ಮಲ್ನಾಡು ಜಂಟಿ ಕ್ರಿಯಾ ಸಮಿತಿ (ರಿ) ಸುಳ್ಯ ಇದರ ಆಶ್ರಯದಲ್ಲಿ ಪ್ಲಾಟಿಂಗ್ (ಪೋಡಿ) ಬಾಕಿ, ಅರಣ್ಯದಂಚಿನ ನಿವಾಸಿಗಳು ಹಾಗೂ ಕೊವಿ ನವೀಕರಣ ಸಂತ್ರಸ್ತರ ಸಮಾಲೋಚನೆ ಸಭೆ ಇಂದು ಎಪಿಎಂಸಿ ಸಭಾಂಗಣದಲ್ಲಿ ಜರಗಿತು.ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಗ್ರಾಮಗಳ ಅರ್ಜಿದಾರರು, ಪ್ಲಾಟಿಂಗ್ ಬಾಕಿ 18 ಅರ್ಜಿ, ಕೋವಿ ನವೀಕರಣ 4. ಅರ್ಜಿಗಳು ಹಾಗೂ ಸಂಬಂಧಿಸಿದ ದಾಖಲಾತಿಯೊಂದಿಗೆ, ಮುಂದಿನ ಕಾನೂನು ಪ್ರಕ್ರಿಯೆಯಲ್ಲಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು. ಅರ್ಜಿದಾರರು ಕಳೆದ 10-15 ವರ್ಷಗಳಿಂದ ಸರಿಯಾದ ದಾಖಲೆಗಳು ಇದ್ದಾಗ್ಯೂ ಪ್ಲಾಟಿಂಗ್ ಬಾಕಿ ಬಗ್ಗೆ ಇಲಾಖಾ ಸಮಸ್ಯೆಗಳ ಅನುಭವ ವಿವರಿಸಿದರು. ಮಲೆನಾಡು ಜಂಟಿ ಕ್ರಿಯಾ ಸಮಿತಿ ಸಂಚಾಲಕ *ನ್ಯಾಯವಾದಿ ಪ್ರದೀಪ್ ಕುಮಾರ್ ಕೆಎಲ್*, ಕಾನೂನಾತ್ಮಕ ಸಲಹೆ ಹಾಗೂ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಿ, ಪ್ರತಿ ಎರಡು ವಾರಕ್ಕೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸಿ ಸರ್ವ ಅರ್ಜಿದಾರರು ಸಂಬಂಧಿಸಿದ ಇಲಾಖೆಯಲ್ಲಿ ವಿಮರ್ಶೆ ಪ್ರಕ್ರಿಯೆ ನಡೆಸುವ ಬಗ್ಗೆ ಚರ್ಚಿಸಿ ಕ್ರಮದ ಬಗ್ಗೆ ಹೆಚ್ಚುವರಿ ಅರ್ಜಿದಾರರು ಸಮಿತಿಯನ್ನು ಸಂಪರ್ಕಿಸಿ ಮುಂದಿನ ಸಭೆಯಲ್ಲಿ ಭಾಗವಹಿಸುವವರನ್ನು ಸೇರಿಸಿಕೊಂಡು ಮುಂದಿನ ನಿರಂತರ ಕಾನೂತ್ಮಕ ಲಿಖಿತ ಕ್ರಮದ ಬಗ್ಗೆ ಅಭಿಪ್ರಾಯಕ್ಕೆ ಬರಲಾಯಿತು.ಸಭೆಯಲ್ಲಿ ನಾರಾಯಣ ಅಜ್ಜಾವರ, ಆನಂದ ಅಮರ ಪಡ್ನೂರು, ಕುಶಾಲಪ್ಪ ನಾಲ್ಕೂರು, ಮಾಧವ ಅಮರಪಡ್ನೂರು, ರತ್ನಾಕರ ಅಜ್ಜಾವರ, ನಿತಿನ್ ನಡಗಲ್ಲು, ಧರ್ಮಪಾಲ ಗುತ್ತಿಗಾರು ಅಲ್ಲದೇ ಈ ಸಂದರ್ಭದಲ್ಲಿ ಮಲ್ನಾಡು ಜಂಟಿ ಕ್ರಿಯಾ ಸಮಿತಿ ಪ್ರವರ್ತಕ ಅಶೋಕ ಎಡಮಲೆ ಉಪಸ್ಥಿತರಿದ್ದು, ಶೃತಿ ಕೋನಡ್ಕಪದವು ಕಾರ್ಯಕ್ರಮ ನಿರೂಪಿಸಿದರು.
- Friday
- November 22nd, 2024