ಮಾಣಿ ಮೈಸೂರು ಚತುಷ್ಪತ ಕಾಮಗಾರಿ ಶೀಘ್ರ ಆರಂಭವಾಗಲಿದೆ ಹಾಗೂ ಸುಳ್ಯ ಬೈಪಾಸ್ ರಸ್ತೆಯೇ ನಿರ್ಮಾಣವಾಗಲಿದೆ ಎಂದು ವಾರದ ಹಿಂದೆ ಸುಳ್ಯದಲ್ಲಿ ಪತ್ರಕರ್ತರ ಜತೆ ಸಂಸದರಾದ ನಳೀನ್ ಕುಮಾರ್ ಕಟೀಲ್ ಹೇಳಿಕೆ ನೀಡಿದ್ದರು.
ಈ ಬಗ್ಗೆ ಆರ್ ಟಿ ಐ ಕಾರ್ಯಕರ್ತ ಡಿ.ಎಂ. ಶಾರೀಖ್ ಭೂ ಸ್ವಾಧೀನ ಅಧಿಕಾರಿಕಾರಿಗಳ ಜತೆ ದೂರವಾಣಿಯಲ್ಲಿ ವಿಚಾರಿಸಿದಾಗ ಈ ಬಗ್ಗೆ ನಮಗೆ ಪತ್ರಿಕೆ ನೋಡಿ ಗೊತ್ತಾಗಿದೆ. ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಬೈಪಾಸ್ ರಸ್ತೆಯ ಬಗ್ಗೆ ಕೂಡ ಸ್ಪಷ್ಟತೆ ಇಲ್ಲ. ರಸ್ತೆ ಅಗಲೀಕರಣ ಎರಡು ಬದಿಗೆ 40 ಮೀ ತೆರವುಗೊಳಿಸಬೇಕಾಗುತ್ತದೆ. ಭೂಸ್ವಾಧೀನ ಖಾಯಿದೆ 2013ರ ಪ್ರಕಾರ ಪರಿಹಾರವಾಗಿ ಸರಕಾರಿ ಮೌಲ್ಯಮಾಪನದ 2 ಪಟ್ಟು ಪರಿಹಾರ ಧನ ದೊರೆಯಲಿದೆ ಎಂದು ತಿಳಿಸಿದ್ದಾರೆ.