Ad Widget

ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪೃಥ್ವಿ ತಳೂರುಗೆ ಬೆಳ್ಳಿ ಪದಕ

ಕರ್ನಾಟಕ ರಾಜ್ಯ ವೈಟ್ ಲಿಫ್ಟರ್ಸ್ ಅಸೋಸಿಯೇಷನ್ ವತಿಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಪರ್ಪುಂಜ ನಿವಾಸಿ ಪೃಥ್ವಿ ತಳೂರು ಬೆಳ್ಳಿ ಪದಕ ಪಡೆದಿದ್ದಾರೆ.ನವಂಬರ್ 18, 19ರಂದು ಈ ಸ್ಪರ್ಧೆ ನಡೆಯಿತು. ಪೃಥ್ವಿಯವರು 45 ಕೆಜಿ ವಿಭಾಗದಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನಿಯಾಗಿದ್ದಾರೆ.ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾಗಿರುವ ಪೃಥ್ವಿ ಮೂಲತಹ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ತಳೂರಿನವರು. ದಿ. ಗೋಪಾಲಕೃಷ್ಣರಾವ್- ಸುಲೋಚನಾ ದಂಪತಿಯ ಮೊಮ್ಮಗಳು. ಪರ್ಪುಂಜದಲ್ಲಿರುವ ಸೌಗಂಧಿಕಾ ನರ್ಸರಿಯ ಮಾಲಕ ಚಂದ್ರ ಸೌಗಂಧಿ ಕ ಹಾಗೂ ವಿದ್ಯಾ ಲಕ್ಷ್ಮಿ ದಂಪತಿಯ ಪುತ್ರಿ.2019-20 ರಲ್ಲಿ ಪ್ರೌಢಶಾಲಾ ವಿಭಾಗದ ಬಾಲಕಿಯರ ರಾಷ್ಟ್ರೀಯ ತ್ರೋಬಾಲ್ ಪಂದ್ಯಾಟದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪ್ರತಿನಿಧಿಯಾಗಿ ರಾಜ್ಯ ಮಟ್ಟದಲ್ಲಿ ಆಡಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಜೂನಿಯರ್ ಅಥ್ಲೆಟಿಕ್ ಮೀಟ್ – 2023ರಲ್ಲಿ ಹ್ಯಾಮರ್ ತ್ರೋ ದಲ್ಲಿ ಬೆಳ್ಳಿ ಪದಕ ಕರ್ನಾಟಕ ರಾಜ್ಯ ಅಮೆಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ಕಂಚಿನ ಪದಕ ಪದವಿ ಪೂರ್ವ ಬಾಲಕಿಯರ ಜಿಲ್ಲಾ ಮಟ್ಟದಲ್ಲಿ ಹ್ಯಾಮರ್ತು ಹ್ಯಾಮರ್ ತ್ರೋ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದಿರುವ ಪೃಥ್ವಿಯವರು ನವೆಂಬರ್ 28ರಂದು ಧಾರವಾಡದ ಆರ್. ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಹ್ಯಾಮರ್ ತ್ರೋ ಪಂದ್ಯದಲ್ಲಿ ಸ್ಪರ್ಧಿಸಲಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading