿ ಮುಂಡಡ್ಕ, ಅಬೂಸಾಲಿ,ವಿಮಲಾ ಪ್ರಸಾದ್, ಸವಾದ್, ರಜನಿ ಶರತ್, ಅನುಪಮಾ, ಲಿಸ್ಸಿ ಮೊನಾಲಿಸಾ, ಸುಶೀಲ ವಿಜಯ ಕುಮಾರ್ ಉಪಸ್ಥಿತರಿದ್ದರು
- Saturday
- November 23rd, 2024